ಖಗೋಳ ಭೌತಶಾಸ್ತ್ರಜ್ಞರು ಮತ್ತು ಹವ್ಯಾಸಿ ಗಗನವೀಕ್ಷಕರು ಇತ್ತೀಚೆಗೆ ಚಂದ್ರನ ಸನಿಹದಲ್ಲಿರುವ ಗ್ರಹವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಚಂದ್ರ ಮತ್ತು ಶುಕ್ರ ಗ್ರಹವು ಅತ್ಯಂತ ಸಮೀಪದಲ್ಲಿ ಗೋಚರಿಸಿದ ಅಪರೂಪದ ಘಟನೆ ಶುಕ್ರವಾರ ಸಂಜೆ ಬಾನಂಗಳದಲ್ಲಿ ಕಂಡುಬಂದಿದೆ. ಇದಾದ ಕೆಲಹೊತ್ತಲ್ಲಿ ಕ್ರಮೇಣ ಶುಕ್ರವು ಚಂದ್ರನ ಹಿಂದೆ ಕಣ್ಮರೆಯಾಯಿತು. ಇವೆರಡೂ ಗ್ರಹಗಳು ಮೈಲುಗಳಷ್ಟು ದೂರದಲ್ಲಿದ್ದರೂ ಸಹ ಅವು ಒಟ್ಟಿಗೆ ಪರಸ್ಪರ ಜೋಡಿಸಲ್ಪಟ್ಟಂತೆ ಭಾಸವಾಗುತ್ತಿದ್ದವು. ಎರಡು ಆಕಾಶಕಾಯಗಳು ಪರಸ್ಪರ ಹತ್ತಿರ ಕಾಣಿಸಿಕೊಂಡಾಗ 'ಅಪರೂಪದ ಗ್ರಹಗಳ ಸಂಯೋಗ' ಸಂಭವಿಸುತ್ತದೆ.
-
Look westward to find the Moon as a beautiful slim crescent this evening after sunset, hanging just below blazing-bright Venus. Tomorrow evening, look west again to spot the Moon once more, this time shining from above Venus.
— NASA (@NASA) March 23, 2023 " class="align-text-top noRightClick twitterSection" data="
Spot the duo? Share your pictures. pic.twitter.com/svHdZToovq
">Look westward to find the Moon as a beautiful slim crescent this evening after sunset, hanging just below blazing-bright Venus. Tomorrow evening, look west again to spot the Moon once more, this time shining from above Venus.
— NASA (@NASA) March 23, 2023
Spot the duo? Share your pictures. pic.twitter.com/svHdZToovqLook westward to find the Moon as a beautiful slim crescent this evening after sunset, hanging just below blazing-bright Venus. Tomorrow evening, look west again to spot the Moon once more, this time shining from above Venus.
— NASA (@NASA) March 23, 2023
Spot the duo? Share your pictures. pic.twitter.com/svHdZToovq
ಈ ದೃಶ್ಯದ ಕೆಲವು ಫೋಟೋಗಳನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ(ಯುಎಸ್‌ಎ) ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. "ಸೂರ್ಯಾಸ್ತದ ನಂತರ ಚಂದ್ರ ಸುಂದರ, ತೆಳ್ಳನೆಯ ಅರ್ಧಚಂದ್ರಾಕಾರವಾಗಿ ಕಾಣಿಸಿದ್ದು, ಆತನ ಪಶ್ಚಿಮಕ್ಕೆ ಪ್ರಜ್ವಲಿಸುವ-ಪ್ರಕಾಶಮಾನವಾದ ಶುಕ್ರ ಕೆಳಗೆ ನೇತಾಡುತ್ತಿದ್ದಂತೆ ಕಂಡುಬಂದಿದೆ" ಎಂದು ತಿಳಿಸಿದೆ.
-
Today Venus and Moon will be involved in an event known as conjunction when they would "appear" to come very close to each other to an observer from planet 🌍. In effect they would be along the same line of sight (but still far away from each other). Enjoy this celestial event! https://t.co/TF1AOYi6ym
— Astronomical Soc. India Outreach and Education (@asipoec) March 24, 2023 " class="align-text-top noRightClick twitterSection" data="
">Today Venus and Moon will be involved in an event known as conjunction when they would "appear" to come very close to each other to an observer from planet 🌍. In effect they would be along the same line of sight (but still far away from each other). Enjoy this celestial event! https://t.co/TF1AOYi6ym
— Astronomical Soc. India Outreach and Education (@asipoec) March 24, 2023Today Venus and Moon will be involved in an event known as conjunction when they would "appear" to come very close to each other to an observer from planet 🌍. In effect they would be along the same line of sight (but still far away from each other). Enjoy this celestial event! https://t.co/TF1AOYi6ym
— Astronomical Soc. India Outreach and Education (@asipoec) March 24, 2023
ಇದನ್ನೂ ಓದಿ: ಇಸ್ರೋ ಜಪಾನ್ ಏಜೆನ್ಸಿಯೊಂದಿಗೆ ಚಂದ್ರನ ಮೇಲೆ ಮಿಷನ್ ಉಡಾವಣೆ ಬಗ್ಗೆ ಚರ್ಚಿಸುತ್ತಿದೆ: ಎಸ್ ಸೋಮನಾಥ್
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ಔಟ್‌ರೀಚ್ ಆ್ಯಂಡ್ ಎಜುಕೇಶನ್ ಸಹ ಟ್ವೀಟ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, "ಇದನ್ನು ಶುಕ್ರ ಮತ್ತು ಚಂದ್ರನ ಸಂಯೋಗ ಎಂದು ಹೇಳಬಹುದು. ಆಕಾಶದಲ್ಲಿ ನಡೆದ ಘಟನೆ ನೋಡಿ ಆನಂದಿಸಿ" ಎಂದು ತಿಳಿಸಿ ಅಪರೂಪದ ಫೋಟೋ ಹಂಚಿಕೊಂಡಿದೆ.
-
#Moon is not lonely tonight 🌒🤍#venus pic.twitter.com/64Q6KaEypu
— Shubham raj (@coolshu07) March 24, 2023 " class="align-text-top noRightClick twitterSection" data="
">#Moon is not lonely tonight 🌒🤍#venus pic.twitter.com/64Q6KaEypu
— Shubham raj (@coolshu07) March 24, 2023#Moon is not lonely tonight 🌒🤍#venus pic.twitter.com/64Q6KaEypu
— Shubham raj (@coolshu07) March 24, 2023
ಅಲ್ಪಾವಧಿಗೆ ಗೋಚರಿಸಿದ ಈ ದೃಶ್ಯವನ್ನು ವೀಕ್ಷಿಸಿದ ಅನೇಕರು ತಮ್ಮ ಫೋನ್‌ಗಳಲ್ಲಿ ಫೋಟೋ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ನೋಡಿದ ಕೆಲವು ನೆಟಿಜನ್ಸ್, "ಚಂದ್ರ ಈ ರಾತ್ರಿ ಏಕಾಂಗಿಯಾಗಿಲ್ಲ" ಎಂದು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಈ ದೃಶ್ಯವನ್ನು "ಉಸಿರು" ಎಂದೇ ಬಣ್ಣಿಸಿದ್ದಾರೆ.
ಇದನ್ನೂ ಓದಿ: ರೆಡ್ ಪ್ಲಾನೆಟ್ ಡೇ: ಮಂಗಳನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಆಸಕ್ತಿದಾಯಕ ಸಂಗತಿಗಳು..
-
A close approach of March 24th Waxing Crescent Moon and Venus happening right now !#moon #venus pic.twitter.com/oi1i1MGktg
— Diwankar Singh (@diwankar_singh) March 24, 2023 " class="align-text-top noRightClick twitterSection" data="
">A close approach of March 24th Waxing Crescent Moon and Venus happening right now !#moon #venus pic.twitter.com/oi1i1MGktg
— Diwankar Singh (@diwankar_singh) March 24, 2023A close approach of March 24th Waxing Crescent Moon and Venus happening right now !#moon #venus pic.twitter.com/oi1i1MGktg
— Diwankar Singh (@diwankar_singh) March 24, 2023
ಗುರು-ಶುಕ್ರ ಗ್ರಹಗಳ ಜೋಡಾಟ: ಈ ಹಿಂದೆ ಅಂದ್ರೆ, ಮಾರ್ಚ್ 1 ಮತ್ತು 2 ರಂದು ಸಂಜೆ ಸಮಯದಲ್ಲಿ ಪಶ್ಚಿಮ ಆಕಾಶದಲ್ಲಿ ಗುರು ಹಾಗೂ ಶುಕ್ರ ಎರಡೂ ಗ್ರಹಗಳು ಸುಂದರವಾಗಿ ಗೋಚರಿಸಿಕೊಂಡಿದ್ದವು. ಈ ಬೆಳವಣಿಗೆ ನಡೆದ ಕೆಲವು ದಿನಗಳ ನಂತರ ಇದೀಗ ಶುಕ್ರ ಮತ್ತು ಚಂದ್ರ ಸಮೀಪವಿದ್ದಂತೆ ಕಾಣಿಸಿಕೊಂಡಿದೆ.
ಶುಕ್ರ ಗ್ರಹ: ಶುಕ್ರ ಗ್ರಹವು ಸೂರ್ಯನಿಗೆ ಎರಡನೇ ಅತಿ ಸಮೀಪದಲ್ಲಿರುವ ಗ್ರಹ. ಚಂದ್ರನ ನಂತರ ರಾತ್ರಿ ವೇಳೆ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣಿಸುವ ಕಾಯ. ಈ ಗ್ರಹವು ಮುಂಜಾನೆ/ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ.