ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಉಡಾಯಿಸುವುದರಲ್ಲಿ ಹೆಸರುವಾಸಿ. ಈಗ ವಾಯು ಮಾಲಿನ್ಯವನ್ನು ಪತ್ತೆಹಚ್ಚಲು ಸಂಸ್ಥೆ ಶನಿವಾರ ಬಾಹ್ಯಾಕಾಶಕ್ಕೆ ಪ್ರಬಲವಾದ ಹೊಸ ಸಾಧನ 'ಟೆಂಪೋ'ವನ್ನು ಉಡಾವಣೆ ಮಾಡಿದೆ. ಇದು ಪ್ರಮುಖ ವಾಯು ಮಾಲಿನ್ಯಕಾರಕಗಳನ್ನು ಪತ್ತೆ ಮಾಡುತ್ತದೆ. ಉತ್ತರ ಅಮೆರಿಕಾದಾದ್ಯಂತ ಗಾಳಿಯ ಗುಣಮಟ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕ ಎನ್ನಲಾಗಿದೆ.
ಟ್ರೋಪೋಸ್ಫಿರಿಕ್ ಎಮಿಷನ್ಸ್: ಈ ಉಪಕರಣವನ್ನು ಮಾನಿಟರಿಂಗ್ ಆಫ್ ಪೊಲ್ಯೂಷನ್ (TEMPO) ಎಂದು ಕರೆಯಲಾಗುತ್ತದೆ. ಇದು ಮೂರು ಹಾನಿಕಾರಕ ಮಾಲಿನ್ಯಕಾರಕಗಳ ಮೇಲೆ ಟ್ಯಾಬ್ ಅನ್ನು ಇರಿಸುತ್ತದೆ. ನೈಟ್ರೋಜನ್ ಡೈ ಆಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಓಝೋನ್. ಇವು ಹೊಗೆಯ ಪ್ರಮುಖ ಅಂಶಗಳಾಗಿವೆ.
-
Spacecraft separation confirmed! The Intelsat satellite hosting our @NASAEarth & @CenterForAstro #TEMPO mission is flying free from its @SpaceX Falcon 9 rocket and on its way to geostationary orbit. pic.twitter.com/gKYczeHqV5
— NASA (@NASA) April 7, 2023 " class="align-text-top noRightClick twitterSection" data="
">Spacecraft separation confirmed! The Intelsat satellite hosting our @NASAEarth & @CenterForAstro #TEMPO mission is flying free from its @SpaceX Falcon 9 rocket and on its way to geostationary orbit. pic.twitter.com/gKYczeHqV5
— NASA (@NASA) April 7, 2023Spacecraft separation confirmed! The Intelsat satellite hosting our @NASAEarth & @CenterForAstro #TEMPO mission is flying free from its @SpaceX Falcon 9 rocket and on its way to geostationary orbit. pic.twitter.com/gKYczeHqV5
— NASA (@NASA) April 7, 2023
ಮಾನಿಟರಿಂಗ್ ಆಫ್ ಪೊಲ್ಯೂಷನ್ (TEMPO) ಉಪಕರಣವು ಬಾಹ್ಯಾಕಾಶದಿಂದ ಗಾಳಿಯ ಗುಣಮಟ್ಟವನ್ನು ವಿಜ್ಞಾನಿಗಳು ವೀಕ್ಷಿಸುವ ವಿಧಾನವನ್ನು ಪರಿಚಯಿಸುವ ಮೂಲಕ ಭೂಮಿಯ ಮೇಲಿನ ಜೀವನವನ್ನು ಸುಧಾರಿಸುತ್ತದೆ. "ಟೆಂಪೋ ಮಿಷನ್ ಕೇವಲ ಮಾಲಿನ್ಯವನ್ನು ಅಧ್ಯಯನ ಮಾಡುವುದಕ್ಕಿಂತ ಇದು ಎಲ್ಲರಿಗೂ ಭೂಮಿಯ ಮೇಲಿನ ಜೀವನವನ್ನು ಸುಧಾರಿಸುತ್ತದೆ. ವಿಪರೀತ ದಟ್ಟಣೆಯಿಂದ ಹಿಡಿದು ಕಾಳ್ಗಿಚ್ಚು ಮತ್ತು ಜ್ವಾಲಾಮುಖಿಗಳಿಂದ ಮಾಲಿನ್ಯದವರೆಗೆ ಎಲ್ಲದರ ಪರಿಣಾಮಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಉತ್ತರ ಅಮೆರಿಕದಾದ್ಯಂತ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ನಮ್ಮ ಗ್ರಹವನ್ನು ರಕ್ಷಿಸಲಿದೆ" ಎಂದು ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ.
ಗಾಳಿಯ ಗುಣಮಟ್ಟ ಅಳೆಯುವ ಸಾಧನ: SpaceX ನ Falcon9 ರಾಕೆಟ್ ಶುಕ್ರವಾರದಂದು 12:30AMಕ್ಕೆ(ಸ್ಥಳೀಯ ಕಾಲಮಾನ) ಫ್ಲೋರಿಡಾದ ಕೇಪ್ ಕ್ಯಾನವೆರಲ್‌ನಿಂದ ಟೆಂಪೋ ಅನ್ನು ಹೊತ್ತು ನಭಕ್ಕೆ ಜಿಗಿದಿದೆ. ಸಮಭಾಜಕ ರೇಖೆಯ ಮೇಲಿರುವ ಸ್ಥಿರ ಭೂಸ್ಥಿರ ಕಕ್ಷೆಯಿಂದ ಟೆಂಪೋ ಹಗಲಿನ ಸಮಯದಲ್ಲಿ ಉತ್ತರ ಅಮೆರಿಕದ ಮೇಲೆ ಗಂಟೆಗೊಮ್ಮೆ ಗಾಳಿಯ ಗುಣಮಟ್ಟವನ್ನು ಅಳೆಯುವ ಮೊದಲ ಬಾಹ್ಯಾಕಾಶ - ಆಧಾರಿತ ಸಾಧನವಾಗಿದೆ.
ಮಾಲಿನ್ಯದ ಅಧ್ಯಯನಗಳು, ಸುಧಾರಿತ ಗಾಳಿಯ ಗುಣಮಟ್ಟ, ಓಝೋನ್ ಮೇಲೆ ಪರಿಣಾಮ, ಕಾಡ್ಗಿಚ್ಚು ಮತ್ತು ಜ್ವಾಲಾಮುಖಿಗಳಿಂದ ಮಾಲಿನ್ಯದ ಚಲನೆ ಮತ್ತು ಪರಿಣಾಮ ಸೇರಿದಂತೆ ಮಾಲಿನ್ಯದ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಡೇಟಾವು ಪ್ರಮುಖ ಪಾತ್ರ ವಹಿಸುತ್ತದೆ. "ನಾಸಾ ಟೆಂಪೋ ನಂತಹ ಉಪಕರಣಗಳಿಂದ ಡೇಟಾವನ್ನು ಎಲ್ಲರಿಗೂ ಸುಲಭವಾಗಿ ಪಡೆಯುವಂತೆ ಮಾಡುತ್ತದೆ" ಎಂದು ನಾಸಾದ ಭೂ ವಿಜ್ಞಾನ ವಿಭಾಗದ ವಿಭಾಗದ ನಿರ್ದೇಶಕ ಕರೆನ್ ಸೇಂಟ್ ಜರ್ಮೈನ್ ಹೇಳಿದರು.
ಭೂಸ್ಥಿರ ಕಕ್ಷೆಯಿಂದ, ಟೆಂಪೋ ವಾಯು ಗುಣಮಟ್ಟದ ಉಪಗ್ರಹ ವರ್ಚುಯಲ್ ಸಮೂಹದ ಭಾಗವಾಗಿದೆ. ಅದು ಉತ್ತರ ಗೋಳಾರ್ಧದ ಸುತ್ತಲೂ ಮಾಲಿನ್ಯವನ್ನು ಪತ್ತೆಹಚ್ಚುತ್ತದೆ. "ಇದು ಸಂಪೂರ್ಣ ಅಮೆರಿಕ ಖಂಡ ಸೇರಿದಂತೆ ಉತ್ತರ ಅಮೆರಿಕದ ಮೇಲೆ ವಾಯು ಮಾಲಿನ್ಯವನ್ನು ವೀಕ್ಷಿಸುವ ನಮ್ಮ ಸಾಮರ್ಥ್ಯದಲ್ಲಿ ಹೊಸ ಯುಗವನ್ನು ಸೃಷ್ಟಿಸಿದೆ" ಎಂದು ಟೆಂಪೋ ಪ್ರೋಗ್ರಾಂ ವಿಜ್ಞಾನಿ ಬ್ಯಾರಿ ಲೆಫರ್ ಹೇಳಿದರು.
ಕಳೆದ 30 ವರ್ಷಗಳಿಂದ ಗಾಳಿಯನ್ನ ಸ್ವಚ್ಛಗೊಳಿಸುವ ಪ್ರಯತ್ನ ಪ್ರಪಂಚದಾದ್ಯಂತ ನಡೆಯುತ್ತಿದೆ. ಬೃಹತ್ ಕಾರ್ಖಾನೆಗಳು ಹಾಗೂ ವಾಹನಗಳಿಂದ ಹೊರಬರುವ ಹೊಗೆ ಜನರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಅಮೆರಿಕದಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ನಿರಂತರ ಸುಧಾರಣೆ ಕಂಡು ಬಂದಿದೆ.
ಇದನ್ನೂ ಓದಿ: ಆರ್ಟೆಮಿಸ್-2 ಬಾಹ್ಯಾಕಾಶ ಯಾನಕ್ಕೆ ತಂಡ ಪ್ರಕಟ: ಚಂದ್ರನ ಅಧ್ಯಯನಕ್ಕಾಗಿ ನಾಸಾ ಮಿಷನ್