ಹೈದರಾಬಾದ್: ಇಂದು ಸಾಮಾಜಿಕ ಮಾಧ್ಯಮಗಳು ಜಾಗತಿಕ ಸಂವಹನ ಅವಿಭಾಜ್ಯ ಅಂಗವಾಗಿ ಹೊರ ಹೊಮ್ಮಿದೆ. 4.8 ಬಿಲಿಯನ್ ಮಂದಿ ಈ ಸಾಮಾಜಿಕ ಜಾಲತಾಣವನ್ನು ಜಾಗತಿಕ ಮಟ್ಟದಲ್ಲಿ ಬಳಕೆ ಮಾಡುತ್ತಿದ್ದು, ಶೇ 92.7ರಷ್ಟು ಇಂಟರ್ನೆಟ್ ಬಳಕೆ ಮಾಡುತ್ತಾರೆ. ಪ್ರತಿ ತಿಂಗಳು ಸರಾಸರಿ 6 - 7 ವಿಭಿನ್ನ ಸಾಮಾಜಿಕ ಮಾಧ್ಯಮದ ನೆಟ್ವರ್ಕ್ಗಳ ಬಳಕೆ ಮಾಡುತ್ತಾರೆ. ದಿನಕ್ಕೆ ವ್ಯಕ್ತಿಯೊಬ್ಬ ಸರಿಸುಮಾರು 2 ಗಂಟೆ 24 ನಿಮಿಷಗಳ ಕಾಲ ಮೀಸಲಿಡುತ್ತಾರೆ.
ಸಾಮಾಜಿಕ ಮಾಧ್ಯಮದ ಕೆಲವು ಅಪ್ಲಿಕೇಷನ್ಗಳು ಇದ್ಧಕ್ಕಿದ್ದಂತೆ ಜನಪ್ರಿಯ ಪಡೆಯಬಹುದು ಅಥವಾ ಕುಗ್ಗಬಹುದು. ಇದರ ಅನುಸಾರ ಈ ವರ್ಷ ಅಂದರೆ 2023ರಲ್ಲಿ ಜನಪ್ರಿಯತೆ ಪಡೆದ ಆ್ಯಪ್ಗಳು ಯಾವುದು ಎಂಬ ಮಾಹಿತಿ ಇಲ್ಲಿದೆ. ಫೋಟೋ ಹಂಚಿಕೆಯ ಅಪ್ಲಿಕೇಷನ್ ಆಗಿರುವ ಮೆಟಾದ ಇನ್ಸ್ಟಾಗ್ರಾಂ ತನ್ನ ಜನಪ್ರಿಯತೆ ಕಡಿಮೆ ಆಗಿದೆ. ಜಾಹೀರಾತುಗಳು ಮತ್ತು ಇನ್ಫುಯೆನ್ಸರ್ ಬ್ರಾಂಡ್ ಪ್ರೋಮೋಟಿಂಗ್ನಿಂದಾಗಿ ಇದರ ಜನಪ್ರಿಯತೆ ಕುಸಿಯತೊಡಗಿದೆ.
ಟಿಆರ್ಜಿ ಡೇಟಾ ಸೆಂಟರ್ ವರದಿ ಪ್ರಕಾರ, ಅಮೆರಿಕ ಮೂಲದ ಟೆಕ್ ಸಂಸ್ಥೆಯಾಗಿರುವ ಮೆಟಾದ ಥ್ರೇಡ್ಸ್ ಆ್ಯಪ್ ಐದು ದಿನದಲ್ಲಿ 100 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿತ್ತು. ಆದರೆ ಇದೀಗ ಈ ಆ್ಯಪ್ ದೈನಂದಿನ ಬಳಕೆದಾರ ಸಕ್ರಿಯತೆಯಲ್ಲಿ ಶೇ 80ರಷ್ಟು ಕಡಿಮೆ ಆಗಿದೆ.
ಎಲೋನ್ ಮಸ್ಕ್ರ ಎಕ್ಸ್ ಪೈಪೋಟಿಗೆ ಮೆಟಾ ಥ್ರೇಡ್ಸ್ ಅನ್ನು 2003 ಜುಲೈ 5ರಲ್ಲಿ ಬಿಡುಗಡೆಯಾಯಿತು. ಆರಂಭವಾದ ಮೊದಲ ಐದು ದಿನದಲ್ಲಿ 100 ಮಿಲಿಯನ್ ಬಳಕೆದಾರರಾದರೂ ಬಂದರು, ಆಗಸ್ಟ್ನಲ್ಲಿ ಇದರ ಬಳಕೆದಾರರ ಸಂಖ್ಯೆ ಶೇ 80ರಷ್ಟು ಕುಸಿತಗೊಂಡಿದೆ. ಜುಲೈನಲ್ಲಿ ಬಳಕೆದಾರರು ಇದರಲ್ಲಿ 21 ನಿಮಿಷ ಕಳೆದರೆ ನವೆಂಬರ್ನಲ್ಲಿ 3 ನಿಮಿಷ ಆಗಿದೆ.
ಟಿಆರ್ಜಿ ಡೇಟಾ ಸೆಂಟರ್ ಪ್ರಕಾರ 2023ರಲ್ಲಿ ಮತ್ತೆರಡು ಸಾಮಾಜಿಕ ಜಾಲತಾಣದ ಅಪ್ಲಿಕೇಷನ್ಗಳು ತಮ್ಮ ಜನಪ್ರಿಯತೆ ಕುಗ್ಗಿಸಿಕೊಂಡಿವೆ. ಅದರಲ್ಲಿ ಹೇಗೆ ನನ್ನ ಇನ್ಸ್ಟಾಗ್ರಾಂ ಡಿಲೀಟ್ ಮಾಡುವುದು ಎಂಬುದು ಹೆಚ್ಚಾಗಿದೆ. ಅಲ್ಲದೇ ಜಾಗತಿಕವಾಗಿ ಅತಿ ಹೆಚ್ಚಿ ಬಳಕೆಯಾದ ಮೊದಲ 9 ಆ್ಯಪ್ನಲ್ಲಿ ಇದು ಸ್ಥಾನಹೊಂದಿದೆ.
ಇನ್ನು ಈ ವರ್ಷ ಅತಿ ಹೆಚ್ಚು ಬಳಕೆಯಾದ ಸಾಮಾಜಿಕ ಜಾಲತಾಣಗಳ ಪಟ್ಟಿ ಇಲ್ಲಿದೆ. ಫೇಸ್ಬುಕ್- 3.03 ಬಿಲಿಯನ್ ಬಳಕೆದಾರರು, ಯೂಟ್ಯೂಬ್- 2.49ಬಿಲಿಯನ್, ವಾಟ್ಸ್ಆ್ಯಪ್ 2 ಬಿಲಿಯನ್, ಇನ್ಸ್ಟಾಗ್ರಾಂ 2 ಬಿಲಿಯನ್, ವಿಚಾಟ್ 1.33 ಬಿಲಿಯನ್, ಟಿಕ್ಟಾಕ್ 1.22ಬಿಲಿಯನ್, ಫೇಸ್ಬುಕ್ ಮೆಸೇಂಜರ್ 1.04 ಬಿಲಿಯನ್, ಟೆಲಿಗ್ರಾಂ-800 ಮಿಲಿಯನ್ ಮತ್ತು ಸ್ನಾಪ್ಚಾಟ್ 750 ಮಿಲಿಯನ್, ಟ್ವಿಟರ್/ಎಕ್ಸ್ 666ಮಿಲಿಯನ್ ಬಳಕೆದಾರರಾಗಿದ್ದಾರೆ.
ತಲಾವಾರು ವಿಧಾನವನ್ನು ಬಳಕೆಯಲ್ಲಿ ಇನ್ಸ್ಟಾಗ್ರಾಂನಲ್ಲಿ ಮುಂಚೂಣಿಯಲ್ಲಿದೆ. ಈ ಖಾತೆ ಡೀಲಿಟ್ ಮಾಡುವ ಸಂಬಂಧ ಜಾಗತಿಕ 1 ಮಿಲಿಯನ್ ಮಂದಿ ಪ್ರತಿ ತಿಂಗಳು ಹುಡುಕುತ್ತಾರೆ. ಈ ನಡುವೆಯೂ ಈ ಫ್ಲಾಟ್ಪ್ಲಾರ್ಮ್ 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ.
ಸ್ನಾಪ್ಚಾಟ್ ಅದರಲ್ಲೂ ಜೆನ್ ಜೆಡ್ ಜನರಲ್ಲಿ ಪ್ರಖ್ಯಾತಿ ಹೊಂದಿದೆ. 1,30,00 ಮಂದಿ ಇದರ ಡಿಲೀಟ್ಗೆ ಹುಡುಕಾಟ ನಡೆಸಿದರೂ 18-24 ವರ್ಷವರಗ ಜನಪ್ರಿಯ ಆ್ಯಪ್ ಆಗಿದೆ. ಚೀನಾ ಕಂಪನಿ ಟೆನ್ಸೆಂಟ್ ಮಾಲೀಕತ್ವದ ವೀಚಾಟ್ ಕೂಡ ಸ್ಥಿರ ಬಳಕೆದಾರರನ್ನು ಹೊಂದಿದೆ. ಕಾರಣ ಇದು ನಿರ್ದಿಷ್ಟ ಪ್ರದೇಶದಲ್ಲಿ ಕಾರ್ಯಾಚರಣೆ ಹೊಂದಿದೆ.
ಸೂಚನೆ : ಟಿಆರ್ಜಿ ಡೇಟಾ ಸೆಂಟರ್ ಬಳಕೆದಾರರು ತಮ್ಮದೇ ಮಾದರಿಯಲ್ಲಿ ಈ ಫಲಿತಾಂಶದೊಂದಿಗೆ ಬಂದಿದ್ದಾರೆ. ಈ ಟಿವಿ ಭಾರತ್ ಈ ದತ್ತಾಂಶವನ್ನು ಅಭಿವೃದ್ಧಿಪಡಿಸಿಲ್ಲ.
ಇದನ್ನೂ ಓದಿ: ಪ್ರತಿ 10ರಲ್ಲಿ 7 ಹದಿಹರೆಯದವರು ನಿತ್ಯ ಯೂಟ್ಯೂಬ್ ನೋಡ್ತಾರೆ; ಅಧ್ಯಯನ