ETV Bharat / science-and-technology

ನಾಸಾದ ಮಾನವ ಸಹಿತ ಚಂದ್ರಯಾನ ಯೋಜನೆ 2026 ಕ್ಕೆ ಮುಂದೂಡಿಕೆ - ನಾಸಾದ ಚಂದ್ರಯಾನ ಯೋಜನೆ ಮುಂದೂಡಿಕೆ

ಅಮೆರಿಕದ ನಾಸಾ ಸಂಸ್ಥೆಯ ಬಹುನಿರೀಕ್ಷಿತ ಮಾನವ ಸಹಿತ ಚಂದ್ರಯಾನ ಯೋಜನೆಯು 2026 ರ ತನಕವೂ ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದೆ.

NASA's
ನಾಸಾದ
author img

By

Published : Mar 3, 2022, 1:33 PM IST

Updated : Mar 3, 2022, 1:40 PM IST

ವಾಷಿಂಗ್ಟನ್: ಅಮೆರಿಕದ ನಾಸಾ ಸಂಸ್ಥೆಯ ಬಹುನಿರೀಕ್ಷಿತ ಮಾನವ ಸಹಿತ ಚಂದ್ರಯಾನ ಯೋಜನೆಯು 2026 ರ ತನಕವೂ ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿದೆ. ಮಾನವ ಸಹಿತ ಆರ್ಟೆಮಿಸ್​-1 ಯಾನವನ್ನು 2022 ರ ಮಾರ್ಚ್​ನಲ್ಲಿ ಉಡಾಯಿಸುವ ಯೋಜನೆಯನ್ನು ನಾಸಾ ಹೊಂದಿತ್ತು. ಆದರೆ, ನೌಕೆಯನ್ನು ಹಲವು ಹಂತಗಳಲ್ಲಿ ಪರೀಕ್ಷೆ ನಡೆಸಬೇಕಾದ ಕಾರಣ ಅದನ್ನು ಇನ್ನಷ್ಟು ಮುಂದಕ್ಕೆ ಹಾಕಲಾಗಿದೆ.

ಮಾನವರನ್ನು ಚಂದ್ರನಲ್ಲಿಗೆ ಕರೆದೊಯ್ಯುವ ಮಹತ್ವಾಕಾಂಕ್ಷಿ ಯೋಜನೆಯಾದ ಆರ್ಟೆಮಿಸ್​ ಅನ್ನು ನಿಗದಿತ ವೇಳೆಗೆ ಹಾರಿಸಲು ಸಾಧ್ಯವಾಗುತ್ತಿಲ್ಲ. ನೌಕೆಯನ್ನು ಇನ್ನಷ್ಟು ಹಂತಗಳಲ್ಲಿ ಪರೀಕ್ಷಿಸುವ ಅಗತ್ಯವಿದೆ. ಹೀಗಾಗಿ ಯೋಜನೆಯನ್ನು 2026 ಕ್ಕೆ ಮುಂದೂಡಲಾಗುವುದು ಎಂದು ನಾಸಾದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಯೋಜನೆಯನ್ನು 2025 ರಲ್ಲಿ ಜಾರಿಗೆ ತರಬಹುದು. ಆದರೆ, ಪರಿಪೂರ್ಣವಲ್ಲದೇ, ತರಾತುರಿಯಲ್ಲಿ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸಲು ಸಾಧ್ಯವಿಲ್ಲ. ಎಲ್ಲ ಹಂತಗಳಲ್ಲಿ ಪರೀಕ್ಷಿಸಿದ ಬಳಿಕ 2026 ರಲ್ಲಿ ಉಡಾಯಿಸಲಾಗುವುದು ಎಂದಿದ್ದಾರೆ.

ಆರ್ಟೆಮಿಸ್ 1' ನಾಸಾದ ಆರ್ಟೆಮಿಸ್ ಕಾರ್ಯಾಚರಣೆಗಳಲ್ಲಿ ಮೊದಲನೆಯದಾಗಿದ್ದು, ಮಾನವ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುವ ಮತ್ತು ಅಲ್ಲಿಂದ ಮತ್ತೆ ಭೂಮಿಗೆ ಮರಳಿ ತರುವ ಯೋಜನೆ ಇದಾಗಿದೆ. 1972 ರಲ್ಲಿ ಅಪೋಲೋ ಮಿಷನ್ ಮೂಲಕ ನಾಸಾ ಕೊನೆಯ ಬಾರಿಗೆ ಚಂದ್ರನ ನೆಲದ ಮೇಲೆ ಮಾನವ ಗಗನಯಾತ್ರಿಗಳನ್ನು ಇಳಿಸಿತ್ತು.

ಓದಿ: ಇನ್​ಸ್ಟಾಗ್ರಾಮ್ ಹೊಸ ಅಪ್ಡೇಟ್: ಬಳಕೆದಾರರಿಗೆ ಗುಡ್ ನ್ಯೂಸ್

Last Updated : Mar 3, 2022, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.