ಸ್ಯಾನ್ ಪ್ರಾನ್ಸಿಸ್ಕೊ: ಇಂದು ಮೊಬೈಲ್ಗಳು ಮಕ್ಕಳಿಗೆ ಸುಲಭವಾಗಿ ಸಿಗುತ್ತಿವೆ. ಇದರಿಂದಾಗಿ ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿದೆ. ಹೊಸ ಹೊಸ ಸ್ನೇಹದ ಜೊತೆಗೆ ವಂಚನೆಯ ಜಾಲಕ್ಕೂ ಜನರು ಬಲಿಯಾಗುತ್ತಿದ್ದಾರೆ.
ಈ ಕುರಿತು ಇತ್ತೀಚಿನ ಅಧ್ಯಯನವೊಂದು ಮಾಹಿತಿ ಸಂಗ್ರಹಿಸಿ, ಪ್ರತಿ ಮೂರರಲ್ಲಿ ಇಬ್ಬರು ಸಾಮಾಜಿಕ ಮಾಧ್ಯಮಗಳ ಆ್ಯಪ್ಗಳ ವಂಚನೆಗೆ ಗುರಿಯಾಗುತ್ತಿದ್ದಾರೆ. ಸ್ನಾಪ್ಚಾಟ್ ಮಾತೃಸಂಸ್ಥೆಯಾದ ಸ್ನಾಪ್ ಪ್ರಕಾರ, ಸ್ನಾಪ್ಚಾಟ್, ಇನ್ಸ್ಟಾಗ್ರಾಂ, ಟ್ಯೂಬ್ಲರ್, ಟ್ವಿಟರ್ ಮತ್ತು ಫೇಸ್ಬುಕ್ ಮೂಲಕ ಯುವಕರು ಮೋಸದ ಜಾಲಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಯುವತಿಯರು ಕೂಡಾ ಹೊರತಾಗಿಲ್ಲ ಎಂದು ಫಾಕ್ಸ್ ಬ್ಯುಸಿನೆಸ್ ವರದಿ ಹೇಳಿದೆ.
ಯುವ ಜನತೆ ವಂಚನೆಗೆ ಒಳಗಾಗುವಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಸಮಸ್ಯೆಗಳನ್ನು ನಿಯಮಿತವಾಗಿ ಪೋಷಕರಿಗೆ ತಿಳಿಸಿದಾಗ ಸಮಸ್ಯೆಗೆ ಪರಿಹಾರ ನೀಡುವುದರಿಂದ ಅವರಲ್ಲಿ ನೆಮ್ಮದಿ ಮೂಡುತ್ತದೆ. ವಂಚನೆಗೆ ಒಳಗಾಗದವರು ಈ ಕುರಿತು ಸಹಾಯವಾಣಿಗಳಿಗೂ ದೂರು ನೀಡಬಹುದು. ಪೋಷಕರು ಮತ್ತು ನಂಬಿಕರ್ಹ ಸ್ನೇಹಿತರಿಗೆ ತಿಳಿಸುವುದು ಉತ್ತಮ ಎಂದು ನಾವು ಸಲಹೆ ನೀಡುತ್ತೇವೆ ಎಂದು ಡಚ್ ಚೈಲ್ಡ್ ಅಬ್ಯೂಸ್ ಹಾಟ್ಲೈನ್ ಮಾಜಿ ಅಧ್ಯಯನಕಾರ ಅರ್ಡ ಗೆರ್ಕೆನ್ಸ್ ತಿಳಿಸಿದ್ದಾರೆ.
ಈ ಸಂಬಂಧ 760 ಮಂದಿಯನ್ನು ಅಮೆರಿಕದಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದೆ. ಅಧ್ಯಯನದ ಅನುಸಾರ, ಶೇ 65ರಷ್ಟು ಯುವ ಜನತೆ ಸ್ನಾಪ್ ಚಾಟ್/ ಇತರೆ ಆ್ಯಪ್ಗಳ ಮೂಲಕ ತಾವು ಅಥವಾ ತಮ್ಮ ಸ್ನೇಹಿತರು ಇಂತಹ ವಂಚನೆ ಯೋಜನೆಗೆ ಬಲಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಇಲ್ಲವೇ ಇಂತಹ ವಂಚನೆಗೆ ಕ್ಯಾಟ್ಫಿಶ್ ಆಗುತ್ತಾರೆ. ಇವರಿಗೆ ಆನ್ಲೈನ್ನಲ್ಲಿ ತಮ್ಮ ಖಾಸಗಿ ಮಾಹಿತಿ, ಅಶ್ಲೀಲ ಫೋಟೋ ಸೇರಿದಂತೆ ಇನ್ನಿತರ ಮಾಹಿತಿ ನೀಡುವಂತೆ ಪುಸಲಾಯಿಸಲಾಗುತ್ತದೆ. ಅವರ ಖಾಸಗಿ ಮಾಹಿತಿಯನ್ನು ಹ್ಯಾಕ್ ಮಾಡಲಾಗುತ್ತದೆ. ಈ ಮಾಹಿತಿಯನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ತಿಳಿಸುತ್ತದೆ.
ಇಂತಹ ಕ್ಯಾಟ್ಫಿಶಿಂಗ್ಗೆ ಶೇ 51ರಷ್ಟು ಯುವ ಜನತೆ ಅಥವಾ ಅವರ ಸ್ನೇಹಿತರು ಸಂತ್ರಸ್ತರಾಗಿರುತ್ತಾರೆ. ಶೇ 47ರಷ್ಟು ಮಂದಿ ಇವರ ಮಾಹಿತಿ ಹ್ಯಾಕ್ ಮಾಡಲಾಗಿದೆ. ಸುಮಾರು ಮೂರರಲ್ಲೊಬ್ಬ ಹದಿಹರೆಯದವರು ಇಂತಹ ವಂಚನೆ ಬಲಿಯಾಗಿ ತಮ್ಮ ಖಾಸಗಿ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ ಎಂದು ಅಧ್ಯಯನ ಮಾಹಿತಿ ನೀಡಿದೆ. ಇದಕ್ಕೂ ಹೆಚ್ಚಾಗಿ ಶೇ 56ರಷ್ಟು ಮಂದಿ ಈ ರೀತಿ ಆನ್ಲೈನ್ ವಂಚನೆಗೊಳಗಾಗಿ ಬೆದರಿಕೆ ಅನುಭವಿಸಿದಾಗ ಅವರ ಸ್ಥಿತಿಯನ್ನು ಅವರ ಸ್ನೇಹಿತರು ಮತ್ತು ಪೋಷಕರು ನಂಬುತ್ತಾರೆ. ಶೇ 50ರಷ್ಟು ಮಂದಿ ದೂರು ನೀಡುತ್ತಾರೆ. ಶೇ 40ರಷ್ಟು ಮಂದಿ ಇಂತಹ ಜನರನ್ನು ಬ್ಲಾಕ್ ಮಾಡುತ್ತಾರೆ. ಶೇ 30ರಷ್ಟು ಮಂದಿ ತಮ್ಮ ಖಾತೆಯ ಸುರಕ್ಷತೆಯನ್ನು ಬಿಗಿಗೊಳಿಸುತ್ತಾರೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: ಶಿಕ್ಷಿತರೇ ಸೈಬರ್ ವಂಚನೆಗೆ ಒಳಗಾಗುವ ಮೊದಲ ಬಲಿ ಪಶುಗಳು: ತಜ್ಞರ ಎಚ್ಚರಿಕೆ