ಸ್ಯಾನ್ ಫ್ರಾನ್ಸಿಸ್ಕೋ : ಫೇಸ್‌ಬುಕ್ ಒಡೆತನ ಹೊಂದಿರುವ ತಂತ್ರಜ್ಞಾನ ಕಂಪನಿ Meta, ಫೇಸ್‌ಬುಕ್ Messenger ನಲ್ಲಿ ರೋಲ್ ಕಾಲ್ ಎಂಬ ಹೊಸ ವೈಶಿಷ್ಟ್ಯವನ್ನು ಆಂತರಿಕವಾಗಿ ಪರೀಕ್ಷಿಸುತ್ತಿದೆ. ಇದು BeReal (ಫ್ರೆಂಚ್ ಫೋಟೋ ಶೇರಿಂಗ್ ಅಪ್ಲಿಕೇಶನ್) ನಂತೆಯೇ ಇರುತ್ತದೆ ಎಂದು ಹೇಳಲಾಗಿದೆ. ಸೋಷಿಯಲ್ ಮೀಡಿಯಾ ನಿಪುಣರೊಬ್ಬರು ಇದನ್ನು ಗುರುತಿಸಿದ್ದಾರೆ. ಹೊಸ ವೈಶಿಷ್ಟ್ಯವು ಬಳಕೆದಾರರು ಒಂದು ನಿರ್ದಿಷ್ಟ ಸಮಯದಲ್ಲಿ ಏನನ್ನು ಮಾಡುತ್ತಿದ್ದೇವೆ ಎಂಬುದನ್ನು ಫೋಟೋ ಅಥವಾ ವಿಡಿಯೋ ಮೂಲಕ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎನ್ನಲಾಗಿದೆ.
ರೋಲ್ ಕರೆಗೆ ಸೇರಿಸಲಾದ ಜನರು ಮಾತ್ರ ಇತರ ಪ್ರತಿಕ್ರಿಯೆಗಳನ್ನು ನೋಡಬಹುದು. Be Real ನಂತೆಯೇ, ಸದ್ಯ ಪರೀಕ್ಷೆ ಹಂತದಲ್ಲಿರುವ ಈ ಫೀಚರ್ ಮುಂಭಾಗ ಮತ್ತು ಹಿಂಭಾಗದ ಕ್ಯಾಮರಾ ಫೋಟೋವನ್ನು ಪ್ರತಿ ದಿನವೂ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುತ್ತದೆ. ಈಗ ರೋಲ್ ಕಾಲ್ ಫೀಚರ್ ಇನ್ನೂ ಆಂತರಿಕ ಮೂಲ ಮಾದರಿಯಾಗಿರುವುದರಿಂದ, ಮೆಟಾ ಯಾವಾಗ ಈ ವೈಶಿಷ್ಟ್ಯವನ್ನು ಸಾರ್ವಜನಿಕಗೊಳಿಸಲು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿಲ್ಲ.
ಭಿನ್ನವಾಗಿದೆ ಹೊಸ ಫೀಚರ್: ಹೊಸ ಫೀಚರ್ ಸಂಪೂರ್ಣ ರೆಡಿ ಆದ ನಂತರ ಈಗಿರುವುದಕ್ಕಿಂತಲೂ ಭಿನ್ನವಾಗಿ ಕಾಣಿಸಬಹುದು ಎಂದು ವರದಿ ಹೇಳಿದೆ. ಇದು Be Real ಗಿಂತ ಭಿನ್ನವಾಗಿದ್ದು, ಇಮೇಜ್ ಶೇರ್ ಮಾಡಿಕೊಲ್ಳಲು ಬಳಕೆದಾರರಿಗೆ ರ‍್ಯಾಂಡಮ್ ಆಗಿ ಕೇಳಲಾಗುತ್ತದೆ. ಮೆಸೆಂಜರ್‌ನ ಹೊಸ ವೈಶಿಷ್ಟ್ಯವು ಕಂಟೆಂಟ್ ಅನ್ನು ಪೋಸ್ಟ್ ಮಾಡಲು ಬಳಕೆದಾರರಿಗೆ ಕೇಳುವುದಿಲ್ಲ. ಬದಲಿಗೆ, ಬಳಕೆದಾರರು ಯಾವುದೇ ಸಮಯದಲ್ಲಿ ಗ್ರೂಪ್ ಚಾಟ್‌ನಲ್ಲಿ ರೋಲ್ ಕಾಲ್ ಥ್ರೆಡ್ ಅನ್ನು ಪ್ರಾರಂಭಿಸಬಹುದು.
ಈ ಫೀಚರ್ನಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಾಂಪ್ಟ್ ಸಮಯಕ್ಕೆ ಕೌಂಟ್ಡೌನ್ ನೀಡಲಾಗಿರುತ್ತದೆ. ಯಾರಾದರೂ ರೋಲ್ ಕಾಲ್ ಕರೆಯನ್ನು ಪ್ರಾರಂಭಿಸಿದಾಗ, ಎಲ್ಲ ಗ್ರೂಪ್ ಚಾಟ್ ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಲಾಗುತ್ತದೆ. ಬಳಕೆದಾರರು ಚಿತ್ರ ಅಥವಾ ವಿಡಿಯೋವನ್ನು ಸಲ್ಲಿಸಿದ ನಂತರ, ಅವರು ಎಲ್ಲರ ಪ್ರತಿಕ್ರಿಯೆಗಳನ್ನು ವೀಕ್ಷಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ಮೆಟಾ Instagram ನಲ್ಲಿ ಹೊಸ ಬ್ರಾಡಕಾಸ್ಟ್ ಚಾನಲ್‌ಗಳನ್ನು ಪರಿಚಯಿಸಿದೆ. ಇದು ಒಬ್ಬರು ಹಲವಾರು ಜನರಿಗೆ ಸಂದೇಶ ಕಳುಹಿಸುವ ಸಾಧನವಾಗಿದ್ದು, ಕ್ರಿಯೇಟರ್ಸ್ ತಮ್ಮ ಫಾಲೋವರ್ಸ್ಗಳೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಕ್ರಿಯೇಟರ್ಸ್ ತಮ್ಮ ಇತ್ತೀಚಿನ ಅಪ್ಡೇಟ್ಸ್ ಮತ್ತು behind-the-scenes ಕ್ಷಣಗಳನ್ನು ಹಂಚಿಕೊಳ್ಳಲು ವಾಯ್ಸ್ ನೋಟ್ಸ್ಗಳನ್ನು ಬಳಸಬಹುದು ಮತ್ತು ಕ್ರೌಡ್‌ಸೋರ್ಸ್ ಫಾಲೋವರ್ಸ್ಗಳ ಪ್ರತಿಕ್ರಿಯೆಗೆ ಸಮೀಕ್ಷೆಗಳನ್ನು ಸಹ ರಚಿಸಬಹುದು ಎಂದು ಕಂಪನಿಯು ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.
ಫೇಸ್ಬುಕ್ನಲ್ಲಿ ಮತ್ತೆ ಉದ್ಯೋಗ ಕಡಿತದ ಭೀತಿ: ಫೇಸ್‌ಬುಕ್ ಒಡೆತನ ಹೊಂದಿರುವ ಕಂಪನಿ ಮೆಟಾ ಮತ್ತಷ್ಟು ಉದ್ಯೋಗಿಗಳನ್ನು ವಜಾ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಉದ್ಯೋಗಿಗಳನ್ನು ವಜಾ ಮಾಡುವ ಬಗ್ಗೆ ಮೆಟಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತನ್ನ ಉದ್ಯೋಗಿಗಳ ಪೈಕಿ ಶೇಕಡಾ 13 ರಷ್ಟು ಅಥವಾ 11,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಕೈಬಿಡುವುದಾಗಿ ಮೆಟಾ ಕಳೆದ ವರ್ಷ ಹೇಳಿತ್ತು.
ಇದನ್ನೂ ಓದಿ: ಇನ್ಮುಂದೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೂ ಹಣ ಪಾವತಿಸಿ ಬ್ಲೂಟಿಕ್ ಪಡೆಯಬಹುದು