ETV Bharat / science-and-technology

ಹೋಮ್ ಅಪ್ಲಿಕೇಶನ್‌ನಲ್ಲಿ ಗೂಗಲ್​ ಟಿವಿಯೊಂದಿಗೆ ಕ್ರೋಮ್​ಕಾಸ್ಟ್​ ಬಿಡುಗಡೆ.. ಏನೆಲ್ಲಾ ವಿಶೇಷತೆ? - chromecast

ಹಳೆ ಆವೃತ್ತಿಯ ಡಾಂಗಲ್​ಗಿಂತಲೂ ಹೆಚ್ಚು ಶಕ್ತಿಶಾಲಿ ಚಿಪ್​ಸೆಟ್​ ನೊಂದಿಗೆ ಬರುವ ನಿರೀಕ್ಷೆ - ಸ್ವಯಂ ಚಾರ್ಚಿಂಗ್​ ರೀಮೊಟ್​ಗಳು ಮಾರುಕಟ್ಟೆಗೆ ಎಂಟ್ರಿ.

new-chromecast-with-google-tv-may-feature-on-home-app
ಹೋಮ್ ಅಪ್ಲಿಕೇಶನ್‌ನಲ್ಲಿ ಗೂಗಲ್​ ಟಿವಿಯೊಂದಿಗೆ ಕ್ರೋಮ್​ಕಾಸ್ಟ್​ ಬಿಡುಗಡೆ
author img

By

Published : Jan 16, 2023, 8:57 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಟೆಕ್​ ದೈತ್ಯ ಗೂಗಲ್​ ತನ್ನ ಹೋಮ್​ ಅಪ್ಲಿಕೇಶನ್​ನಲ್ಲಿ ಗೂಗಲ್​ ಟಿವಿಯೊಂದಿಗೆ ಹೊಸ ಕ್ರೋಮ್​ಕಾಸ್ಟ್​ ಅನ್ನು ಬಿಡುಗಡೆ ಮಾಡುತ್ತದೆ ಎಂದು ವರದಿಯಾಗಿದೆ. ಕ್ರೋಮ್​ಕಾಸ್ಟ್​ ಮೊಬೈಲ್​, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ ಮುಖಾಂತರ ಟಿವಿಗೆ ಸ್ಟ್ರೀಮ್ ಮಾಡುವ ತಂತ್ರಜ್ಞಾನವಾಗಿದ್ದು, ಇದರಿಂದ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.

ಅಪ್ಲಿಕೇಶನ್ ಅಪ್​ಡೇಟ್​ ಪ್ರಕಾರ ಹೊಸ ಕ್ರೋಮ್​ಕಾಸ್ಟ್​ ಡಾಂಗಲ್​ YTC ಕಲ್ಪಿತ ಹೆಸರಿನೊಂದಿಗೆ ಹೊಸ ಗೂಗಲ್​ ಟಿವಿ ಸಾಧನವನ್ನು ಒಳಗೊಂಡಿದೆ ಎಂದು ಸ್ಯಾಮ್​ ಮೊಬೈಲ್​ ವರದಿ ಮಾಡಿದೆ. ಈ ಸಾಧನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಲಾಗಿದ್ದು, ಕ್ರೋಮ್​ಕಾಸ್ಟ್​ನ ಹಳೆಯ ಹೆಚ್​ಡಿ ಆವೃತ್ತಿಕ್ಕಿಂತ ಹೆಚ್ಚಿನ ಗುಣಮಟ್ಟದ ಉತ್ಪನ್ನವಾಗಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೇ, ಕಂಪನಿಯು 2020 ರಲ್ಲಿ ಬಿಡುಗಡೆಯಾದ ಪ್ರಸ್ತುತ ಕ್ರೋಮ್​ಕಾಸ್ಟ್​ ಅನ್ನು ರಿಫ್ರೆಶ್ ಮಾಡಬೇಕಾಗಿದೆ.

ಈಗ ಬಿಡುಗಡೆಯಾಗುತ್ತಿರುವ ಹೊಸ ಸಾಧನವು ಹಳೆ ಆವೃತ್ತಿಯ ಡಾಂಗಲ್​ಗಿಂತಲೂ ಹೆಚ್ಚು ಶಕ್ತಿಶಾಲಿ ಚಿಪ್​ಸೆಟ್​ ನೊಂದಿಗೆ ಬರುವ ನಿರೀಕ್ಷೆಯಿದೆ. ಸ್ಟೊರೇಜ್​ ಮತ್ತು ಇತರ ಫೀಚರ್​ಗಳಲ್ಲಿ ಸುಧಾರಣೆಗಳೂ ಇರಬಹುದು ಎಂದು ಸ್ಯಾಮ್​ ಮೊಬೈಲ್​ ವರದಿ ತಿಳಿಸಿದೆ. ಗೂಗಲ್ ಟಿವಿಯೊಂದಿಗೆ ಸೋರಿಕೆಯಾದ ಕ್ರೋಮ್​ಕಾಸ್ಟ್​ ಡಾಂಗಲ್​ ಕುರಿತು ಟೆಕ್ ದೈತ್ಯ ಗೂಗಲ್​ ಮೌನವಾಗಿದ್ದು, ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅದಾಗ್ಯೂ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ಕ್ರೋಮ್​ಕಾಸ್ಟ್​ ಡಾಂಗಲ್​ನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಮಟ್ಟದಲ್ಲಿ ಆಂಡ್ರಾಯ್ಡ್​ ಟಿವಿ ಮತ್ತು ಗೂಗಲ್​ ಟಿವಿ ಸಾಧನಗಳನ್ನು ಬಳಸುತ್ತಿದ್ದಾರೆ. ಈ ಸಾಧನಗಳನ್ನು ನಿಯಂತ್ರಣ​ ಮಾಡಲು ಬಳಸಲಾದ ರೆಫರೆನಸ್​ ರಿಮೋಟ್​ಗಳು ಯುನೈಟೆಡ್​ ಕಿಂಗ್​ಡಮ್ ಮೂಲದ ಕಂಪನಿಯಾದ TW ಎಲೆಕ್ಟ್ರಾನಿಕ್ಸ್​ ರಿಮೋಟ್ಸ್​, ಹಲವು ವರ್ಷಗಳ ನಂತರ ಹೊಸ ಆವೃತ್ತಿಯ ರಿಮೋಟ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಈ ನವೀಕರಿಸಲಾದ ರಿಮೋಟ್​ನ ಕೆಳಭಾಗದಲ್ಲಿ ಫೋಟೊವೋಲ್ಟಾಯಿಕ್ ಪ್ಯಾನೆಲ್ ಅನ್ನು ಅಳವಡಿಸಿಲಾಗಿದ್ದು, ಇದರಿಂದ ರಿಮೋಟ್​ ಬ್ಯಾಟರಿಗಳನ್ನು ಸ್ವಯಂ ಚಾರ್ಚಿಂಗ್​ ಮಾಡಿಕೊಳ್ಳುವ ವ್ಯವಸ್ಥೆ ಹೊಂದಿದೆ.

ಇದನ್ನೂ ಓದಿ: ಗೂಗಲ್​ ಮೀಟ್​ ಹೊಸ ಅಪ್ಡೇಟ್: ಸ್ಪೀಕರ್​ ನೋಟ್ಸ್​ ಕಾಣಿಸುವ ಫೀಚರ್ ಅಳವಡಿಕೆ

ಗೂಗಲ್​ ಡಾಕ್ಸ್​ನಲ್ಲಿ ಹೊಸ ವೈಶಿಷ್ಟ್ಯ: ಗೂಗಲ್​ ತನ್ನ ಆನ್​ಲೈನ್​ ವರ್ಡ್​ ಪ್ರೊಸೆಸರ್​ ಗೂಗಲ್​ ಡಾಕ್ಸ್​ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ, ಇದು ಬಳಕೆದಾರರಿಗೆ ಮುದ್ರಿಸದ ಅಕ್ಷರಗಳನ್ನು ನೋಡಲು ಅನುವು ಮಾಡಿಕೊಡುತ್ತದೆ. ಗೂಗಲ್​ ಡಾಕ್ಸ್​ ಅನ್ನು ವೀಕ್ಷಿಸುವಾಗ ಅಥವಾ ಅದನ್ನು ಎಡಿಟ್​ ಮಾಡುವಾಗ ಲೈನ್​ ಬ್ರೇಕ್​, ಸೆಕ್ಷನ್​ ಬ್ರೇಕ್​, ಟ್ಯಾಬ್​ ಮತ್ತು ಸ್ಪೇಸ್​ನಂತಹ ಪ್ರಿಂಟ್​ ಮಾಡದ ಅಕ್ಷರಗಳು ಗೋಚರಿಸುವುದಿಲ್ಲ ಎಂದು ಟೆಕ್​ ದೈತ್ಯ ತನ್ನ ಬ್ಲಾಗ್​ಪೋಸ್ಟ್​ ವರ್ಕ್​ಸ್ಪೇಸ್​ ಅಪಡೇಟ್​ನಲ್ಲಿ ತಿಳಿಸಿದೆ.

ಕಚೇರಿಗಳನ್ನು ಖಾಲಿ ಮಾಡುತ್ತಿರುವ ಟ್ವಿಟರ್​​​: ಎಲೋನ್​ ಮಸ್ಕ್​ ಒಡೆತನದ ಟ್ವಿಟರ್​​ ಈಗಾಗಲೇ ಬೆಂಗಳೂರಿನಲ್ಲಿರುವ ಕಚೇರಿಯನ್ನು ಖಾಲಿ ಮಾಡಿದ್ದು, ಈಗ ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳನ್ನು ತ್ಯಜಿಸಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ, ಎಲಾನ್​ ಮಸ್ಕ್​ ಟ್ವಿಟರ್​​​ ಖರೀದಿಸಿದ ನಂತರ ಕಂಪನಿಯು ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದ್ದು, ಸ್ಯಾನ್​ ಫ್ರಾನ್ಸಿಸ್ಕೋದ ಟ್ವಿಟರ್​​​ ಪ್ರಧಾನ ಕಚೇರಿಯ ಬಾಡಿಗೆಯನ್ನು ಪಾವತಿಸಲು ಕಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಾಕೊಲೇಟ್ ಏಕೆ ತುಂಬಾ ಒಳ್ಳೆಯ ಸ್ವಾದ ನೀಡುತ್ತದೆ?: ಆರೋಗ್ಯಕರ ಚಾಕೊಲೇಟ್ ಅಭಿವೃದ್ದಿಗೆ ವಿಜ್ಞಾನಿಗಳ ಹೊಸ ಸಂಶೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.