ವಾಷಿಂಗ್ಟನ್(ಅಮೆರಿಕ): ಕೆಂಪು ಗ್ರಹ ಮಂಗಳನಲ್ಲಿ ಸಂಶೋಧನೆ ಮುಂದುವರೆದಿದೆ. ಅಮೆರಿಕದ ನಾಸಾ (National Aeronautics and Space Administration) ಮಂಗಳನಲ್ಲಿ ಸುಮಾರು ಬಿಲಿಯನ್(ನೂರಾರು) ವರ್ಷಗಳ ಹಿಂದೆ ನೀರಿನ ಮೂಲ ಇದ್ದಿರಬಹುದಾದ ಸಾಧ್ಯತೆಯ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ.
ಈ ನೀರಿನ ಮೂಲದ ಬಗ್ಗೆ ನಾಸಾ ಹೇಳಲು ಕಾರಣ ಈಗ ಬಿಡುಗಡೆಯಾಗಿರುವ ಫೋಟೋ. ಮಂಗಳನ ಜೆಝೆರೋ ಕ್ರೇಟರ್ನಲ್ಲಿ ಇಳಿದಿರುವ ನಾಸಾದ ಪರ್ಸಿವರೆನ್ಸ್ (Perseverance) ರೋವರ್ ಕಳಿಸಿಕೊಟ್ಟಿರುವ ಫೋಟೋದಲ್ಲಿ ಅಳಿದಿರಬಹುದಾದ ಸರೋವರದ ಮಾದರಿಯ ರಚನೆಗಳು ಗೋಚರಿಸುತ್ತವೆ.
-
From space, the Mars Reconnaissance Orbiter and other spacecraft gave us tantalizing hints about Jezero Crater's watery past. Now that the @NASAPersevere rover is providing close-ups from the ground, scientists have encountered some geological surprises: https://t.co/9tXmiFNsDS pic.twitter.com/ern4PqRkV6
— NASA Mars (@NASAMars) October 7, 2021 " class="align-text-top noRightClick twitterSection" data="
">From space, the Mars Reconnaissance Orbiter and other spacecraft gave us tantalizing hints about Jezero Crater's watery past. Now that the @NASAPersevere rover is providing close-ups from the ground, scientists have encountered some geological surprises: https://t.co/9tXmiFNsDS pic.twitter.com/ern4PqRkV6
— NASA Mars (@NASAMars) October 7, 2021From space, the Mars Reconnaissance Orbiter and other spacecraft gave us tantalizing hints about Jezero Crater's watery past. Now that the @NASAPersevere rover is providing close-ups from the ground, scientists have encountered some geological surprises: https://t.co/9tXmiFNsDS pic.twitter.com/ern4PqRkV6
— NASA Mars (@NASAMars) October 7, 2021
ಫ್ಯಾನ್ ಆಕಾರದ ಮುಖಜಭೂಮಿಯ(Delta) ಜೊತೆಗೆ ನೀರು ಹರಿದಿರಬಹುದಾದ ಕುರುಹುಗಳು ಮತ್ತು ಅಲ್ಲಿನ ಮಣ್ಣಿನ ಕೊರೆತ ಅದರ ಜೊತೆಗೆ ಸರೋವರದ ಹರಿಯುವ ಜಾಗದಲ್ಲಿ ಕಾಣಿಸಿಕೊಳ್ಳಬಹುದಾದ ರೀತಿಯಲ್ಲೇ ಕಂಡುಬರುವ ಕಲ್ಲಿನ ಮಾದರಿಗಳು ವಿಜ್ಞಾನಿಗಳಲ್ಲಿ ಈ ಅನುಮಾನವನ್ನು ಹುಟ್ಟುಹಾಕಿದೆ.
ಸುಮಾರು ಬಿಲಿಯನ್ ವರ್ಷಗಳ ಹಿಂದೆಯೇ ಈ ಸರೋವರ ಅಳಿದು ಹೋಗಿರಬಹುದು ಎಂಬ ಸಂಶಯವನ್ನು ವಿಜ್ಞಾನಿಗಳು ವ್ಯಕ್ತಪಡಿಸುತ್ತಾರೆ. ಇದರ ಜೊತೆಗೆ ನೀರಿದ್ದರೆ ಅದೇ ಜಾಗದಲ್ಲಿ ಜೀವಿಗಳೂ ಕೂಡಾ ಇದ್ದಿರಬಹುದು, ಕಾಲಾಂತರದಲ್ಲಿ ಅವೂ ಕೂಡಾ ನಶಿಸಿರಬಹುದು ಎಂಬ ನಿಲುವು ತಳೆದಿದ್ದಾರೆ.
ಮಂಗಳನಲ್ಲಿ ಇದ್ದಿರಬಹುದಾದ ಸರೋವರ ಸೃಷ್ಟಿಸಿರುವ ರಚನೆಗಳಿಗೂ, ಭೂಮಿಯ ಮೇಲಿನ ನದಿಯೊಂದು ಸೃಷ್ಟಿಸುವ ರಚನೆಗಳಿಗೂ ಸಾಕಷ್ಟು ಸಾಮ್ಯತೆ ಇದೆ ಎಂದು ನಾಸಾದ ಆಸ್ಟ್ರೋಬಯಾಲಜಿಸ್ಟ್ (ಖಗೋಳ ಜೀವ ವಿಜ್ಞಾನಿ) ಆ್ಯಮಿ ವಿಲಿಯಮ್ ಮತ್ತು ಆಕೆಯ ತಂಡ ಸಂಶೋಧನೆಯಲ್ಲಿ ಕಂಡುಕೊಂಡಿದೆ.
ಮಂಗಳನಲ್ಲಿ ಹೈಡ್ರಲಾಜಿಕಲ್ ಸೈಕಲ್
ಸುಮಾರು 3.7 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹವು ಬೆಚ್ಚಗಿತ್ತು. ತೇವಾಂಶದಿಂದ ಕೂಡಿತ್ತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದರಿಂದ ಮಂಗಳಲ್ಲಿ ಹೈಡ್ರಲಾಜಿಕಲ್ ಸೈಕಲ್ ನಡೆಯುತ್ತಿತ್ತು ಎಂಬ ವಿಚಾರಕ್ಕೆ ಬೆಂಬಲವೂ ದೊರೆತಂತಾಗಿದೆ.
ಬಿಸಿ(ಉಷ್ಣ) ವಾತಾವರಣದಲ್ಲಿ ನೀರು ಆವಿಯಾಗಿ, ಮೋಡವಾಗಿ ಮಳೆ ಸುರಿಯುವ ಪ್ರಕ್ರಿಯೆಯನ್ನು ಹೈಡ್ರಾಲಜಿಕಲ್ ಸೈಕಲ್ ಎಂದು ಕರೆಯಲಾಗುತ್ತದೆ. ನೂರಾರು ವರ್ಷಗಳ ಹಿಂದೆ ಮಂಗಳನಲ್ಲಿ ಬೆಚ್ಚಗಿನ ವಾತಾವರಣವಿದ್ದ ಕಾರಣದಿಂದಾಗಿ ಅಲ್ಲಿನ ಸರೋವರದ ನೀರು ಆವಿಯಾಗಿ ತೇವಾಂಶದಿಂದ ಕೂಡಿರುತ್ತಿತ್ತು. ಅದರ ಜೊತೆಗೆ ಆವಿಯಾದ ನೀರು ಮಳೆಯಾಗಿ ಸುರಿಯುತ್ತಿತ್ತು ಎಂದು ಹೇಳಲಾಗಿದೆ.
ಇನ್ನು ಸರೋವರದ ಕುರುಹುಗಳ ವಿಚಾರಕ್ಕೆ ಬರುವುದಾದರೆ, ಕೊರೆಯಲ್ಪಟ್ಟ ಬಂಡೆಗಳ ಮೇಲ್ಭಾಗ ಮತ್ತು ತೀರಾ ಇತ್ತೀಚಿನ ಪದರಗಳು ಸುಮಾರು ಒಂದು ಮೀಟರ್ಗಿಂತ ಹೆಚ್ಚು ವ್ಯಾಸದ ಅಳತೆಯನ್ನು ಹೊಂದಿದ್ದು, ನೀರು ವೇಗವಾಗಿ ಹರಿಯುತ್ತಿತ್ತು. ಹಾಗಾಗಿ, ಮಂಗಳ ಗ್ರಹದಲ್ಲಿ ನೀರಿತ್ತು ಎಂಬುದು ಮತ್ತಷ್ಟು ದೃಢಪಟ್ಟರೆ, ಅಲ್ಲಿ ಆಮ್ಲಜನಕವೂ ಇತ್ತು ಎಂಬ ವಿಚಾರವನ್ನು ಸಾಬೀತುಪಡಿಸುವ ಅಗತ್ಯವಿಲ್ಲ ಎಂಬುದು ವಿಜ್ಞಾನಿಗಳ ಅಂಬೋಣ.
ಕೆಲವು ದಿನಗಳ ಹಿಂದಷ್ಟೇ ಪರ್ಸಿವರೆನ್ಸ್ ಕೆಲವು ಬಂಡೆಗಳನ್ನು ಕೊರೆದು ಮಾದರಿಗಳನ್ನು ಸಂಗ್ರಹಿಸಿದ್ದು, ಸೆಪ್ಟೆಂಬರ್ 6ರಂದು ಸಂಗ್ರಹಿಸಿದ್ದ ಕಲ್ಲುಗಳನ್ನು ಮಾಂಟ್ಡೇನಿಯರ್ ಎಂದೂ ಸೆಪ್ಟೆಂಬರ್ 8ರಂದು ಸಂಗ್ರಹಿಸಿದ್ದ ಕಲ್ಲುಗಳನ್ನು ಮೊಂಟಾಗ್ನಾಕ್ ಎಂದು ಹೆಸರಿಸಲಾಗಿತ್ತು.
ಇದನ್ನೂ ಓದಿ: ಮಂಗಳನಲ್ಲಿ ವಾಸ ಯೋಗ್ಯ ಪರಿಸರ ಇದೆಯಾ?... ಕಲ್ಲಿನ ಮಾದರಿ ಹೇಳುವ ಕಥೆ ಏನು?