ETV Bharat / science-and-technology

ಭಾರತದಲ್ಲಿ ಐಡಿ ವೆರಿಫಿಕೇಶನ್ ಆರಂಭಿಸಿದ ಲಿಂಕ್ಡ್​ ಇನ್ - ಡಿಜಿಲಾಕರ್ ಆನ್ಲೈನ್ ವ್ಯಾಲೆಟ್​ ಮೂಲಕ ಲಿಂಕ್ಡ್​ ಇನ್

ವಿಶ್ವದ ಅತಿದೊಡ್ಡ ವೃತ್ತಿಪರ ಸೋಷಿಯಲ್ ನೆಟ್​ವರ್ಕಿಂಗ್ ಸೈಟ್ ಆಗಿರುವ ಲಿಂಕ್ಡ್​ ಇನ್ ಬಳಕೆದಾರರ ಐಡೆಂಟಿಟಿ ವೆರಿಫಿಕೇಶನ್ ಸೌಲಭ್ಯ ಆರಂಭಿಸಿದೆ. ಆಧಾರ್ ಕಾರ್ಡ್ ಮೂಲಕ ಬಳಕೆದಾರರು ಐಡಿ ವೆರಿಫಿಕೇಶನ್ ಮಾಡಿಕೊಳ್ಳಬಹುದು.

LinkedIn introduces ID Verification feature in India

author img

By

Published : Jun 7, 2023, 12:29 PM IST

ನವದೆಹಲಿ : ವೃತ್ತಿಪರ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್ ಭಾರತೀಯ ಬಳಕೆದಾರರಿಗಾಗಿ ಐಡೆಂಟಿಟಿ ವೆರಿಫಿಕೇಶನ್ (ಗುರುತಿನ ಪರಿಶೀಲನೆ) ಸೌಲಭ್ಯವನ್ನು ಆರಂಭಿಸಿದೆ. "ಐಡೆಂಟಿಟಿ ವೆರಿಫಿಕೇಶನ್ ಎಂದರೆ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ನೀಡಲಾದ ಐಡಿ ದಾಖಲೆಯನ್ನು ಲಿಂಕ್ಡ್‌ಇನ್‌ನ ಪರಿಶೀಲನಾ ಪಾರ್ಟನರ್​ ಒಬ್ಬರು ಪರಿಶೀಲಿಸುವುದು ಎಂದರ್ಥ" ಎಂದು ಲಿಂಕ್ಡ್‌ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಥರ್ಡ್​ ಪಾರ್ಟಿ ಐಡೆಂಟಿಟಿ ಸೇವೆ ನೀಡುವ ಹೈಪರ್ ವರ್ಜ್ ಕಂಪನಿಯು, ಭಾರತ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವ ಡಿಜಿಲಾಕರ್ ಆನ್ಲೈನ್ ವ್ಯಾಲೆಟ್​ ಮೂಲಕ ಲಿಂಕ್ಡ್​ ಇನ್ ಗಾಗಿ ಬಳಕೆದಾರರ ಐಡೆಂಟಿಟಿ ವೆರಿಫಿಕೇಶನ್ ಸೇವೆ ನೀಡಲಿದೆ. ಮಾನ್ಯವಾದ ಆಧಾರ್ ಸಂಖ್ಯೆ ಮತ್ತು ಭಾರತೀಯ ಫೋನ್ ನಂಬರ್ ಅನ್ನು ಹೊಂದಿರುವ ಬಳಕೆದಾರರು ತಮ್ಮ ಐಡಿಯನ್ನು ವೆರಿಫಿಕೇಶನ್ ಮಾಡಿಸಿಕೊಳ್ಳಬಹುದು.

"ಲಿಂಕ್ಡ್‌ಇನ್‌ನಲ್ಲಿ ನೀವು ನಿಮ್ಮ ಗುರುತಿನ ನೈಜತನ ತೋರಿಸಿದಾಗ, ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಸಂಬಂಧಿಸಿದ ವೃತ್ತಿಪರ ಅವಕಾಶಗಳನ್ನು ಹುಡುಕಲು ನಿಮಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿದೆ" ಎಂದು ಗುಪ್ತಾ ಹೇಳಿದರು. ಬಳಕೆದಾರರ ಆಧಾರ್​ ನಲ್ಲಿನ ಖಾಸಗಿ ಮಾಹಿತಿಗೆ ಲಿಂಕ್ಡ್​ ಇನ್ ಯಾವುದೇ ಪ್ರವೇಶ ಹೊಂದಿರುವುದಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

"ನೀವು ಆಧಾರ್ ಹೊಂದಿಲ್ಲದಿದ್ದರೆ ಲಿಂಕ್ಡ್‌ಇನ್‌ನಲ್ಲಿ ಇತರ ವಿಧಾನಗಳನ್ನು ಬಳಸಿಕೊಂಡು ಐಡೆಂಟಿಟಿ ವೆರಿಫಿಕೇಶನ್ ಮಾಡಿಸಬಹುದು. ನಿಮ್ಮ ಕೆಲಸದ ಇಮೇಲ್ ಅಥವಾ ಕೆಲಸದ ದಾಖಲೆಗಳ ಮೂಲಕವೂ ನೀವು ಇದನ್ನು ಮಾಡಬಹುದು" ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್‌ ತಿಂಗಳಲ್ಲಿ ಕಂಪನಿಯು ಅಮೆರಿಕದಲ್ಲಿ ಐಡಿ ವೆರಿಫಿಕೇಶನ್ ಸೌಲಭ್ಯವನ್ನು ಪ್ರಾರಂಭಿಸಿತ್ತು ಮತ್ತು ಶೀಘ್ರದಲ್ಲೇ ಈ ಸೌಲಭ್ಯವನ್ನು ಇತರ ದೇಶಗಳಲ್ಲೂ ಪರಿಚಯಿಸಲು ಯೋಜಿಸಿದೆ.

ಡಿಜಿಲಾಕರ್ ಎಂಬುದು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿನ ಸರ್ಕಾರದ ಉಪಕ್ರಮವಾಗಿದೆ. ಡಾಕ್ಯುಮೆಂಟ್ ಅನ್ನು ಸಂಗ್ರಹಿಸಲು ಮತ್ತು ರುಜುವಾತುಗಳನ್ನು ಪರಿಶೀಲಿಸಲು ಇದನ್ನು ಬಳಸಲಾಗುತ್ತದೆ. ಡಿಜಿಲಾಕರ್​ನಲ್ಲಿ ನಿಮ್ಮ ಪ್ರಮುಖ ದಾಖಲೆಗಳಾದ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಶಾಲೆಯ ಮಾರ್ಕ್‌ಶೀಟ್‌ಗಳು, ವಿಮೆ ಪೇಪರ್‌ಗಳು ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು.

ಡಿಜಿಲಾಕರ್ ಕ್ಲೌಡ್‌ನಲ್ಲಿ ಮೂಲ ದಾಖಲೆಗಳ ಸುರಕ್ಷಿತ ಡಿಜಿಟಲ್ ದಾಖಲೆಯನ್ನು ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಳಕೆದಾರರ ಕೋರಿಕೆಯಂತೆ ವಿವಿಧ ದೃಢೀಕರಣ ಉದ್ದೇಶಗಳಿಗಾಗಿ ಅವುಗಳನ್ನು ಲಭ್ಯವಾಗುವಂತೆ ಮಾಡುತ್ತದೆ.

ಲಿಂಕ್ಡ್​ ಇನ್ ಇದು ವಿಶ್ವದ ಅತಿದೊಡ್ಡ ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾಗಿದೆ. ಇದು 756 ಮಿಲಿಯನ್ ಸದಸ್ಯರನ್ನು ಹೊಂದಿರುವ ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಪ್ರಾಥಮಿಕ ಲಿಂಕ್ಡ್‌ಇನ್ ಖಾತೆಯು ಉಚಿತವಾಗಿದೆ. ಪ್ರೀಮಿಯಂ ಖಾತೆಗಳು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತವೆ. ಲಿಂಕ್ಡ್‌ಇನ್ ವೃತ್ತಿಪರ ಉದ್ದೇಶಗಳಿಗಾಗಿ ತಯಾರಿಸಲಾದ ಸಾಮಾಜಿಕ ನೆಟ್‌ವರ್ಕ್ ಆಗಿದೆ.

ಉದ್ಯಮಿಗಳು, ಉದ್ಯೋಗಿಗಳು, ನೇಮಕಾತಿದಾರರು, ಇಂಟರ್ನ್‌ಶಿಪ್‌ಗಳನ್ನು ಹುಡುಕುತ್ತಿರುವ ಜನ ಅಥವಾ ಎಲ್ಲಾ ಸಂಭಾವ್ಯ ಕ್ಷೇತ್ರಗಳಿಂದ ಉದ್ಯೋಗಗಳನ್ನು ಹುಡುಕುವವರ ಅಗತ್ಯಗಳಿಗಾಗಿ ಇದನ್ನು ರೂಪಿಸಲಾಗಿದೆ. ಹೊಸ ಸಹಯೋಗಿಗಳು, ಹೊಸ ಕ್ಲೈಂಟ್‌ಗಳು ಅಥವಾ ಹೊಸ ಉದ್ಯೋಗವನ್ನು ಹುಡುಕಲು ನಿಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸಲು ಲಿಂಕ್ಡ್‌ಇನ್ ತುಂಬಾ ಉಪಯುಕ್ತವಾಗಿದೆ.

ಇದನ್ನೂ ಓದಿ : ಸ್ಯಾಮ್ಸಂಗ್ Galaxy F54 5G ಲಾಂಚ್: ಇದರ ಬೆಲೆ ಎಷ್ಟು ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.