ಸ್ಯಾನ್ ಫ್ರಾನ್ಸಿಸ್ಕೋ: ಆಪಲ್ ಐಫೋನ್ 14 ಪ್ರೊನ ಹೊಸ ಮಾದರಿಯು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿವೆ. ಹಳೆಯ ಐಫೋನ್ 14 ಗೆ ಹೋಲಿಸಿದರೆ, ಇದು ಹೆಚ್ಚು ಹೆಸರುವಾಸಿಯಾಗಿದೆ ಎಂದು ಹೊಸ ವರದಿಯೊಂದು ಹೇಳಿದೆ.
ವಿಶ್ಲೇಷಕ ಮಿಂಗ್-ಚಿ ಕುವೊ ಪ್ರಕಾರ, ಟೆಕ್ ದೈತ್ಯ ಆಪಲ್ ಕಂಪನಿ ತನ್ನ ಪೂರೈಕೆದಾರರಿಗೆ ವೆನಿಲ್ಲಾ ಐಫೋನ್ 14 ಮಾದರಿ ಬದಲಾಗಿ, ಐಫೋನ್ 14 ಪ್ರೊ ಆವೃತ್ತಿಯ ಮೊಬೈಲ್ಗಳನ್ನು ಹೆಚ್ಚು ಉತ್ಪಾದಿಸುವಂತೆ ಸೂಚಿಸಿದೆ ಎಂದು ಗಿಜ್ಮೊ ಚೀನಾ ವರದಿ ಮಾಡಿದೆ. ಹೆಚ್ಚಿನ ಬೇಡಿಕೆ ಇರುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವುದು ಈ ವರ್ಷದ ನಾಲ್ಕನೇ ಮತ್ತು ಅಂತಿಮ ತ್ರೈಮಾಸಿಕದಲ್ಲಿ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಆ್ಯಪಲ್ ಐಫೋನ್ 14 ಕ್ಯಾಮೆರಾದಲ್ಲಿ ದೋಷ.. ಶೀಘ್ರವೇ ಸಮಸ್ಯೆಗೆ ಪರಿಹಾರ: ಕಂಪನಿ
ಪ್ರಸ್ತುತ, ಆಪಲ್ ತನ್ನ ಇತ್ತೀಚಿನ ಐಫೋನ್ ಶ್ರೇಣಿಯ ASP (ಸರಾಸರಿ ಮಾರಾಟದ ಬೆಲೆ) ಹೆಚ್ಚಿಸಲು ಮತ್ತು iPhone 14 Pro ಸರಣಿಯ ಉತ್ಪಾದನೆಯನ್ನು ಹೆಚ್ಚಿಸಲು ಫಾಕ್ಸ್‌ಕಾನ್‌ಗೆ ತಿಳಿಸಿದೆ. ಹೆಚ್ಚಿದ ಬೇಡಿಕೆ ಮತ್ತು ಮಾರಾಟದ ಹಿನ್ನೆಲೆ ಐಫೋನ್ನ ಬೆಲೆಯನ್ನು ಸುಮಾರು 10 ಪ್ರತಿಶತದಷ್ಟು ಹೆಚ್ಚಿಸಲು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಈ ಹೊಸ ಮಾದರಿಯ ಫೋನ್ iPhone 13 ಗಿಂತ ಹೆಚ್ಚು ಸುಧಾರಣೆಗಳನ್ನು ಒಳಗೊಂಡಿವೆ.
ಈ ಸರಣಿಯು ಹೊಸ ಐಫೋನ್ 14 ಪ್ಲಸ್ ಅನ್ನು ಒಳಗೊಂಡಿದೆ. ಇದು ಮಿನಿ ಮಾದರಿಯನ್ನು ಬದಲಾಯಿಸಿದೆ. ಆದರೆ ಪ್ರೊ ರೂಪಾಂತರಗಳು ಮುಂಭಾಗದ ವಿನ್ಯಾಸದಲ್ಲಿ ಪ್ರಮುಖ ಬದಲಾವಣೆಯನ್ನು ತಂದವು. ಅಷ್ಟೇ ಅಲ್ಲದೇ ಕ್ಯಾಮರಾದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.