ETV Bharat / science-and-technology

ಫೆಬ್ರವರಿಯಲ್ಲಿ ಫೇಸ್​ಬುಕ್, ಇನ್​ಸ್ಟಾದಲ್ಲಿನ 38 ಮಿಲಿಯನ್ ಕಂಟೆಂಟ್ ತೆಗೆದುಹಾಕಿದ ಮೆಟಾ - ಫೇಸ್‌ಬುಕ್​ ಮತ್ತು ಇನ್‌ಸ್ಟಾಗ್ರಾಮ್​

ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ಭಾರತದಲ್ಲಿ ಫೇಸ್‌ಬುಕ್​ ಮತ್ತು ಇನ್‌ಸ್ಟಾಗ್ರಾಮ್​ನಲ್ಲಿನ 28 ಮಿಲಿಯನ್ ಕಂಟೆಂಟ್‌ಗಳನ್ನು ತೆಗೆದು ಹಾಕಿದೆ.

Meta takes down 28 mn bad pieces of content on FB, Instagram in India

author img

By

Published : Apr 3, 2023, 7:54 PM IST

ನವದೆಹಲಿ : 2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಫೇಸ್​ಬುಕ್​ನಲ್ಲಿ 13 ನೀತಿಗಳು (ಕಂಪನಿ ಪಾಲಿಸಿ) ಮತ್ತು ಇನ್​ಸ್ಟಾಗ್ರಾಮ್​ನಲ್ಲಿ 12 ನೀತಿಗಳ ವಿಚಾರದಲ್ಲಿ 28 ಮಿಲಿಯನ್ ಕಂಟೆಂಟ್‌ಗಳನ್ನು ಮೆಟಾ ತೆಗೆದುಹಾಕಿದೆ. ಫೆಬ್ರುವರಿ 1 ರಿಂದ ಫೆಬ್ರವರಿ 28 ರ ಅವಧಿಯಲ್ಲಿ ಮೆಟಾ ಫೇಸ್​ಬುಕ್​ನಲ್ಲಿನ 13 ನೀತಿಗಳ ವಿಚಾರದಲ್ಲಿ 24.8 ಮಿಲಿಯನ್ ಕಂಟೆಂಟ್ ತುಣುಕುಗಳು ಮತ್ತು ಇನ್​ಸ್ಟಾಗ್ರಾಮ್​ನಲ್ಲಿ 12 ನೀತಿಗಳ ವಿಚಾರದಲ್ಲಿ 3.3 ಮಿಲಿಯನ್ ಕಂಟೆಂಟ್ ತುಣುಕುಗಳನ್ನು ತೆಗೆದುಹಾಕಿದೆ.

ನಿರ್ದಿಷ್ಟ ನಿಯಮಗಳ ಉಲ್ಲಂಘನೆಗಳಿಗಾಗಿ ಅದನ್ನು ವರದಿ ಮಾಡಲು ಪೂರ್ವ ಸ್ಥಾಪಿತ ಚಾನಲ್‌ಗಳು, ಬಳಕೆದಾರರು ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಬಹುದಾದ ಸ್ವಯಂ ಪರಿಹಾರ ಹರಿವುಗಳು, ಖಾತೆ ಹ್ಯಾಕ್ ಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳು ಇತ್ಯಾದಿಗಳ ವಿಚಾರದಲ್ಲಿ ಮೇಲೆ ತಿಳಿಸಲಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಟಾ ತನ್ನ ಮಾಸಿಕ ಐಟಿ ನಿಯಮ ಪಾಲನೆ ವರದಿಯಲ್ಲಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ) ಹೇಳಿದೆ.

ಫೆಬ್ರವರಿಯಲ್ಲಿ ಮೆಟಾ ಭಾರತದ ಗ್ರೀವನ್ಸ್ ಮೆಕ್ಯಾನಿಸಮ್​ (ಕುಂದುಕೊರತೆ ಪರಿಹಾರ ವಿಧಾನ) ಮೂಲಕ 1,647 ವರದಿಗಳನ್ನು ಸ್ವೀಕರಿಸಿತ್ತು ಮತ್ತು ಆ ವರದಿಗಳಲ್ಲಿ ನೂರಕ್ಕೆ ನೂರರಷ್ಟು ವರದಿಗಳಿಗೆ ಪ್ರತಿಕ್ರಿಯಿಸಿತು. ಈ ವರದಿಗಳಲ್ಲಿ, 585 ಪ್ರಕರಣಗಳಲ್ಲಿ ಬಳಕೆದಾರರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ನಾವು ಸಾಧನಗಳನ್ನು ಒದಗಿಸಿದ್ದೇವೆ ಎಂದು ಮೆಟಾ ತಿಳಿಸಿದೆ. ವಿಶೇಷ ಪರಿಶೀಲನೆಯ ಅಗತ್ಯವಿರುವ ಇತರ 1,062 ವರದಿಗಳಲ್ಲಿ, ಮೆಟಾ ತನ್ನ ನೀತಿಗಳ ಪ್ರಕಾರ ವಿಷಯವನ್ನು ಪರಿಶೀಲಿಸಿದೆ ಮತ್ತು ಒಟ್ಟು 379 ವರದಿಗಳ ಮೇಲೆ ಕ್ರಮ ಕೈಗೊಂಡಿದೆ. ಉಳಿದ 683 ವರದಿಗಳನ್ನು ಪರಿಶೀಲಿಸಲಾಗಿದೆ. ಆದರೆ, ಅವುಗಳ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೆಟಾ ಮಾಹಿತಿ ನೀಡಿದೆ.

ಮೆಟಾ ಅದೇ ಅವಧಿಯಲ್ಲಿ ಇನ್​ಸ್ಟಾಗ್ರಾಮ್​​ನಲ್ಲಿ ಗ್ರೀವನ್ಸ್ ಮೆಕ್ಯಾನಿಸಮ್​ ಕಾರ್ಯವಿಧಾನದ ಮೂಲಕ 14,216 ವರದಿಗಳನ್ನು ಸ್ವೀಕರಿಸಿದೆ ಮತ್ತು ಆ ವರದಿಗಳಲ್ಲಿ ನೂರಕ್ಕೆ ನೂರರಷ್ಟು ಪ್ರತಿಕ್ರಿಯಿಸಿದೆ. ಹೊಸ ಐಟಿ ನಿಯಮಗಳು 2021 ರ ಅಡಿ, 5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಬೃಹತ್ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮಾಸಿಕ ಅನುಸರಣೆ ವರದಿಗಳನ್ನು ಪ್ರಕಟಿಸಬೇಕು.

ನಮ್ಮ ಮಾನದಂಡಗಳಿಗೆ ವಿರುದ್ಧವಾಗಿರುವ ಎಷ್ಟು ಕಂಟೆಂಟ್​ಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು (ಪೋಸ್ಟ್‌ಗಳು, ಫೋಟೋಗಳು, ವಿಡಿಯೋಗಳು ಅಥವಾ ಕಾಮೆಂಟ್‌ಗಳಂತಹವು) ನಾವು ಅಳೆಯುತ್ತೇವೆ. ಯಾವುದೇ ಬಳಕೆದಾರರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಫೇಸ್​​ಬುಕ್ ಅಥವಾ ಇನ್​ಸ್ಟಾಗ್ರಾಮ್​ನಿಂದ ಕಂಟೆಂಟ್ ಅನ್ನು ತೆಗೆದುಹಾಕುವುದು ಅಥವಾ ಫೋಟೋಗಳು, ವಿಡಿಯೋಗಳನ್ನು ತೆಗೆದುಹಾಕುವುದು ಮುಂತಾದ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಮೆಟಾ ಹೇಳಿದೆ.

Meta ತನ್ನನ್ನು ತಾನು ಸಮುದಾಯಗಳನ್ನು ಸಂಪರ್ಕಿಸಲು ಮತ್ತು ಹುಡುಕಲು ಮತ್ತು ವ್ಯಾಪಾರಗಳನ್ನು ಬೆಳೆಸಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ನಿರ್ಮಿಸುವ ಕಂಪನಿ ಎಂದು ಹೇಳಿಕೊಳ್ಳುತ್ತದೆ. ಮೆಟಾ ತನ್ನನ್ನು ತಾನು ಸಾಮಾಜಿಕ ತಂತ್ರಜ್ಞಾನ ಕಂಪನಿಯಾಗಿ ಮಾರಾಟ ಮಾಡಿಕೊಳ್ಳುತ್ತದೆ. ವರ್ಚುಯಲ್ ರಿಯಾಲಿಟಿ (ವಿಆರ್), ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಮತ್ತು ಸ್ಮಾರ್ಟ್ ಗ್ಲಾಸ್‌ಗಳಂತಹ ಸೇವೆಗಳನ್ನು ಮೆಟಾ ನೀಡುತ್ತಿದೆ.

ಇದನ್ನೂ ಓದಿ : Explainer: ಸೈಬರ್ ವಿಮೆ, ಅಗತ್ಯ ಮತ್ತು ಉಪಯೋಗಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.