ETV Bharat / science-and-technology

ಭಾರತದಲ್ಲಿ ಉತ್ಪಾದನೆ ಆರಂಭಿಸಲು ಸಜ್ಜಾದ ಲಂಡನ್​ ಮೂಲದ ನಥಿಂಗ್​ ಫೋನ್​ 2 - ಲಂಡನ್​ ಮೂಲದ ನಥಿಂಗ್​​​ ಸ್ಮಾರ್ಟ್​ ಫೋನ್

ಮೊದಲ ಫೋನ್​ನಲ್ಲಿ ತನ್ನ ವಿಶೇಷ ವೈಶಿಷ್ಟ್ಯಗಳಿಂದ ಗ್ರಾಹಕರ ಸೆಳೆದ ನಥಿಂಗ್​ (2) ಇದೀಗ ಭಾರತದಲ್ಲೇ ಉತ್ಪಾದನೆಗೊಳ್ಳುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದ ದರದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ.

London-based Nothing  2 Phone set to start production in India

author img

By

Published : Jun 5, 2023, 4:44 PM IST

ಬೆಂಗಳೂರು: ಮೊದಲ ಪ್ರಯತ್ನದಲ್ಲೇ ಎಲ್ಲರ ಗಮನ ಸೆಳೆದ ಸ್ಮಾರ್ಟ್​​ ಫೋನ್​ ಎಂದರೆ ಅದು ನಥಿಂಗ್.​ ಲಂಡನ್​ ಮೂಲದ ನಥಿಂಗ್​​​ ಸ್ಮಾರ್ಟ್​ ಫೋನ್ ಕಳೆದ ವರ್ಷ​ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿತು. ಈ ಬೆನ್ನಲ್ಲೇ ಇದೀಗ ಈ ಎಲೆಕ್ಟ್ರಾನಿಕ್​ ಬ್ರಾಂಡ್​ ತನ್ನ ಮುಂದಿನ ಉತ್ಪಾದನೆಯನ್ನು ಅಂದರೆ, ನಥಿಂಗ್ (2) ಸ್ಮಾರ್ಟ್​ಫೋನ್​ ಉತ್ಪಾದನೆ ಘಟಕ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ.

ತನ್ನ ಪಾರದರ್ಶಕ ವಿನ್ಯಾಸದ ಮೂಲಕ ನಥಿಂಗ್​ ಸ್ಮಾರ್ಟ್​ಫೋನ್​ ಎಲ್ಲರನ್ನು ಮೋಡಿ ಮಾಡಿತ್ತು. ಈ ವಿನ್ಯಾಸಕ್ಕೆ ಹೈಟೆಕ್​ ಉತ್ಪಾದನಾ ಪ್ರಕ್ರಿಯೆ ಮತ್ತು ಪರಿಣಿತ ಇಂಜಿನಿಯರ್​ಗಳು ಅಗತ್ಯವಾಗಿದ್ದಾರೆ. ಈ ಹಿನ್ನೆಲೆ ಭಾರತದಲ್ಲಿ ಈ ಉತ್ಪಾದನಾ ಸಾಮರ್ಥ್ಯಗಳು ಹೆಚ್ಚಿದ್ದು, ಇಲ್ಲಿ ಉತ್ಪಾದನೆ ಆರಂಭಿಸಲು ಮುಂದಾಗಿದೆ ಎಂದು ನಥಿಂಗ್​ ಇಂಡಿಯಾದ ವಿಪಿ ಮತ್ತು ಜಿಎಂ ಆಗಿರುವ ಮನು ಶರ್ಮಾ ತಿಳಿಸಿದ್ದಾರೆ.

ಭಾರತದಲ್ಲಿ ನಮ್ಮ ಉತ್ಪಾದನೆಯು ಸ್ಥಳೀಯ ಗ್ರಾಹಕರ ಮತ್ತು ಬೇಡಿಕೆಯ ಬುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾವು ಭಾರತದಲ್ಲಿ ಫೋನ್​(2) ಉತ್ಪಾದನೆ ಮಾಡುವುದನ್ನು ಘೋಷಿಸಲು ಹೆಮ್ಮೆಯಾಗುತ್ತಿದೆ. ಸಾಫ್ಟ್​ವೇರ್​ ಮತ್ತು ಹಾರ್ಡ್​ವೇರ್​​ನಲ್ಲಿ ಎರಡರಲ್ಲೂ ಸಮಾನವಾಗಿ ನಾವು ಅಭಿವೃದ್ಧಿ ಗುರಿ ಹೊಂದಿದ್ದೇವೆ. ಇದಕ್ಕಾಗಿ 100 ಮಂದಿ ಇನ್​ಹೌಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಥಿಂಗ್​ 1ಬಲ್ಲಿ ಇದನ್ನು ಹೊರಗಿನವರಿಗೆ ಗುತ್ತಿಗೆ ನೀಡಲಾಗಿತ್ತು ಎಂದಿದ್ದಾರೆ.

ಈ ಸ್ಮಾರ್ಟ್​​ಫೋನ್​ 200mAh ಬ್ಯಾಟರಿಯ ಮತ್ತು ಫೋನ್ (1) ಗಿಂತ 0.15-ಇಂಚಿನ ದೊಡ್ಡದಾದ ಪರದೆಯನ್ನು ಒಳಗೊಂಡಿದೆ. ಕಾರ್ಯಕ್ಷಮತೆಯ ಉತ್ತಮವಾಗಿದೆ. ಇನ್ನು ಕಳೆದ ತಿಂಗಳು ಫೋನ್​ 2 ಬಗ್ಗೆ ಮಾಹಿತಿ ನೀಡಿದ ನಥಿಂಗ್​ ಸಂಸ್ಥಾಪಕ ಕಾರ್ಲ್ ಪೀ ಅವರು ಫೋನ್ (2) ಅನ್ನು ಸ್ನಾಪ್‌ಡ್ರಾಗನ್ 8 ಸರಣಿಯ ಚಿಪ್‌ಸೆಟ್‌ನಿಂದ ನಡೆಸಲಾಗುವುದು ಎಂದು ಹೇಳಿದರು, ಇದು ಫೋನ್ (1) ನಿಂದ ಸ್ಪಷ್ಟ ಅಪ್‌ಗ್ರೇಡ್ ಆಗಿದೆ. ಫೋನ್ (1) ಗೆ ಹೋಲಿಸಿದರೆ ಫೋನ್ (2) ನಲ್ಲಿ ಅಪ್ಲಿಕೇಶನ್ ವೇಗವಾಗಿ ತೆರೆಯುತ್ತದೆ. ಒಟ್ಟಾರೆ 80 ಪ್ರತಿಶತದಷ್ಟು ಕಾರ್ಯಕ್ಷಮತೆಯ ಸುಧಾರಣೆ ಹೊಂದಿರಲಿದೆ ಎಂದಿದ್ದರು. ಬ್ರಿಟಿಷ್​ ಬೇಸಿಗೆಯ ಸಮಯದ ಅಂದರೆ ಜುಲೈನಲ್ಲಿ ಈ ಫೋನ್​ ಮಾರುಕಟ್ಟಗೆ ಬರಲಿದೆ ಎಂದು ಸಂಸ್ಥೆ ಈ ಹಿಂದೆ ತಿಳಿಸಿತು.

ನಥಿಂಗ್​ 2 ವಿಶೇಷತೆ: ಈ ಫೋನ್​ ಹಿಂದಿನ ಸರಣಿಗಿಂತ ದೊಡ್ಡ ಡಿಸ್​ಪ್ಲೇ ಹೊಂದಿರಲಿದೆ. ಡಿಸ್​ಪ್ಲೇ 6.7 ಇಂಚ್​ ಇರಲಿದೆ. ಮಧ್ಯಮ ಗಾತ್ರದ ಬಜೆಟ್​ ಹೊಂದಿರಲಿದೆ. ಫೋನ್​ 2 ಅನ್ನು ಸುಸ್ಥಿರ ಮಾರುಕಟ್ಟೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಇದು 4.700 mAh ಬ್ಯಾಟರಿ ಹೊಂದಿರಲಿದೆ. ಹಳೆಯದರಂತೆ ಇದು ಕೂಡ ಫಾಸ್ಟ್​ ಚಾರ್ಜಿಂಗ್​ ಹೊಂದಿರಲಿದೆ. ಇದನ್ನು 5ಜಿ ಫೋನ್​ಗೆ ಅನುಗುಣವಾಗಿ ರೂಪಿಸಲಿದೆ.

ಭಾರತದಲ್ಲಿ ನಥಿಂಗ್​: ನಥಿಂಗ್​ ಸಂಸ್ಥೆ ಹೇಳುವಂತೆ ಭಾರತದಲ್ಲಿ ತಮ್ಮ ನಾಲ್ಕು ಉತ್ಪನ್ನಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸಂಸ್ಥೆ ಹೊಂದಿದೆ. ನಥಿಂಗ್​ ಇಯರ್​(1), ನಥಿಂಗ್​ ಇಯರ್​ ಸ್ಟಿಕ್​, ನಥಿಂಗ್​ ಇಯರ್​(2) ಮತ್ತು ನಥಿಂಗ್​ ಫೋನ್​(1) ಅನ್ನು ಭಾರತದಲ್ಲಿ ಈಗಾಗಲೇ ಬಿಡುಗಡೆ ಮಾಡಿದೆ. ಸಂಸ್ಥೆ ಕೂಡ ದೇಶದಲ್ಲಿ ತಮ್ಮ ಗ್ರಾಹಕರ ಬೆಂಬಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಚಿಪ್​​ಸೆಟ್​ ಫೋನ್​ನ ಹಾರ್ಟ್​ ಆ್ಯಂಟ್​ ಬ್ರೈನ್: ಗ್ರಾಹಕರಲ್ಲಿ ಹೆಚ್ಚಿದ ಅರಿವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.