ETV Bharat / science-and-technology

ನೋಕಿಯಾ ಬಜೆಟ್ ಸ್ಮಾರ್ಟ್​ಫೋನ್ C22 ಭಾರತದಲ್ಲಿ ಬಿಡುಗಡೆ: ಬೆಲೆ 7,999 ರೂ.

author img

By

Published : May 11, 2023, 3:48 PM IST

ನೋಕಿಯಾ ತನ್ನ ಹೊಸ ಬಜೆಟ್ ಸ್ಮಾರ್ಟ್​ಪೋನ್ ಸಿ22 ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ 7,999 ಆಗಿದೆ.

Nokia launches new affordable smartphone 'C22' in India
ನೋಕಿಯಾ ಬಜೆಟ್ ಸ್ಮಾರ್ಟ್​ಫೋನ್ C22 ಭಾರತದಲ್ಲಿ ಬಿಡುಗಡೆ: ಬೆಲೆ 7,999 ರೂ.

ನವದೆಹಲಿ : ನೋಕಿಯಾ ಫೋನ್ ತಯಾರಕ ಕಂಪನಿ ಎಚ್​ಎಂಡಿ ಗ್ಲೋಬಲ್ ಹೊಸ ನೋಕಿಯಾ ಸಿ22 (Nokia C22) ಬಜೆಟ್ ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಕೈಯಿಂದ ಜಾರದಂತೆ ಇದನ್ನು ವಿನ್ಯಾಸಗೊಳಿಸಿರುವುದು ಇದರ ವೈಶಿಷ್ಟ್ಯವಾಗಿದೆ. 7,999 ಆರಂಭಿಕ ಬೆಲೆಯನ್ನು ಹೊಂದಿರುವ ಸ್ಮಾರ್ಟ್​ಫೋನ್ ಚಾರ್ಕೋಲ್, ಸ್ಯಾಂಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ, 4GB (2GB + 2GB ವರ್ಚುವಲ್ RAM) ಆವೃತ್ತಿಯಲ್ಲಿ ಮತ್ತು 6GB (4GB + 2GB ವರ್ಚುವಲ್ RAM) 64GB ಸ್ಟೋರೇಜ್ ಕಾನ್ಫಿಗರೇಶನ್‌ನೊಂದಿಗೆ ಲಭ್ಯವಿವೆ. ಈ ಫೋನ್ ಮೇ 11 ರಿಂದ ಮಾರಾಟಕ್ಕೆ ಲಭ್ಯವಿದೆ.

"ನೋಕಿಯಾ ಸಿ ಸಿರೀಸ್ ಯಾವಾಗಲೂ ಉತ್ತಮ ಬಳಕೆದಾರ ಅನುಭವವನ್ನು ನೀಡುವ ವಿಶ್ವಾಸಾರ್ಹ, ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸುತ್ತಿದೆ ಮತ್ತು ಕೈಯಲ್ಲಿ ಆದಷ್ಟೂ ಉತ್ತಮ ಹಿಡಿತ ಇರುವಂತೆ ನೋಕಿಯಾ ಸಿ 22 ಅನ್ನು ತಯಾರಿಸಲಾಗಿದೆ ಎಂದು ಎಚ್​ಎಂಡಿ ಗ್ಲೋಬಲ್‌ನ ಉತ್ಪನ್ನ ಮಾರ್ಕೆಟಿಂಗ್ ಮುಖ್ಯಸ್ಥ ಆಡಮ್ ಫರ್ಗುಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನೋಕಿಯಾ C22 ಮೂರು ದಿನದ ಬ್ಯಾಟರಿ ಬಾಳಿಕೆ, ಡ್ಯುಯಲ್ 13MP ಹಿಂಬದಿ ಮತ್ತು 8MP ಸೆಲ್ಫಿ ಕ್ಯಾಮೆರಾಗಳೊಂದಿಗೆ ಸುಧಾರಿತ ಇಮೇಜಿಂಗ್ ಅಲ್ಗಾರಿದಮ್‌ಗಳು, ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 13 (ಗೋ ಎಡಿಷನ್) ಆಪರೇಟಿಂಗ್ ಸಿಸ್ಟಮ್ ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ನೋಕಿಯಾ ಸ್ಮಾರ್ಟ್​ಫೋನ್ ದೊಡ್ಡ 6.5 ಇಂಚಿನ HD+ ಡಿಸ್​ ಪ್ಲೇ ಯನ್ನು ಹೊಂದಿದೆ ಮತ್ತು ಬ್ಯಾಟರಿ ಸೇವರ್ ವೈಶಿಷ್ಟ್ಯದಿಂದ ಬೆಂಬಲಿತವಾದ 5000 mAh ಬ್ಯಾಟರಿ ಇದರಲ್ಲಿದೆ. ನೀರು ಮತ್ತು ಧೂಳಿನ ರಕ್ಷಣೆಗಾಗಿ ಫೋನ್ IP52 ರೇಟಿಂಗ್ ಹೊಂದಿದೆ.

Nokia ಫಿನ್‌ಲ್ಯಾಂಡ್ ಮೂಲದ ಕಂಪನಿಯಾಗಿದ್ದು, ಇದನ್ನು 2016 ರಲ್ಲಿ HMD ಗ್ಲೋಬಲ್ ಸ್ವಾಧೀನ ಪಡಿಸಿಕೊಂಡಿತು. ಪ್ರಸ್ತುತ, HMD ಗ್ಲೋಬಲ್ ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳಲ್ಲಿ Nokia ಬ್ರ್ಯಾಂಡ್ ಅನ್ನು ಬಳಸಲು ವಿಶೇಷ ಪರವಾನಗಿಯನ್ನು ಹೊಂದಿದೆ. ನೋಕಿಯಾ ಇನ್ನೂ ಫಿನ್‌ಲ್ಯಾಂಡ್ ಮೂಲದ ಕಂಪನಿಯಾಗಿದೆ ಏಕೆಂದರೆ HMD ಗ್ಲೋಬಲ್ ಸಹ ಫಿನ್‌ಲ್ಯಾಂಡ್‌ನ ಮೂಲದ ಕಂಪನಿಯಾಗಿದೆ. ನೋಕಿಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ಫಾಕ್ಸ್‌ಕಾನ್ ತಯಾರಿಸುತ್ತದೆ ಎಂಬುದು ಗಮನಾರ್ಹ. ಫಾಕ್ಸ್‌ಕಾನ್ ಆ್ಯಪಲ್ ಸೇರಿದಂತೆ ಹಲವಾರು ಇತರ ಬ್ರ್ಯಾಂಡ್‌ಗಳ ತಯಾರಕ ಕಂಪನಿಯಾಗಿದೆ.

ನೋಕಿಯಾ ಜಗತ್ತಿನಾದ್ಯಂತ ಫೀಚರ್ ಫೋನ್‌ಗಳಿಗಾಗಿ ಪ್ರಸಿದ್ಧ ಬ್ರ್ಯಾಂಡ್ ಆಗಿತ್ತು. ಆದಾಗ್ಯೂ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಜನಪ್ರಿಯತೆ ಹೆಚ್ಚಾದಂತೆ, ನೋಕಿಯಾ ಹಿಂದುಳಿಯಲು ಪ್ರಾರಂಭಿಸಿತು. 2014 ರಲ್ಲಿ ನೋಕಿಯಾವನ್ನು ಮೈಕ್ರೋಸಾಫ್ಟ್ ಖರೀದಿಸಿತು. ಅದು ನೋಕಿಯಾ ಸ್ಮಾರ್ಟ್‌ಫೋನ್‌ಗಳಲ್ಲಿ ವಿಂಡೋಸ್ ಅನ್ನು ಅಳವಡಿಸಿತು. ಆದಾಗ್ಯೂ, ವಿಂಡೋಸ್‌ನೊಂದಿಗೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಅಂಥ ಜನಪ್ರಿಯತೆ ಪಡೆಯಲಿಲ್ಲ. ಮತ್ತೆ 2016 ರಲ್ಲಿ ಮೈಕ್ರೋಸಾಫ್ಟ್ ನೋಕಿಯಾ ಬ್ರಾಂಡ್ ಅನ್ನು HMD ಗ್ಲೋಬಲ್‌ಗೆ ಮಾರಾಟ ಮಾಡಿತು. ನೋಕಿಯಾ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ಯೂರ್ ವ್ಯೂ ಸೀರೀಸ್ ಮತ್ತು ಇನ್ನೂ ಹಲವಾರು ಹೊಸ ಮಾದರಿಯ ಸಾಧನಗಳನ್ನು ಲಾಂಚ್ ಮಾಡಿತ್ತು.

ಇದನ್ನೂ ಓದಿ : Pixel Fold: ಗೂಗಲ್​ನ ಮೊದಲ ಫೋಲ್ಡಬಲ್ ಫೋನ್ ಅನಾವರಣ, ಬೆಲೆ 1,799 ಡಾಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.