ಶ್ರೀಹರಿಕೋಟಾ (ಆಂಧ್ರಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ GSLV-F12 ಮತ್ತು NVS-01 ಅನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು NavIC (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟೆಲೇಷನ್) ಸೇವೆಗಳ ನಿರಂತರತೆಯನ್ನು ಖಾತರಿಪಡಿಸುವ ಮಹತ್ವದ ಉಡಾವಣೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಶವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
-
#WATCH | Indian Space Research Organisation (ISRO), launches its advanced navigation satellite GSLV-F12 and NVS-01 from Sriharikota.
— ANI (@ANI) May 29, 2023 " class="align-text-top noRightClick twitterSection" data="
(Video: ISRO) pic.twitter.com/2ylZ8giW8U
">#WATCH | Indian Space Research Organisation (ISRO), launches its advanced navigation satellite GSLV-F12 and NVS-01 from Sriharikota.
— ANI (@ANI) May 29, 2023
(Video: ISRO) pic.twitter.com/2ylZ8giW8U#WATCH | Indian Space Research Organisation (ISRO), launches its advanced navigation satellite GSLV-F12 and NVS-01 from Sriharikota.
— ANI (@ANI) May 29, 2023
(Video: ISRO) pic.twitter.com/2ylZ8giW8U
NVS-01 ಭಾರತದ 2ನೇ ತಲೆಮಾರಿನ NavIC ಉಪಗ್ರಹಗಳಲ್ಲಿ ಮೊದಲನೆಯದು. ಇದು ವರ್ಧಿತ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 19 ನಿಮಿಷಗಳ ಹಾರಾಟದ ನಂತರ ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಸೇರಿಸಲಾಯಿತು ಎಂದು ಇಸ್ರೋ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. "ಸುಮಾರು 19 ನಿಮಿಷಗಳ ಹಾರಾಟದ ನಂತರ, NVS-O1 ಉಪಗ್ರಹವನ್ನು ನಿಖರವಾಗಿ ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಸೇರಿಸಲಾಯಿತು. ನಂತರ NVS-01 ಅನ್ನು ಉದ್ದೇಶಿತ ಜಿಯೋಸಿಂಕ್ರೋನಸ್ ಕಕ್ಷೆಗೆ ಕೊಂಡೊಯ್ಯುತ್ತದೆ" ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: ಬ್ರಿಟನ್‌ನ 36 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ
ಭಾರತೀಯ ಪ್ರಾದೇಶಿಕ ಉಪಗ್ರಹ ನ್ಯಾವಿಗೇಷನ್ ಸಿಸ್ಟಮ್ ಆಗಿರುವ ನಾವಿಕ್, ಜಿಪಿಎಸ್ ವ್ಯವಸ್ಥೆಯನ್ನು ಹೋಲುತ್ತದೆ. ಇದು ಭಾರತದಲ್ಲಿ ಮತ್ತು ಮುಖ್ಯ ಭೂಭಾಗದ ಸುತ್ತ 1,500 ಕಿಮೀ ವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿ ನಿಖರವಾದ ಮತ್ತು ನೈಜ ಸಮಯದ ನ್ಯಾವಿಗೇಶನ್ ಅನ್ನು ಒದಗಿಸುತ್ತದೆ. ನಾವಿಕ್ ಸಂಕೇತಗಳನ್ನು ಬಳಕೆದಾರರ ಲೊಕೇಶನ್ ಅನ್ನು 20 ಮೀಟರ್‌ಗಳಿಗಿಂತ ನಿಖರವಾಗಿ ಮತ್ತು 50 ನ್ಯಾನೊಸೆಕೆಂಡ್‌ಗಳಿಗಿಂತ ಉತ್ತಮ ಸಮಯದ ನಿಖರತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
-
GSLV back in action 🔥 https://t.co/5C4WqvUWm8
— ISRO Spaceflight (@ISROSpaceflight) May 29, 2023 " class="align-text-top noRightClick twitterSection" data="
">GSLV back in action 🔥 https://t.co/5C4WqvUWm8
— ISRO Spaceflight (@ISROSpaceflight) May 29, 2023GSLV back in action 🔥 https://t.co/5C4WqvUWm8
— ISRO Spaceflight (@ISROSpaceflight) May 29, 2023
ಮೊದಲ ಬಾರಿಗೆ ಪರಮಾಣು ಗಡಿಯಾರ ಬಳಕೆ: NVS-01 ನ್ಯಾವಿಗೇಷನ್ ಪೇಲೋಡ್‌ಗಳಾದ L1, L5 ಮತ್ತು S ಬ್ಯಾಂಡ್‌ಗಳನ್ನು ಒಳಗೊಂಡಿದೆ ಮತ್ತು ಹಿಂದಿನದಕ್ಕೆ ಹೋಲಿಸಿದರೆ ಈ ಎರಡನೇ ತಲೆಮಾರಿನ ಉಪಗ್ರಹವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಸಹ ಹೊಂದಿದೆ. ಉಡಾವಣೆಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ರುಬಿಡಿಯಂ ಪರಮಾಣು ಗಡಿಯಾರವನ್ನು ಇದೇ ಮೊದಲ ಬಾರಿಗೆ ಬಳಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ಹೊಸ ಪರೀಕ್ಷಾ ಕೇಂದ್ರದಲ್ಲಿ ಇಸ್ರೋದ ಸೆಮಿ-ಕ್ರಯೋಜೆನಿಕ್ ಎಂಜಿನ್ ಪರೀಕ್ಷೆ ಯಶಸ್ವಿ
ವಿಜ್ಞಾನಿಗಳು ದಿನಾಂಕ ಮತ್ತು ಸ್ಥಳವನ್ನು ನಿರ್ಧರಿಸಲು ಆಮದು ಮಾಡಿಕೊಂಡ ರುಬಿಡಿಯಮ್ ಪರಮಾಣು ಗಡಿಯಾರಗಳನ್ನು ಬಳಸುತ್ತಿದ್ದರು. ಈಗ, ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಅಭಿವೃದ್ಧಿಪಡಿಸಿದ ರುಬಿಡಿಯಮ್ ಪರಮಾಣು ಗಡಿಯಾರವನ್ನು ಇಸ್ರೊ ಬಳಕೆ ಮಾಡಿದೆ. ಇದು ಬೆರಳೆಣಿಕೆಯ ದೇಶಗಳು ಮಾತ್ರ ಹೊಂದಿರುವ ಪ್ರಮುಖ ತಂತ್ರಜ್ಞಾನವಾಗಿದೆ ಎಂದು ಇಸ್ರೊ ಹೇಳಿದೆ.
-
T-2️⃣8️⃣ minutes: ISRO's live broadcast of the GSLV-F12 mission has begun. Tune in here: https://t.co/TBijvEm7Ar pic.twitter.com/SI5SovMV8M
— ISRO Spaceflight (@ISROSpaceflight) May 29, 2023 " class="align-text-top noRightClick twitterSection" data="
">T-2️⃣8️⃣ minutes: ISRO's live broadcast of the GSLV-F12 mission has begun. Tune in here: https://t.co/TBijvEm7Ar pic.twitter.com/SI5SovMV8M
— ISRO Spaceflight (@ISROSpaceflight) May 29, 2023T-2️⃣8️⃣ minutes: ISRO's live broadcast of the GSLV-F12 mission has begun. Tune in here: https://t.co/TBijvEm7Ar pic.twitter.com/SI5SovMV8M
— ISRO Spaceflight (@ISROSpaceflight) May 29, 2023
ಇಸ್ರೋ ದೇಶದ ಸ್ಥಾನೀಕರಣ, ನ್ಯಾವಿಗೇಶನ್ ಮತ್ತು ಸಮಯದ ಅವಶ್ಯಕತೆಗಳನ್ನು ಪೂರೈಸಲು ವಿಶೇಷವಾಗಿ ನಾಗರಿಕ ವಿಮಾನಯಾನ ಮತ್ತು ಮಿಲಿಟರಿ ಅಗತ್ಯತೆಗಳಿಗೆ ಸಂಬಂಧಿಸಿದಂತೆ NavIC ನ್ಯಾವಿಗೇಷನ್ ಅನ್ನು ಅಭಿವೃದ್ಧಿಪಡಿಸಿದೆ. NavIC ಅನ್ನು ಮೊದಲು ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (IRNSS) ಎಂದು ಕರೆಯಲಾಗುತ್ತಿತ್ತು.
-
NVS-01 has been successfully placed into Geostationary Transfer Orbit!! Welcome back GSLV Mk-2! #GSLVF12 pic.twitter.com/z2EDDnmfkN
— ISRO Spaceflight (@ISROSpaceflight) May 29, 2023 " class="align-text-top noRightClick twitterSection" data="
">NVS-01 has been successfully placed into Geostationary Transfer Orbit!! Welcome back GSLV Mk-2! #GSLVF12 pic.twitter.com/z2EDDnmfkN
— ISRO Spaceflight (@ISROSpaceflight) May 29, 2023NVS-01 has been successfully placed into Geostationary Transfer Orbit!! Welcome back GSLV Mk-2! #GSLVF12 pic.twitter.com/z2EDDnmfkN
— ISRO Spaceflight (@ISROSpaceflight) May 29, 2023
ಇದನ್ನೂ ಓದಿ: ನ್ಯಾವಿಗೇಷನ್ ಉಪಗ್ರಹ NVS-01 ಉಡಾವಣೆಗೆ ಕೌಂಟ್ಡೌನ್ ಆರಂಭ