ETV Bharat / science-and-technology

2023ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತಷ್ಟು ಸಾಧನೆ.... ಸಿದ್ಧವಾಗ್ತಿವೆ ಮಹತ್ವದ ಯೋಜನೆಗಳು

author img

By

Published : Dec 31, 2022, 9:57 PM IST

2023 ಕ್ಕೆ ಇಸ್ರೋ ಸಂಸ್ಥೆಯಿಂದ ಹೊಸ ಪ್ರಯೋಗ- ಬಾಹ್ಯಾಕಾಶ ಏರಲು ತಯಾರಾದ ಚಂದ್ರಯಾನ-3- ತ್ರೈಮಾಸಿಕದಲ್ಲಿ ಗಗನಯಾನ್​ ಯೋಜನೆ

ISRO
ಇಸ್ರೋ

ನವದೆಹಲಿ: ನೂತನ ವರ್ಷ 2023ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹೊಸ ವಿಜ್ಞಾನ ಪ್ರಯೋಗಗಳತ್ತ ಗಮನ ಹರಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತಷ್ಟು ಮೈಲಿಗಲ್ಲು ನೆಡಲು ಯೋಜನೆ ರೂಪಿಸಿದೆ. ಅದರಂತೆ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಮತ್ತು ಚಂದ್ರಯಾನ-3 ಮಿಷನ್​ಗೆ ಇಸ್ರೋ ಸಿದ್ಧತೆ ನಡೆಸಿದೆ.

ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನ: ಈ ಹೊಸ ವರ್ಷ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನ ಪ್ರಯೋಗಗಳ ಸರಣಿಗೆ ಸಾಕ್ಷಿಯಾಗಲಿದೆ. 2023ರ ಕೊನೆಯ ತ್ರೈಮಾಸಿಕದಲ್ಲಿ ಗಗನಯಾನ್​ ಯೋಜನೆ ಪ್ರಯೋಗವಾಗಲಿದೆ. ಇದು ಮಾನವ ರಹಿತ ಉಡಾವಣಾ ಕಾರ್ಯಕ್ಷಮತೆಯನ್ನು ಮೌಲ್ಯೀಕರಿಸುವ ಗುರಿಯನ್ನು ಹೊಂದಿದೆ. ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ರನ್‌ವೇ ಲ್ಯಾಂಡಿಂಗ್ ಪ್ರಯೋಗವನ್ನು (ಆರ್‌ಎಲ್‌ವಿ-ಲೆಕ್ಸ್) ಈ ವರ್ಷದ ಆರಂಭದಲ್ಲಿ ಕರ್ನಾಟಕ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಲು ಇಸ್ರೋ ಯೋಜಿಸಿದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ.

ನವೆಂಬರ್‌ನಲ್ಲಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಅನ್ನು ಉಡಾವಣೆ ಮಾಡಿದ ಸ್ಕೈರೂಟ್ ಏರೋಸ್ಪೇಸ್ ಉಪಗ್ರಹವನ್ನು ಮುಂದಿನ ವರ್ಷ ಕಕ್ಷೆಗೆ ಸೇರಿಸಲು ಯೋಜಿಸಿದೆ. "ನಾವು ಆರು ವಾಣಿಜ್ಯ ಹೈಪರ್‌ಸ್ಪೆಕ್ಟ್ರಲ್ ಇಮೇಜರಿ ಉಪಗ್ರಹಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅದು ಮುಂದಿನ ವರ್ಷ ಉಡಾವಣೆಗೆ ಸಿದ್ಧವಾಗಲಿದೆ" ಎಂದು ಪಿಕ್ಸೆಲ್ ಸಹ-ಸಂಸ್ಥಾಪಕ ಮತ್ತು ಸಿಇಒ ಅವೈಸ್ ಅಹ್ಮದ್ ತಿಳಿಸಿದ್ದಾರೆ. ಪ್ರಪಂಚದಾದ್ಯಂತ ಇನ್ನು ಅನೇಕ ರಾಕೆಟ್​ ಕಂಪೆನಿಗಳು ತಮ್ಮ ಉಪಗ್ರಹ ಉಡಾವಣೆಯನ್ನು ಮಾಡಲಿವೆ. ಅವುಗಳು ನಮ್ಮೊಂದಿಗೆ ಸ್ಫರ್ಧಿಸಲಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​ 24 ಅಲ್ಟ್ರಾ ಸ್ಮಾರ್ಟ್​ ಫೋನ್​ನಲ್ಲಿ ಬರಲಿದೆ ಟೆಲಿಫೋಟೋ ಸೆನ್ಸಾರ್

"ಧ್ರುವಸ್ಪೇಸ್ ಎರಡು ಉಪಗ್ರಹಗಳಾದ ಥೈಬೋಲ್ಟ್ 1 ಮತ್ತು 2 ಅನ್ನು ಇಸ್ರೋದ ಪಿಎಸ್​ಎಲ್​ವಿ ಸಿ-54 (PSLV C-54) ಮಿಷನ್‌ನಲ್ಲಿ ಉಡಾವಣೆ ಮಾಡಿತು. ಇದು ಹ್ಯಾಮ್ ರೇಡಿಯೊ ಕಾರ್ಯಾಚರಣೆಗಳಿಗೆ ಸಹಾಯ ಮಾಡುವ ಹವ್ಯಾಸಿ ಉಪಗ್ರಹ ಸಂವಹನವನ್ನು ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿತು. ಈ ಉಪಗ್ರಹಗಳನ್ನು ನಿರ್ಮಿಸಲು 20 ಕೋಟಿ ರೂಪಾಯಿ ಮೌಲ್ಯದ ಮೊದಲ ವಾಣಿಜ್ಯ ಗುತ್ತಿಗೆಯನ್ನು ಧ್ರುವಸ್ಪೇಸ್ ಈಗಾಗಲೇ ಪಡೆದುಕೊಂಡಿದೆ" ಎಂದು ಧ್ರುವಸ್ಪೇಸ್‌ನ ಮುಖ್ಯ ಹಣಕಾಸು ಅಧಿಕಾರಿ ಚೈತನ್ಯ ದೊರಾ ಸುರಪುರೆಡ್ಡಿ ತಿಳಿಸಿದ್ದಾರೆ.

"ಭಾರತದಲ್ಲಿ ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಈಗಾಗಲೇ 100 ದಾಟಿದೆ. ಈ ಸ್ಟಾರ್ಟ್‌ಅಪ್‌ಗಳು USD 245.35 ಮಿಲಿಯನ್‌ಗಿಂತಲೂ ಹೆಚ್ಚು ಹಣವನ್ನು ಸಂಗ್ರಹಿಸಿವೆ " ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಹಾನಿರ್ದೇಶಕ ನಿವೃತ್ತ ಲೆಫ್ಟಿನೆಂಟ್ ಜನರಲ್ ಎ ಕೆ ಭಟ್ ಹೇಳಿದ್ದಾರೆ.

2022 ರಲ್ಲಿ ಉದ್ಯಮವು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಲಾರ್ಸೆನ್ & ಟೂಬ್ರೊ (L&T) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ ರಚಿಸಲ್ಪಟ್ಟ ಬಾಹ್ಯಾಕಾಶ ಸಮೂಹವನ್ನು ಅಧಿಕೃತಗೊಳಿಸುವುದರೊಂದಿಗೆ ಕೆಲವು ಪ್ರಮುಖ ಮೈಲಿಗಲ್ಲುಗಳಿಗೆ ಸಾಕ್ಷಿಯಾಯಿತು. ಮುಂದಿನ ವರ್ಷ ಒನ್‌ವೆಬ್ ಶ್ರೀಹರಿಕೋಟಾದಿಂದ 36 ಉಪಗ್ರಹಗಳ ಉಡಾವಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದಿಂದ ಈ ಕಂಪೆನಿಯ ಫೋನ್‌ಗಳಲ್ಲಿ ವಾಟ್ಸಾಪ್‌ ಕಾರ್ಯ ಸ್ಥಗಿತ- ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.