ETV Bharat / science-and-technology

2023ರಲ್ಲಿ ಭಾರತೀಯರು ಅತಿಹೆಚ್ಚು Google Search ಮಾಡಿದ ವಿಷಯಗಳೇನು? ಇಲ್ಲಿದೆ ಮಾಹಿತಿ - ಗೂಗಲ್​ನ ಟಾಪ್ ಟ್ರೆಂಡಿಂಗ್

ಈ ವರ್ಷ ಗೂಗಲ್​ ಸರ್ಚ್​ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ.

Chandrayaan-3, ChatGPT rule Google Search in India this year

author img

By ETV Bharat Karnataka Team

Published : Dec 11, 2023, 3:30 PM IST

ನವದೆಹಲಿ: 2023ನೇ ವರ್ಷ ಕೊನೆಗೊಳ್ಳುತ್ತಿದ್ದಂತೆ ಈ ವರ್ಷ ಭಾರತದಲ್ಲಿ ಗೂಗಲ್ ಸರ್ಚ್​​ನಲ್ಲಿ ಜನ ಅತ್ಯಧಿಕ ಹುಡುಕಾಡಿದ ವಿಷಯಗಳಾವವು ಎಂಬ ಪಟ್ಟಿಯನ್ನು ಗೂಗಲ್ ಸೋಮವಾರ ಬಿಡುಗಡೆ ಮಾಡಿದೆ. ಈ ವರ್ಷ ಚಂದ್ರಯಾನ -3 ಮತ್ತು ಚಾಟ್ ಜಿಪಿಟಿ ಶಬ್ದಗಳನ್ನು ಜನ ಅತಿ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.

"ಚಂದ್ರಯಾನ -3 ರ ಐತಿಹಾಸಿಕ ಯಶಸ್ಸು ಈ ವರ್ಷದ ಅತ್ಯಂತ ಪ್ರಮುಖ ಸುದ್ದಿಯಾಗಿದೆ. ದೇಶ ವಿದೇಶಗಳಲ್ಲಿ ಜನ ಈ ಬಗ್ಗೆ ಬಹಳಷ್ಟು ಮಾಹಿತಿ ಜಾಲಾಡಿದ್ದಾರೆ" ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ. ಇನ್ನು What Is ಅಥವಾ ಹಾಗೆಂದರೇನು ಎಂಬ ಕೀ ವರ್ಡ್​ನಿಂದ ಆರಂಭವಾಗುವ ಸರ್ಚ್ ವಿಚಾರದಲ್ಲಿ ಜಿ20 ಅಧ್ಯಕ್ಷತೆ (G20 presidency) ವಿಷಯ ಮುಂಚೂಣಿಯಲ್ಲಿದೆ.

ಇಸ್ರೇಲ್ ನ್ಯೂಸ್ ಮತ್ತು ಟರ್ಕಿ ಭೂಕಂಪದ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದು, ಅದರ ಜೊತೆಗೆ ಕರ್ನಾಟಕ ಚುನಾವಣಾ ಫಲಿತಾಂಶಗಳು ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆಯೂ ಹೆಚ್ಚಾಗಿ ಹುಡುಕಾಡಿದ್ದಾರೆ. ಭಾರತದ ಜನರು ಮ್ಯಾಥ್ಯೂ ಪೆರ್ರಿ ('ಫ್ರೆಂಡ್ಸ್'ನ ಚಾಂಡ್ಲರ್ ಬಿಂಗ್ ಎಂದು ಹೆಸರುವಾಸಿಯಾಗಿದ್ದಾರೆ), ಮಣಿಪುರ ಸುದ್ದಿ ಮತ್ತು ಒಡಿಶಾ ರೈಲು ಅಪಘಾತಗಳ ಬಗ್ಗೆಯೂ ಹುಡುಕಿದ್ದಾರೆ.

ಗೂಗಲ್​ನ ಟಾಪ್ ಟ್ರೆಂಡಿಂಗ್ 'ಹೌ ಟು' (How To) ದೊಂದಿಗೆ ಪ್ರಾರಂಭವಾಗುವ ಪ್ರಶ್ನೆಗಳ ಪೈಕಿ ಜನರು ಮನೆಮದ್ದುಗಳಿಂದ ಚರ್ಮ ಮತ್ತು ಕೂದಲಿಗೆ ಸೂರ್ಯನ ಹಾನಿಯನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದಾರೆ. ಅನೇಕರು ಜುಡಿಯೋ, ಜಿಮ್​ಗಳು, ಬ್ಯೂಟಿ ಪಾರ್ಲರ್​ಗಳು ಮತ್ತು ಚರ್ಮರೋಗ ತಜ್ಞರ ಬಗ್ಗೆ ಮಾಹಿತಿ ಸರ್ಚ್ ಮಾಡಿದ್ದಾರೆ.

ಕ್ರಿಕೆಟ್ ವಿಶ್ವಕಪ್ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯಗಳ ಬಗ್ಗೆ ಪ್ರಶ್ನೆಗಳು ಈ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ ಎಂದು ಗೂಗಲ್ ಹೇಳಿದೆ. ಶುಬ್ಮನ್ ಗಿಲ್ ಮತ್ತು ರಚಿನ್ ರವೀಂದ್ರ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಟಾಪ್ ಟ್ರೆಂಡಿಂಗ್ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ.

ಚಲನಚಿತ್ರಗಳ ವಿಚಾರದಲ್ಲಿ ಶಾರುಖ್ ಖಾನ್ ಅವರ 'ಜವಾನ್' ಟಾಪ್ ಟ್ರೆಂಡಿಂಗ್ ಸ್ಥಳೀಯ ಚಲನಚಿತ್ರ ಹುಡುಕಾಟವಾಗಿದೆ ಮತ್ತು ಜಾಗತಿಕವಾಗಿ #3 ಟಾಪ್ ಟ್ರೆಂಡಿಂಗ್ ಆಗಿದೆ. 'ಗದರ್ 2' ಮತ್ತು 'ಪಠಾಣ್' ಸಹ ಸ್ಥಳೀಯ ಮತ್ತು ವಿಶ್ವಾದ್ಯಂತ ಟ್ರೆಂಡಿಂಗ್ ಚಲನಚಿತ್ರಗಳಾಗಿ ಸ್ಥಾನ ಗಳಿಸಿವೆ. ನಟಿ ಕಿಯಾರಾ ಅಡ್ವಾಣಿ ಭಾರತದ ಟ್ರೆಂಡಿಂಗ್ ಪೀಪಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಟಾಪ್ ಟ್ರೆಂಡಿಂಗ್ ಜಾಗತಿಕ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟಾಪ್ 10 ರ ಪೈಕಿ ಆರರಲ್ಲಿ, ಸ್ಥಳೀಯ ಒಟಿಟಿ ವಿಷಯವು ಟ್ರೆಂಡಿಂಗ್ ಶೋಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಒಟಿಟಿಗಳಲ್ಲಿ 'ಫರ್ಜಿ', 'ಅಸುರ್' ಮತ್ತು ರಾಣಾ ನಾಯ್ಡು ಅತಿ ಹೆಚ್ಚು ಹುಡುಕಲ್ಪಟ್ಟಿವೆ.

ಇದನ್ನೂ ಓದಿ : 2023ರಲ್ಲಿ ಬ್ಲೂ-ಕಾಲರ್ ನೇಮಕಾತಿ ಶೇ 7.4ರಷ್ಟು ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.