ವಾಷಿಂಗ್ಟನ್ (ಅಮೆರಿಕ): ಜುನೋ ಮಿಷನ್‌ಗೆ ಅಳವಡಿಸಿದ್ದ ವಿಶೇಷ ಕ್ಯಾಮರಾ ಗುರುಗ್ರಹದಲ್ಲಿ ಉಂಟಾಗಿದ್ದ ಮಿಂಚಿನ ಬೆಳಕನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತಿಳಿಸಿದೆ. ಜುನೋ ಮಿಷನ್ ಡಿಸೆಂಬರ್ 30, 2020ರಂದು ಗುರುಗ್ರಹದ 31ನೇ ಪ್ರದಕ್ಷಿಣೆ ಪೂರ್ಣಗೊಳಿಸುತ್ತಿದ್ದಂತೆ ಈ ನೋಟವನ್ನು ದಾಖಲಿಸಿಕೊಂಡಿತು. ಚಿತ್ರದಲ್ಲಿ ಗುರುಗ್ರಹದ ಉತ್ತರ ಧ್ರುವದ ಬಳಿ ಒಂದು ಸುಳಿ ಕಾಣುತ್ತದೆ. ಆ ಕುಳಿಯ ಒಂದು ಭಾಗದಲ್ಲಿ ಮಿಂಚಿನ ಬೆಳಕನ್ನು ನೋಡಬಹುದು. ಬಾಹ್ಯಾಕಾಶ ನೌಕೆಯ ಜುನೋಕ್ಯಾಮ್ ಉಪಕರಣ ದೃಶ್ಯವನ್ನು ಸೆರೆ ಹಿಡಿದಿದೆ.
ಭೂ ಗ್ರಹದ ಮೇಲೆ ಮಿಂಚುಗಳು ನೀರಿನಿಂದ ಸೃಷ್ಟಿಯಾದ ಮೋಡಗಳಿಂದ ಹುಟ್ಟಿಕೊಳ್ಳುತ್ತವೆ. ಸಮಭಾಜಕದ ಬಳಿ ಇವುಗಳ ಪ್ರಮಾಣ ಹೆಚ್ಚು. ಆದರೆ ಗುರುಗ್ರಹದಲ್ಲಿ ಮಿಂಚು ಅಮೋನಿಯಾ- ನೀರಿನ ದ್ರಾವಣವನ್ನು ಹೊಂದಿರುವ ಮೋಡಗಳಿಂದಲೂ ಸಂಭವಿಸುತ್ತದೆ. ಈ ಮಿಂಚು ಧ್ರುವಗಳ ಬಳಿ ಜಾಸ್ತಿ ಘಟಿಸುತ್ತವೆ ಎಂದು ಎಂದು ನಾಸಾ ವಿವರಣೆ ನೀಡಿದೆ.
2022ರಲ್ಲಿ ವಿಜ್ಞಾನಿ ಕೆವಿನ್ ಎಂ. ಗಿಲ್ ಅವರು ಜುನೋಕ್ಯಾಮ್‌ನಿಂದ ಕಚ್ಚಾ ದತ್ತಾಂಶದ ಮೂಲಕ ಈ ಚಿತ್ರವನ್ನು ಸಂಸ್ಕರಿಸಿದ್ದರು. ಚಿತ್ರವನ್ನು ಸೆರೆಹಿಡಿಯುವ ಸಮಯದಲ್ಲಿ ಜುನೋ ಮಿಷನ್ ಗುರುಗ್ರಹದ ಮೋಡದ ಮೇಲ್ಭಾಗದಿಂದ ಸುಮಾರು 32,000 ಕಿ.ಮೀ.ಗಳಷ್ಟು ಎತ್ತರದಲ್ಲಿತ್ತು. ಗ್ರಹವನ್ನು ಸಮೀಪಿಸುತ್ತಿದ್ದಂತೆ ಸುಮಾರು 78 ಡಿಗ್ರಿ ಅಕ್ಷಾಂಶದಲ್ಲಿತ್ತು. ಮುಂದಿನ ತಿಂಗಳಿನಲ್ಲಿ ಬಾಹ್ಯಾಕಾಶ ನೌಕೆಯು ದೈತ್ಯ ಗ್ರಹದ ಬದಿಯಲ್ಲಿ ಹಾದುಹೋಗಲಿದೆ. ಇದರಿಂದಾಗಿ ಇಂಥ ಮಿಂಚನ್ನು ಸೆರೆ ಹಿಡಿಯಲು ಹೆಚ್ಚು ಅವಕಾಶ ಸಿಗಲಿದೆ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2011ರಲ್ಲಿ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಯು ಜುಲೈ 2016ರಲ್ಲಿ ಗುರುಗ್ರಹ ತಲುಪಿತ್ತು. ಗುರುಗ್ರಹದ ಮೂಲ ಮತ್ತು ವಿಕಸನವನ್ನು ಅರ್ಥಮಾಡಿಕೊಳ್ಳುವುದು, ಘನ ಗ್ರಹಗಳ ಕೋರ್‌ಗಳನ್ನು ಹುಡುಕುವುದು, ಮ್ಯಾಗ್ನೆಟಿಕ್ ಫೀಲ್ಡ್‌ಗಳನ್ನು ಮ್ಯಾಪ್ ಮಾಡುವುದು, ಆಳ ವಾತಾವರಣದಲ್ಲಿ ನೀರು ಮತ್ತು ಅಮೋನಿಯಾ ಇರುವಿಕೆಯನ್ನು ಅಳೆಯುವುದು ಮತ್ತು ಅರೋರಾಗಳನ್ನು ವೀಕ್ಷಿಸುವುದು ಈ ಮಿಷನ್‌ನ ಗುರಿಯಾಗಿದೆ.
ಕಳೆದ ತಿಂಗಳು ಬಾಹ್ಯಾಕಾಶ ನೌಕೆಯು ದೈತ್ಯ ಅನಿಲ ಜ್ವಾಲಾಮುಖಿ ಚಂದ್ರ Io ಅನ್ನು ದಾಟಿದೆ. ಈಗ ಗುರುಗ್ರಹದ ಒಳಭಾಗವನ್ನು ಶೋಧಿಸಲು ಅದರ ವಿಸ್ತೃತ ಕಾರ್ಯಾಚರಣೆಯ ಮೂರನೇ ವರ್ಷದಲ್ಲಿ, ಸೌರ-ಚಾಲಿತ ಬಾಹ್ಯಾಕಾಶ ನೌಕೆಯು ಕೆಲವು ಅನಿಲ ದೈತ್ಯದ ಒಳಗಿನ ಉಪಗ್ರಹಗಳು ವಾಸಿಸುವ ಉಂಗುರ ವ್ಯವಸ್ಥೆಯನ್ನು ಅನ್ವೇಷಿಸುತ್ತದೆ.
ಜುನೋ ಗುರುಗ್ರಹದ ಹಿಮಾವೃತ ಪ್ರದೇಶಗಳಾದ ಯುರೋಪಾ ಮತ್ತು ಗ್ಯಾನಿಮೀಡ್ ಮತ್ತು ಫಯರಿ ಐಒ ಗೆಲಿಲಿಯನ್ ಉಪಗ್ರಹಗಳೊಂದಿಗೆ ಮುಖಾಮುಖಿಯಾದ ಸಂದರ್ಭದಲ್ಲಿ ಸಾಕಷ್ಟು ಡೇಟಾ ಸಂಗ್ರಹಿಸಿದೆ. ಕಳೆದ ತಿಂಗಳು, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಅಧಿಕಾರಿಗಳು ಜುಪಿಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್ ಅಥವಾ ಜ್ಯೂಸ್ ಮಿಷನ್, ಗುರುಗ್ರಹವನ್ನು ಅಧ್ಯಯನ ಮಾಡಲು ಸಿದ್ಧವಾಗಿದೆ ಎಂದು ಹೇಳಿದ್ದರು. ಈ ಮಿಷನ್ ಅನ್ನು ಏಪ್ರಿಲ್ 13ರಂದು ಪ್ರಾರಂಭಿಸಲಾಗಿದೆ. JUICE (ಜುಪಿಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್) ಗುರುಗ್ರಹದ ಹಿಮಾವೃತ ಪ್ರದೇಶದ ಮೇಲೆ ಅನ್ಯಲೋಕದ ಜೀವನದ ಸಾಧ್ಯತೆಯನ್ನು ಸಂಶೋಧಿಸುತ್ತದೆ.
ಇದನ್ನೂ ಓದಿ: ಫೈಲಟ್ಗಳ ನಡುವೆ ಇದ್ದ ಗೊಂದಲವೇ 2021 ರ ಟ್ರಾನ್ಸ್ ಏರ್ ಕಾರ್ಗೋ ಫ್ಲೈಟ್ ಮುಳುಗಲು ಕಾರಣ: ವರದಿ