ETV Bharat / science-and-technology

ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್​ ಕೇಳಿದ್ರೆ ತಲೆ ತಿರುಗುತ್ತೆ!

author img

By

Published : Dec 5, 2020, 9:33 PM IST

Updated : Feb 16, 2021, 7:53 PM IST

'ಜಿಯುಝಾಂಗ್' ಹೆಸರನ್ನು ಪ್ರಾಚೀನ ಚೀನಿ ಗಣಿತ ಪಠ್ಯದಿಂದ ತೆಗೆದುಕೊಂಡಿದೆ. 200 ಸೆಕೆಂಡ್​​ಗಳಲ್ಲಿ ಗೌಸಿಯನ್ ಬೋಸನ್ ಸ್ಯಾಂಪ್ಲಿಂಗ್ ಎಂದು ಕರೆಯಲ್ಪಡುವ ಅತ್ಯಂತ ನಿಗೂಢ ಲೆಕ್ಕಾಚಾರ ಮಾಡಬಲ್ಲದು. ಇದೇ ಲೆಕ್ಕ ಮಾಡಲು ವಿಶ್ವದ ಅತಿ ವೇಗದ ಕ್ಲಾಸಿಕಲ್​ ಸೂಪರ್‌ಕಂಪ್ಯೂಟರ್ 'ಫುಗಾಕು' ಸುಮಾರು 600 ದಶಲಕ್ಷ ವರ್ಷ ತೆಗೆದುಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

quantum computer
ಸೂಪರ್ ಕಂಪ್ಯೂಟರ್

ಬೀಜಿಂಗ್: ಕ್ಲಾಸಿಕಲ್​ ಸೂಪರ್‌ಕಂಪ್ಯೂಟರ್‌ಗಿಂತಲೂ ವೇಗವಾಗಿ ಸಮಸ್ಯೆಗಳನ್ನು ಪರಿಹರಿಸಬಲ್ಲ ವಿಶ್ವದಲ್ಲೇ ಮೊದಲ ಬಾರಿಗೆ ಬೆಳಕಿನ ಆಧಾರಿತ ಕ್ವಾಂಟಮ್ ಕಂಪ್ಯೂಟರ್ ಅನ್ನು ಚೀನಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಚೀನಿ ಸರ್ಕಾರ ಹೇಳಿಕೊಂಡಿದೆ.

ಅತ್ಯಂತ ಪ್ರಬಲ ಯಂತ್ರಗಳನ್ನು ವಿನ್ಯಾಸಗೊಳಿಸಲು ವಿಭಿನ್ನ ಮಾರ್ಗ ಒದಗಿಸುವ 'ಮುಖ್ಯ ಸಾಧನೆ'ವನ್ನು ನಮ್ಮ ತಾಂತ್ರಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕ್ವಾಂಟಮ್ ಕಂಪ್ಯೂಟರ್‌ಗಳು ಕ್ಲಾಸಿಕ್​ ಕಂಪ್ಯೂಟರ್‌ಗಳಿಗೂ ಮಿಗಿಲಾಗಿ ಅಸಾಧ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ಇದು ಮಟೆರಿಯಲ್ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಔಷಧ ಪ್ರಗತಿ ಸಂಶೋಧನಾ ಕ್ಷೇತ್ರಗಳಲ್ಲಿ ಬಳಕೆಯ ಯೋಗ್ಯವಾಗಿದೆ ಎಂದು ಹೇಳಿದೆ.

'ಜಿಯುಝಾಂಗ್' ಹೆಸರನ್ನು ಪ್ರಾಚೀನ ಚೀನಿ ಗಣಿತ ಪಠ್ಯದಿಂದ ತೆಗೆದುಕೊಂಡಿದೆ. 200 ಸೆಕೆಂಡ್​​ಗಳಲ್ಲಿ ಗೌಸಿಯನ್ ಬೋಸನ್ ಸ್ಯಾಂಪ್ಲಿಂಗ್ ಎಂದು ಕರೆಯಲ್ಪಡುವ ಅತ್ಯಂತ ನಿಗೂಢ ಲೆಕ್ಕಾಚಾರ ಮಾಡಬಲ್ಲದು. ಇದೇ ಲೆಕ್ಕ ಮಾಡಲು ವಿಶ್ವದ ಅತಿ ವೇಗದ ಕ್ಲಾಸಿಕಲ್​ ಸೂಪರ್‌ಕಂಪ್ಯೂಟರ್ 'ಫುಗಾಕು' ಸುಮಾರು 600 ದಶಲಕ್ಷ ವರ್ಷ ತೆಗೆದುಕೊಳ್ಳುತ್ತದೆ ಎಂದು ವರದಿ ತಿಳಿಸಿದೆ.

ಗೂಗಲ್ ತನ್ನ 53 ಕ್ವಿಟ್ ಕ್ವಾಂಟಮ್ ಕಂಪ್ಯೂಟರ್ ಕಳೆದ ವರ್ಷ ಇದೇ ಮಾದರಿಯಲ್ಲಿ ಪ್ರಗತಿ ಸಾಧಿಸಿದ್ದಾಗಿ ಘೋಷಿಸಿತ್ತು. ಆ ನಂತರ ಇದು ಅಂತಹದೇ ಎರಡನೇ ಮೈಲಿಗಲ್ಲಾಗಿದೆ.

Last Updated : Feb 16, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.