ವಾಷಿಂಗ್ಟನ್: ದಿ ಒರಿಗಿನ್ಸ್, ಸ್ಪೆಕ್ಟ್ರಲ್ ಇಂಟರ್ಪ್ರಿಟೇಷನ್, ರಿಸೋರ್ಸ್ ಐಡೆಂಟಿಫಿಕೇಶನ್, ಸೆಕ್ಯುರಿಟಿ, ರೆಗೋಲಿತ್ ಎಕ್ಸ್‌ಪ್ಲೋರರ್ (ಒಸಿರಿಸ್-ರೆಕ್ಸ್) ಬಾಹ್ಯಾಕಾಶ ನೌಯ ರೋಬಾಟ್ ಆರ್ಮ್, ಭೂಮಿಯಿಂದ 321 ದಶಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿರುವ 'ಬೆನ್ನು' ಎಂಬ ಕ್ಷುದ್ರಗ್ರಹದಿಂದ ಮಾದರಿಯನ್ನು ಸಂಗ್ರಹಿಸುವ ಪ್ರಯತ್ನವಾಗಿದೆ ಎಂದು ನಾಸಾ ತಿಳಿಸಿದೆ.
"ಇಂದಿನ ಮಾದರಿ ಸಂಗ್ರಹಣೆ ಕಾರ್ಯಕ್ರಮವು ಯೋಜಿಸಿದಂತೆ ನಡೆದಿದೆ ಎಂದು ಪ್ರಾಥಮಿಕ ದತ್ತಾಂಶಗಳು ತೋರಿಸುತ್ತವೆ. ಈವೆಂಟ್‌ನ ಎಲ್ಲಾ ಡೇಟಾವನ್ನು ಭೂಮಿಗೆ ಡೌನ್‌ಲಿಂಕ್ ಮಾಡಿದ ನಂತರ ಹೆಚ್ಚಿನ ವಿವರಗಳು ಬರಲಿವೆ" ಎಂದು ನಾಸಾದ ಒಸಿರಿಸ್-ರೆಕ್ಸ್ ಮಿಷನ್ ಟ್ವೀಟ್‌ನಲ್ಲಿ ತಿಳಿಸಿದೆ.
"ಒಂದು ದಶಕದ ಯೋಜನೆಯ ನಂತರ, ಇಂದಿನ ಮಾದರಿ ಪ್ರಯತ್ನದ ಯಶಸ್ಸಿನಲ್ಲಿ ತಂಡವು ತುಂಬಾ ಸಂತೋಷವಾಗಿದೆ" ಎಂದು ಟಕ್ಸನ್‌ನ ಅರಿಝೋನಾ ವಿಶ್ವವಿದ್ಯಾಲಯದ ಒಸಿರಿಸ್-ರೆಕ್ಸ್ ಪ್ರಧಾನ ತನಿಖಾಧಿಕಾರಿ ಡಾಂಟೆ ಲಾರೆಟ್ಟಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಸಿರಿಸ್-ರೆಕ್ಸ್ ತಂಡವು ಬಾಹ್ಯಾಕಾಶ ನೌಕೆ ಎಷ್ಟು ಮಾದರಿಗಳನ್ನು ಸಂಗ್ರಹಿಸಿದೆ ಎಂಬುದನ್ನು ಖಚಿತಪಡಿಸಲು ಸುಮಾರು ಒಂದು ವಾರ ತೆಗೆದುಕೊಳ್ಳಲಿದೆ. ಬಾಹ್ಯಾಕಾಶ ನೌಕೆ ಸಂಗ್ರಹಿಸಿದ ಮಾದರಿ 2023ರಲ್ಲಿ ಭೂಮಿಗೆ ಮರಳಲಿದೆ.