ಇಸ್ರೋ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಭೂ ವೀಕ್ಷಣಾ ಯೋಜನೆ 'ನಿಸಾರ್' ಆಗಿದೆ. ಇದು ಭೂಮಿಯ ಅರಣ್ಯ ಪ್ರದೇಶ ಮತ್ತು ಜೌಗು ಪ್ರದೇಶದಲ್ಲಿ ಪರಿಸರ ವ್ಯವಸ್ಥೆಗಳ ಬದಲಾವಣೆ, ಜಾಗತಿಕವಾಗಿ ಇಂಗಾಲದ ಚಕ್ರ ಹವಾಮಾನ ಬದಲಾವಣೆಯ ಮೇಲೆ ಪ್ರಭಾವ ಸೇರಿದಂತೆ ಹಲವು ವಿಷಯಗಳ ಅಧ್ಯಯನಕ್ಕೆ ಸಂಶೋಧಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.
ಈ ಯೋಜನೆಯ ಉಪಗ್ರಹ 2024ಕ್ಕೆ ಉಡಾವಣೆ ಆಗಲಿದ್ದು, ಭೂಮಿ ಮೇಲಿನ ನೈಸರ್ಗಿಕ ಅಪಾಯಗಳನ್ನು ಅರಿಯಲು ಬಳಕೆ ಮಾಡುವ ಉದ್ದೇಶವನ್ನು ಹೊಂದಿದೆ. ನಿಸಾರ್ ರಾಡರ್ ಉಪಗ್ರಹ ಯೋಜನೆ ಎರಡು ರೀತಿಯ ಪರಿಸರ ವ್ಯವಸ್ಥೆಗಳು ಅಂದರೆ ಅರಣ್ಯ ಮತ್ತು ಜೌಗು ಪ್ರದೇಶಗಳ ಕುರಿತು ಒಳನೋಟವನ್ನು ನೀಡುತ್ತದೆ. ಅಲ್ಲದೇ ಜಾಗತಿಕ ಹವಾಮಾನ ಬದಲಾವಣೆಗೆ ಕಾರಣವಾಗುವ ಹಸಿರು ಮನೆ ಅನಿಲಗಳನ್ನು ನಿಯಂತ್ರಿಸಲು ಪ್ರಮುಖವಾಗಿದೆ
ಹೇಗೆ ನಡೆಯಲಿದೆ ಇದರ ಕಾರ್ಯ: ನಿಸಾರ್ನ ಅತ್ಯಾಧುನಿಕ ರಾಡಾರ್ಗಳು ಎಲ್ಲ ಭೂ ಪ್ರದೇಶ ಮತ್ತು ಹಿಮದ ಮೇಲ್ಮೈಗಳನ್ನು 12 ದಿನಗಳಿಗೊಮ್ಮೆ ಎರಡು ಬಾರಿ ಸ್ಕ್ಯಾನ್ ಮಾಡುತ್ತದೆ. ಈ ವೇಳೆ, ಎರಡು ವಿಧವಾಗಿ ಸಂಗ್ರಹಿಸುವ ದತ್ತಾಂಶವನ್ನು ಸಂಶೋಧಕರಿಗೆ ನೀಡುತ್ತದೆ. ಈ ಮೂಲಕ ಪರಿಸರ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಜ್ಞಾನಿಗಳು ತಿಳಿಸುವಂತೆ ಇದು ಇಂಗಾಲದ ಚಕ್ರದ ಮೇಲಿನ ಪರಿಣಾಮವನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.
ಈ ಕುರಿತು ಮಾತನಾಡಿರುವ ನಾಸಾದ ವಿಜ್ಞಾನಿ ಪಾಲ್ ರೋಸೆನ್, ನಿಸಾರ್ ರಾಡರ್ ಬಾಹ್ಯಕಾಶ ಮತ್ತು ಭೂ ಗ್ರಹದ ದೃಷ್ಟಿಕೋನ ನೀಡಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಭೂಮಿ ಮತ್ತು ಮಂಜುಗಡ್ಡೆಗಳು ಹೇಗೆ ಬದಲಾಗುತ್ತದೆ. ಅರಣ್ಯ ನಷ್ಟದಿಂದ ಇಂಗಾಲದ ಚಕ್ರ ಹೇಗೆ ಪ್ರಭಾವ ಬೀರುತ್ತದೆ. ಜಾಗತಿಕ ತಾಪಮಾನ ಏರಿಕೆಗೆ ಇದರ ಕೊಡಗೆ ಏನು ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.
ಪ್ರಮುಖ ಕಾರ್ಯ: ಈ ದತ್ತಾಂಶವೂ ಅರಣ್ಯ ನಾಶದ ಸುಧಾರಣೆಗೆ ಸಹಾಯ ಮಾಡುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಬದಲಾಗುತ್ತಿರುವ ತಾಪಮಾನ ಮತ್ತು ಮಳೆಯ ನಮೂನೆಗಳು, ಅಭಿವೃದ್ಧಿ ಮತ್ತು ಕೃಷಿಯಂತಹ ಮಾನವ ಚಟುವಟಿಕೆಗಳ ಜೊತೆಗೆ - ಆರ್ದ್ರ ಭೂಮಿಯಲ್ಲಿನ ಪ್ರವಾಹದ ಪ್ರಮಾಣ, ಆವರ್ತನ ಮತ್ತು ಅವಧಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಡಿಮೆ ಅರ್ಥಮಾಡಿಕೊಳ್ಳಲಾಗಿದೆ.
ಪರಿಸರ ವ್ಯವಸ್ಥೆಯ ಬದಲಾವಣೆಗಳನ್ನು ಪತ್ತೆ ಹಚ್ಚುವುದರ ಜೊತೆಗೆ, ಇದು ಭೂಮಿಯ ಚಲನೆಯ ಮಾಹಿತಿಯನ್ನು ಸಂಗ್ರಹಿಸುತ್ತದೆ, ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು, ಭೂಕುಸಿತಗಳು ಮತ್ತು ಕುಸಿತ ಮತ್ತು ಮೇಲಕ್ಕೆ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. (ಎಎನ್ಐ)
ಇದನ್ನೂ ಓದಿ: ಪರೀಕ್ಷಾರ್ಥ ಗಗನಯಾನ ಯಶಸ್ವಿ: ಉಡಾವಣೆ ವಿಡಿಯೋ ಹಂಚಿಕೊಂಡ ಇಸ್ರೋ