ಸ್ಯಾನ್ಫ್ರಾನ್ಸಿಸ್ಕೋ: ಐಫೋನ್ 15 ಸರಣಿಯ ಮೊಬೈಲ್ಗಳು ಸೆಪ್ಟೆಂಬರ್ 22ರಿಂದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಕೊಳ್ಳಲು ಸರತಿ ಸಾಲಿನಲ್ಲಿ ಕಾದು ನಿಂತಿದ್ದಾರೆ. ಈ ಹಿಂದಿನ ತಮ್ಮ ಐಫೋನ್ಗಳಿಗಿಂತ ಮತ್ತಷ್ಟು ಉತ್ತಮ ಹಾಗೂ ವಿಶೇಷ ವಿನ್ಯಾಸ ಹಾಗೂ ವೈಶಿಷ್ಟ್ಯದಿಂದ ಈ ಐ ಫೋನ್ 15 ಸರಣಿ ಮೊಬೈಲ್ಗಳಿವೆ.
ಈ ಐಫೋನ್ ಸರಣಿಯ ಫೋನ್ನ ವಿನ್ಯಾಸ ಮತ್ತು ಕ್ಯಾಮೆರಾಗ ವಿಶ್ವದ ಶ್ರೀಮಂತ, ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಕೂಡ ಬೆರಗಾಗಿದ್ದಾರೆ. ಈ ಹಿನ್ನಲೆ ತಾವು ಕೂಡ ಐಫೋನ್ 15 ತೆಗೆದುಕೊಳ್ಳುವುದಾಗಿ ತಮ್ಮ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಐಫೋನ್ 15 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿರುವ ಅವರು, ಆ್ಯಪಲ್ ಸಿಇಒ ಟಿಮ್ ಕುಕ್ ಐಫೋನ್ 15 ಪ್ರೋನಲ್ಲಿ ಹೆಸರಾಂತ ಫೋಟೋಗ್ರಾಫರ್ ಸ್ಟೀಫನ್ ವಿಲ್ಕ್ಸ್ ಮತ್ತು ರೂಬೆನ್ ವು ತೆಗೆದಿದ್ದ ಒಂದು ಫೋಟೋವನ್ನು ಹಂಚಿಕೊಂಡಿದ್ದರು.
-
I’m buying one!
— Elon Musk (@elonmusk) September 22, 2023 " class="align-text-top noRightClick twitterSection" data="
">I’m buying one!
— Elon Musk (@elonmusk) September 22, 2023I’m buying one!
— Elon Musk (@elonmusk) September 22, 2023
ಈ ಫೋಟೋ ಮತ್ತು ವಿಡಿಯೋಗಳ ಉತ್ತಮ ಗುಣಮಟ್ಟಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ ಮಸ್ಕ್ ಐಫೋನ್ 15 ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ವಿಶ್ವದ ಹೆಸರಾಂತ ಫೋಟೋಗ್ರಾಫರ್ ಆಗಿರುವ ಸ್ಟೀಫನ್ ವಿಲ್ಕ್ಸ್ ಮತ್ತು ರೂಬೆನ್ ವು ಐಫೋನ್ 15 ಪ್ರೋ ಮಾಕ್ಸ್ನಲ್ಲಿ ತಮ್ಮ ಅದ್ಭುತ ಕ್ರಿಯಾತ್ಮಕತೆಯನ್ನು ತೋರಿಸಿದ್ದಾರೆ. ರೋದೆ ದ್ವೀಪ ಬೇಸಿಗೆಯ ಮರುಭೂಮಿ ವೈವಿಧ್ಯದ ಫೋಟೋಗಳು ಅದ್ಭುತ ದೃಶ್ಯಗಳು ಮೋಡಿ ಮಾಡಿದವು ಎಂದು ಕುಕ್ ಎಕ್ಸ್ನಲ್ಲಿ ಶುಕ್ರವಾರ ಪೋಸ್ಟ್ ಮಾಡಿದ್ದರು.
ಈ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಸ್ಕ್ ಈ ಸುಂದರ ಚಿತ್ರಗಳು ಮತ್ತು ವಿಡಿಯೋಗಳು ಅದ್ಭುತ ಎಂದಿದ್ದಾರೆ.
ಮಸ್ಕ್ 2022ರಲ್ಲಿ ಟ್ವಿಟರ್ ಖರೀದಿಸಿದ ಬಳಿಕ ಆ್ಯಪಲ್ ಜೊತೆಗೆ ಮಿಶ್ರ ಸಂಬಂಧವನ್ನು ಕಾಯ್ದುಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕುಕ್, ಮಸ್ಕ್ ಎಕ್ಸ್ನಲ್ಲಿ ಇಷ್ಟಪಡದ ಕೆಲವು ವಿಷಯವಿದೆ ಎಂದಿದ್ದರು.
ಅಲ್ಲದೆ ಮೈಕ್ರೋಬ್ಲಾಕಿಂಗ್ ತಾಣವೂ ಯೆಹೂದಿ ವಿರೋಧಿಯಾಗಿ ಕೆಲವೊಮ್ಮೆ ಕಾಣುತ್ತದೆ. ಟ್ವಿಟರ್ ಪ್ರಮುಖ ಆಸ್ತಿಯಾಗಿದೆ ಎಂದ ಅವರು ಎಕ್ಸ್ ಜೊತೆಗೆ ಜಾಹೀರಾತು ಮಾಡುತ್ತೀರಾ ಎಂದಿದ್ದಕ್ಕೆ ಅದಕ್ಕಾಗಿ ನಿರಂತರವಾಗಿ ಕೇಳಲಾಗುತ್ತಿದೆ ಎಂದು ಉತ್ತರಿಸಿದ್ದರು.
ಐ ಫೋನ್ 15 ಕ್ಯಾಮರಾ: ಮುಖ್ಯ ಕ್ಯಾಮರಾ ಸೆನ್ಸಾರ್ನಲ್ಲಿ 48 ಮೆಗಾಪಿಕ್ಸೆಲ್ ಇರಲಿದೆ. ಮುಖ್ಯ ವೈಡ್ ಕ್ಯಾಮರಾ ಮತ್ತು ಅಲ್ಟ್ರಾವೈಡ್ ಕ್ಯಾಮರಾಕ್ಕೆ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಬಹುಮುಖ್ಯವಾಗಿ, ಈ ಕ್ಯಾಮರಾದಲ್ಲಿ ಈಗ ಮತ್ತಷ್ಟು ಉತ್ತಮ ವಿಡಿಯೋ ಸೆರೆಹಿಡಿಯಬಹುದು. ಇದನ್ನು ಆ್ಯಪಲ್ನ ಮುಂಬರುವ ವಿಷನ್ ಪ್ರೊನಲ್ಲಿ ವೀಕ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: 'ಮೇಕ್ ಇನ್ ಇಂಡಿಯಾ' ಐಫೋನ್ 15 ಸಿರೀಸ್ ಮೊಬೈಲ್ ಬೆಲೆ, ಡಿಸ್ಕೌಂಟ್ ಸೇರಿದಂತೆ ಇಲ್ಲಿದೆ ಸಂಪೂರ್ಣ ಮಾಹಿತಿ