ಕೇಪ್ ಕೆನವೆರಲ್ (ಅಮೆರಿಕ): ಸ್ಪೇಸ್‌ಎಕ್ಸ್ (SpaceX) ತನ್ನ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International-Space-Station) ಕಳುಹಿಸಿದೆ. ಕೆಟ್ಟ ಹವಾಮಾನ ಸೇರಿದಂತೆ ವಿವಿಧ ಅಡೆತಡೆಗಳಿಂದಾಗಿ ಮುಂದೂಡಲ್ಪಟ್ಟಿದ್ದ ಕಾರ್ಯಾಚರಣೆ ಬುಧವಾರ ರಾತ್ರಿ ಯಶಸ್ವಿಯಾಗಿ ನಡೆದಿದೆ.
ನಿಧಾನಗತಿಯ ಮಳೆ ಬೀಳುತ್ತಿದ್ದ ಕಾರಣದಿಂದಾಗಿ ನಾಲ್ವರು ಗಗನಯಾತ್ರಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಅವರು 6 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇವರೆಲ್ಲ ಕಳೆಯಲಿದ್ದು, ಅವರನ್ನು ಎಲ್ಲ ತರಹದ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇದಕ್ಕೂ ಎರಡು ದಿನ ಮೊದಲು ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸುದೀರ್ಘ ಸಮಯ ಕಳೆದು ಭೂಮಿಗೆ ವಾಪಸ್ ಆಗಿದ್ದರು. ನಾಸಾ (NASA) ಗಗನಯಾತ್ರಿಗಳಾದ ಶೇನ್ ಕಿಂಬೆರೊ ಮತ್ತು ಮೇಗನ್ ಮ್ಯಾಕ್ ಆರ್ಥರ್, ಜಪಾನ್‌ನ ಅಕಿಹಿಟೊ ಹೊಶೈಡ್ ಮತ್ತು ಫ್ರಾನ್ಸ್‌ನ ಥಾಮಸ್ ಪೆಸ್ಕ್ವೆಟ್ ಎರಡು ದಿನಗಳ ಹಿಂದೆ ಸ್ಪೇಸ್‌ಎಕ್ಸ್ (SpaceX) ಕ್ಯಾಪ್ಸುಲ್‌ನಿಂದ ಭೂಮಿಗೆ ಮರಳಿದರು. ಬಾಹ್ಯಾಕಾಶ ಕೇಂದ್ರದಲ್ಲಿ 200 ದಿನಗಳನ್ನು ಕಳೆದ ನಂತರ ಅವರು ಹಿಂತಿರುಗಿದ್ದರು. ಅವರ ಯಶಸ್ವಿ ಆಗಮನದ ಬಳಿಕ ನಾಲ್ವರು ಹೊಸ ಗಗನಯಾತ್ರಿಗಳನ್ನ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಾಗಿದೆ.
-
#Crew3... 2... 1... and liftoff!
— NASA (@NASA) November 11, 2021 " class="align-text-top noRightClick twitterSection" data="
Three @NASA_Astronauts and one @ESA astronaut are on their way to the @Space_Station aboard the @SpaceX Crew Dragon Endurance: pic.twitter.com/dxobsFb4Pa
">#Crew3... 2... 1... and liftoff!
— NASA (@NASA) November 11, 2021
Three @NASA_Astronauts and one @ESA astronaut are on their way to the @Space_Station aboard the @SpaceX Crew Dragon Endurance: pic.twitter.com/dxobsFb4Pa#Crew3... 2... 1... and liftoff!
— NASA (@NASA) November 11, 2021
Three @NASA_Astronauts and one @ESA astronaut are on their way to the @Space_Station aboard the @SpaceX Crew Dragon Endurance: pic.twitter.com/dxobsFb4Pa
ಸ್ಪೇಸ್ ಎಕ್ಸ್ ಫಾಲ್ಕನ್-9 ಕ್ರ್ಯೂವ್ 3 (Falcon Crew-3) ಹೆಸರಿನ ಈ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿದೆ. ಇರದಲ್ಲಿ ರಾಜಾ ಚಾರಿ (Raja Chari), ಯುಎಸ್ ಏರ್ ಫೋರ್ಸ್ (US Air Force) ಯುದ್ಧ ವಿಮಾನ ಮತ್ತು ಪರೀಕ್ಷಾ ಪೈಲಟ್ ಮಿಷನ್ ಕಮಾಂಡರ್ (Pilot Mission Commander) ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಮಿಷನ್ ಸ್ಪೆಷಲಿಸ್ಟ್ ಕೈಲಾ ಬ್ಯಾರನ್ (Kayla Barron), ಯುಎಸ್ ನೌಕಾಪಡೆಯ ಜಲಾಂತರ್ಗಾಮಿ ಅಧಿಕಾರಿ (Navy submarine officer) ಮತ್ತು ಪರಮಾಣು ಇಂಜಿನಿಯರ್ ಆಗಿದ್ದಾರೆ. ತಂಡದ ಪೈಲಟ್ ಮತ್ತು ಎರಡನೇ - ಕಮಾಂಡ್ ಅನುಭವಿ ಗಗನಯಾತ್ರಿ ಟಾಮ್ ಮಾರ್ಷ್‌ಬರ್ನ್ (Tom Marshburn), ವೈದ್ಯ ಮತ್ತು ನಾಸಾದ ಮಾಜಿ ಫ್ಲೈಟ್ ಸರ್ಜನ್ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಅನುಭವವಿದೆ.
ಇವರ ಜೊತೆ ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಗಗನಯಾತ್ರಿ ಮಥಿಯಾಸ್ ಮೌರೆರ್ (Matthias Maurer) ಸಹ ಬಾಹ್ಯಾಕಾಶ ನಿಲ್ದಾಣಕ್ಕೆ ಜಿಗಿದಿದ್ದಾರೆ.
ಇದನ್ನೂ ಓದಿ: 737- MAX ವಿಮಾನ ಅಪಘಾತ: ಸಂತ್ರಸ್ತರಿಗೆ ಪರಿಹಾರದ ಭರವಸೆ ನೀಡಿದ ಬೋಯಿಂಗ್