ETV Bharat / science-and-technology

ಮಾರುಕಟ್ಟೆಗೆ ಬರ್ತಿದೆ ಐಫೋನ್​ 16: ಹಲವು ವಿಶೇಷತೆಗಳು - apple

iPhone 16 Series: ಪ್ರತಿ ವರ್ಷ ಮತ್ತಷ್ಟು ಹೊಸ ಫೀಚರ್​, ಉತ್ಕೃಷ್ಟತೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ಐಫೋನ್​ ಈ ಬಾರಿ 16ನೇ ಸರಣಿ ಬಿಡುಗಡೆ ಮಾಡುತ್ತಿದೆ.

iPhone series comes with new Feature in this year

author img

By ETV Bharat Karnataka Team

Published : Jan 16, 2024, 12:59 PM IST

ಸ್ಯಾನ್​ಫ್ರಾನ್ಸಿಸ್ಕೋ: ಜಾಗತಿಕ ಟೆಕ್​ ದೈತ್ಯ ಕಂಪನಿ ಆ್ಯಪಲ್​ ಇದೀಗ ತನ್ನ 16ರ ಸರಣಿಯ ಐಫೋನ್​ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವರ್ಷಾಂತ್ಯ ಅಥವಾ ಸೆಪ್ಟೆಂಬರ್​ ಬಳಿಕ ಮತ್ತಷ್ಟು ಅತ್ಯಾಧುನಿಕ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಕಂಪನಿ ಮುಂದಾಗಿದೆ. ಈ ಮೆಮೋರಿ, ಆರ್​ಎಎಂ (RAM) ಮಟ್ಟ ಹೆಚ್ಚಿಸಲಿದ್ದು, ವೇಗದ ವೈ-ಫೈ ಮತ್ತಿತರೆ ಸೌಲಭ್ಯಗಳನ್ನು ಫೋನ್ ಹೊಂದಿರಲಿದೆ ಎಂದು ವರದಿಯಾಗಿದೆ.

ಆ್ಯಪಲ್​ ವಿಶ್ಲೇಷಕ ಜೆಫ್​ಪಿಯು ಪ್ರಕಾರ, ಐಫೋನ್​ 16 ಮತ್ತು ಐಫೋನ್​ 16 ಪ್ಲಸ್ ಸರಣಿಗಳು​​​ ಎ18 ಪ್ರೊಸೆಸರ್​​ ನಿರ್ದೇಶಿತವಾಗಿದೆ. ಐಫೋನ್​ 16 ಮೊದಲ ಬೇಸ್​​ ಮಾಡೆಲ್​ಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಮತ್ತಷ್ಟು ಪರಿಣಾಮಕಾರಿ ಮತ್ತು ನ್ಯಾನೋಮೀಟರ್​​ ಫ್ಯಾಬ್ರಿಕೇಷನ್​ನ ಪ್ರೊಸೆಸರ್​ ಅನ್ನು ಇದರಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಐಫೋನ್​ 15 ಮತ್ತು 15 ಪ್ಲಸ್​​ 6 ಜಿಬಿ ಆರ್​ಎಎಂ ಹೊಂದಿದ್ದರೆ, ಐಫೋನ್-16 8ಜಿಬಿ ಆರ್​ಎಎಂ ಹೊಂದಿರಲಿದೆ.

ಐಫೋನ್​ 16 ಸರಣಿಯ ಫೋನ್​ಗಳು ಹೊಸ ಎ18 ಪ್ರೊ ಚಿಪ್​ ಹೊಂದಿರಲಿದೆ. ಐಫೋನ್​ 16 ಮತ್ತು ಐಫೋನ್​ 16 ಪ್ರೊ ಕ್ಯಾಲ್ಕೊಮ್​ ಎಕ್ಸ್​​75 ಮೊಡೆಮ್​ ಬಳಕೆ ಮಾಡಲಿದೆ. ಕ್ವಾಲ್ಕೊಮ್​ ಎಕ್ಸ್​ 70 ಮೊಡೆಮ್​ ಅನ್ನು ಐಫೋನ್​ 16 ಮತ್ತು ಐಫೋನ್​ 16 ಪ್ಲಸ್​ನಲ್ಲಿ ಬಳಕೆ ಮಾಡಲಾಗುವುದು ಎಂದು ವರದಿ ವಿವರ ನೀಡಿದೆ.

ಐಫೋನ್​ 16ರ ಸರಣಿಗಳು ಗ್ರಾಹಕರಿಗೆ ಅತ್ಯುತ್ತಮ ಕನೆಕ್ಟಿವಿಟಿ ನೀಡಲಿವೆ. ಇದಕ್ಕಾಗಿ ​ವೈ-ಫೈ 6ಎ ಬಳಸುತ್ತಿದೆ. ಇದರಿಂದ ನೆಟ್​ವರ್ಕ್​ ಸೌಲಭ್ಯ ಮತ್ತಷ್ಟು ವೇಗ ಪಡೆಯಲಿದೆ. ಪ್ರಸ್ತುತ ಐಫೋನ್​ 15 ಪ್ರೊ ಮಾಡೆಲ್​ನಲ್ಲಿ ಈ ವಿಶಿಷ್ಟತೆ ಇದೆ. ಸ್ಪೀಡ್​ ಮತ್ತು ಉತ್ತಮ ನೆಟ್​ವರ್ಕ್​ ಪ್ರದರ್ಶನಕ್ಕೆ ಐಫೋನ್​ 16 ಪ್ರೊನಲ್ಲಿ ವೈಫೈ 7 ತಂತ್ರಜ್ಞಾನವಿರಲಿದೆ ಎಂದು ವರದಿ ತಿಳಿಸಿದೆ.

ಕ್ಯಾಮರಾದಲ್ಲೂ ಹಿಂದಿನ ಫೋನ್​ಗಳಿಗಿಂತ ಅತ್ಯುತ್ತಮ ಸೌಲಭ್ಯ ಹೊಂದಿರಲಿದ್ದು, ಇದು ಅಲ್ಟ್ರಾ ವೈಡ್​ ಕ್ಯಾಮರಾ ಹೊಂದುವ ಮೂಲಕ ಉತ್ತಮ ಪ್ರದರ್ಶನ ತೋರಲಿದೆ. ರೆಸಲ್ಯೂಷನ್​ ಅನ್ನು 12 ಎಂಪಿಯಿಂದ 48 ಎಂಪಿವರೆಗೆ ಹೆಚ್ಚಿಸಲಿದೆ. ಇದರಿಂದ ವಿಡಿಯೋ ಗುಣಮಟ್ಟ ಮತ್ತಷ್ಟು ಉತ್ಕೃಷ್ಟತೆಯಿಂದ ಕೂಡಿರಲಿದೆ.(ಐಎಎನ್​ಎಸ್​)

ಇದನ್ನೂ ಓದಿ: 2024ರಲ್ಲಿ ಸ್ಮಾರ್ಟ್​ವಾಚ್​ ಮಾರಾಟ ಶೇ 17ರಷ್ಟು ಹೆಚ್ಚಳ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.