ಬೆಂಗಳೂರು: ಚಂದ್ರನ ಶಿವಶಕ್ತಿ ಪಾಯಿಂಟ್ನಲ್ಲಿ(ದಕ್ಷಿಣ ಧ್ರುವ) ಇಳಿದಿರುವ ಚಂದ್ರಯಾನ-3 ಯೋಜನೆಯ ಉಪಗ್ರಹ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಸಂಚರಿಸುತ್ತಿರುವ ಮತ್ತೊಂದು ತಾಜಾ ವಿಡಿಯೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಹಂಚಿಕೊಂಡಿದೆ. ನಿನ್ನೆ (ಆಗಸ್ಟ್ 25)ಯಷ್ಟೇ ರೋವರ್ 8 ಮೀಟರ್ ಸಂಚಾರ ನಡೆಸಿತ್ತು.
ಚಂದ್ರನ ದಕ್ಷಿಣ ಧ್ರುವದ ರಹಸ್ಯಗಳನ್ನು ಅಧ್ಯಯನ ಮಾಡುವ ನಿಮಿತ್ತ ರೋವರ್ ಸಂಚರಿಸುತ್ತಿದ್ದು, 'ಶಿವಶಕ್ತಿ ಪಾಯಿಂಟ್' ಸುತ್ತಲೂ ತಿರುಗುತ್ತಿದೆ ಎಂದು ಇಸ್ರೋ ಹೇಳಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿದ ಜಾಗಕ್ಕೆ ಶಿವಶಕ್ತಿ ಅಂತಲೂ, ಆ ದಿನ ಅಂದರೆ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದೂ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದರು.
-
Chandrayaan-3 Mission:
— ISRO (@isro) August 26, 2023 " class="align-text-top noRightClick twitterSection" data="
🔍What's new here?
Pragyan rover roams around Shiv Shakti Point in pursuit of lunar secrets at the South Pole 🌗! pic.twitter.com/1g5gQsgrjM
">Chandrayaan-3 Mission:
— ISRO (@isro) August 26, 2023
🔍What's new here?
Pragyan rover roams around Shiv Shakti Point in pursuit of lunar secrets at the South Pole 🌗! pic.twitter.com/1g5gQsgrjMChandrayaan-3 Mission:
— ISRO (@isro) August 26, 2023
🔍What's new here?
Pragyan rover roams around Shiv Shakti Point in pursuit of lunar secrets at the South Pole 🌗! pic.twitter.com/1g5gQsgrjM
'ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಶಿವಶಕ್ತಿ ಪಾಯಿಂಟ್‌ನ ಸುತ್ತಲೂ ಪ್ರಜ್ಞಾನ್ ರೋವರ್ ತಿರುಗುತ್ತಿದೆ' ಎಂದು ಇಸ್ರೋ X (ಹಿಂದೆ ಟ್ವಿಟರ್) ನಲ್ಲಿ ಒಕ್ಕಣೆ ಬರೆದು ವಿಡಿಯೋವನ್ನು ಹಂಚಿಕೊಂಡಿದೆ. 40 ಸೆಕೆಂಡ್‌ಗಳ ವಿಡಿಯೋದಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಅದು ಚಲಿಸಿದ ಜಾಗದಲ್ಲಿ ಅದರ ಹೆಜ್ಜೆ ಗುರುತುಗಳೂ ಮೂಡಿವೆ.
ಬಾಹ್ಯಾಕಾಶ ದಿನ ಘೋಷಣೆ: ಬ್ರಿಕ್ಸ್ ಶೃಂಗಸಭೆ ಹಿನ್ನೆಲೆ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು ಭಾರತಕ್ಕೆ ಹಿಂದಿರುಗಿದ್ದು, ಇಂದು ಬೆಳಗ್ಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕಚೇರಿಗೆ ಭೇಟಿ ನೀಡಿದ್ದರು. ಎಲ್ಲ ವಿಜ್ಞಾನಿಗಳಿಗೆ ಅಭಿನಂದನೆ ಮತ್ತು ಧನ್ಯವಾದ ತಿಳಿಸಿದ ಪ್ರಧಾನಿಗಳು ಲ್ಯಾಂಡರ್ 'ವಿಕ್ರಮ್' ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಹೆಸರಿಸಿದರು. ಲ್ಯಾಂಡರ್ ಚಂದ್ರಸ್ಪರ್ಶವಾದ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಪ್ರಕಟಿಸಿದರು.
ಶಿವಶಕ್ತಿ ಹೆಸರನ್ನು ವಿವರಿಸಿದ ಪ್ರಧಾನಿ ಮೋದಿ ಅವರು, ಶಿವ ಎಂದರೆ ಮಾನವೀಯತೆ ಮತ್ತು ನಿರ್ಣಾಯಕ ರೂಪ. ಇದನ್ನು ಸಾಕಾರ ಮಾಡಲು ಶಕ್ತಿ ಬೇಕು. ಚಂದ್ರನ ಶಿವಶಕ್ತಿ ಪಾಯಿಂಟ್ ಬಿಂದುವು ಹಿಮಾಲಯದಿಂದ ಕನ್ಯಾಕುಮಾರಿಯೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ ಎಂದು ಹೇಳಿದರು.
ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದು, ಈ ದಿನವು ವಿಜ್ಞಾನ, ತಂತ್ರಜ್ಞಾನ ಮತ್ತು ನವೀನತೆಗಳನ್ನು ಸಾಕಾರಗೊಳಿಸುತ್ತದೆ. ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಸಹಯೋಗದಲ್ಲಿ "ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ" ಕುರಿತು ರಾಷ್ಟ್ರೀಯ ಹ್ಯಾಕಥಾನ್‌ಗಳನ್ನು ಆಯೋಜಿಸಲು ಇಸ್ರೋಗೆ ಪ್ರಧಾನಮಂತ್ರಿ ವಿನಂತಿಸಿದರು.(ಪಿಟಿಐ)
ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ 8 ಮೀಟರ್ ದೂರ ಕ್ರಮಿಸಿದ ರೋವರ್ ಪ್ರಜ್ಞಾನ್: ಇಸ್ರೋ