ETV Bharat / science-and-technology

ಇಟಲಿ: ಲ್ಯಾಜಿಯೊದ ಕೋವಿಡ್ -19 ಲಸಿಕೆ ಪೋರ್ಟಲ್ ಹ್ಯಾಕ್! - ಕೋವಿಡ್ -19 ಲಸಿಕೆ ನೆಟ್‌ವರ್ಕ್

ಇಟಲಿಯ ಲ್ಯಾಜಿಯೊದ ಕೋವಿಡ್ -19 ಲಸಿಕೆ ನೆಟ್‌ವರ್ಕ್ ಮತ್ತು ಹೆಲ್ತ್ ಲ್ಯಾಜಿಯೊ ಪೋರ್ಟಲ್ ಸೇರಿದಂತೆ, ಆನ್‌ಲೈನ್ ಆರೋಗ್ಯ ವ್ಯವಸ್ಥೆಯ ನೆಟ್‌ವರ್ಕ್ ಹ್ಯಾಕರ್ ದಾಳಿಗೆ ಒಳಗಾಗಿದೆ. ಪರಿಣಾಮವಾಗಿ ನೆಟ್‌ವರ್ಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದ್ದು, ಲಸಿಕೆ ಹಾಕುವ ಕಾರ್ಯಕ್ರಮ ಸ್ಥಗಿತಗೊಂಡಿದೆ.

network
network
author img

By

Published : Aug 2, 2021, 8:39 PM IST

ರೋಮ್ (ಇಟಲಿ): ಇಟಾಲಿಯನ್ ರೀಜನ್ ಲ್ಯಾಜಿಯೊದ ಕೋವಿಡ್ -19 ಲಸಿಕೆ ನೆಟ್‌ವರ್ಕ್ ಮತ್ತು ಹೆಲ್ತ್ ಲ್ಯಾಜಿಯೊ ಪೋರ್ಟಲ್ ಸೇರಿದಂತೆ, ಆನ್‌ಲೈನ್ ಆರೋಗ್ಯ ವ್ಯವಸ್ಥೆಯ ನೆಟ್‌ವರ್ಕ್ ಹ್ಯಾಕರ್ ದಾಳಿಗೆ ಒಳಗಾಗಿದ್ದು, ನೆಟ್‌ವರ್ಕ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಲ್ಯಾಜಿಯೊ ಇಟಲಿಯ ಎರಡನೇ ಅತಿದೊಡ್ಡ ಪ್ರದೇಶವಾಗಿದೆ ಎಂದು ನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹ್ಯಾಕರ್ ದಾಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮಿತಿಗೊಳಿಸಲು ಲ್ಯಾಜಿಯೊ ಪ್ರಾದೇಶಿಕ ಸರ್ಕಾರವು ಎಲ್ಲ ರಕ್ಷಣಾ ಮತ್ತು ಪರಿಶೀಲನೆ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದೆ.

ಪೋರ್ಟಲ್ ನಿಷ್ಕ್ರಿಯಗೊಂಡ ಪರಿಣಾಮವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಮರು ಪ್ರಾರಂಭಗೊಳ್ಳಲು ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ. ವ್ಯವಸ್ಥೆ ಎಷ್ಟು ಸಮಯದವರೆಗೆ ಸ್ಥಗಿತಗೊಳ್ಳುತ್ತದೆ ಎಂಬುದರ ಕುರಿತು ಯಾವುದೇ ವಿವರಗಳನ್ನು ಅಥವಾ ಅಂದಾಜುಗಳನ್ನು ಒದಗಿಸಲಾಗಿಲ್ಲ.

ಹ್ಯಾಕರ್ ದಾಳಿಯ ಹೊರತಾಗಿಯೂ ಲ್ಯಾಜಿಯೊದ ಜನಸಂಖ್ಯೆಯ ಶೇಕಡಾ 70ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಸ್ಥಳೀಯ ಅಧಿಕಾರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.