ETV Bharat / science-and-technology

ಐಫೋನ್​ 14 ಪ್ರೊ ಮೊಬೈಲ್​ನಲ್ಲಿ 8 ಜಿಬಿ RAM ಅಳವಡಿಕೆ: ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಎಸ್​22 ಮಾದರಿ

author img

By

Published : Feb 23, 2022, 1:01 PM IST

ಐಫೋನ್​ 14 ಪ್ರೊನಲ್ಲಿ ನೀಡಲಾದ ಅತ್ಯಧಿಕ ಮೆಮೊರಿಯ ಮೊದಲ ಮೊಬೈಲ್​ ಇದಾಗಿದೆ. 8 ಜಿಬಿ RAM ಹೊಂದುವ ಮೂಲಕ ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಮೊಬೈಲ್​ಗೆ ತತ್ಸಮಾನವಾದ ಮೊಬೈಲ್​ ಇದಾಗಲಿದೆ.

iphone
ಆ್ಯಪಲ್​ ಐಫೋನ್

ನವದೆಹಲಿ: ಜನಪ್ರಿಯ ಮೊಬೈಲ್​ ತಯಾರಿಕಾ ಸಂಸ್ಥೆಯಾದ ಆ್ಯಪಲ್​ ಇದೇ ಮೊದಲ ಬಾರಿಗೆ ತನ್ನ ಐಫೋನ್​ 14 ಪ್ರೊ ಮೊಬೈಲ್​ನಲ್ಲಿ 8 ಜಿಬಿ RAM ಸಾಮರ್ಥ್ಯವನ್ನು ಒದಗಿಸಿದೆ. ಇದು ಈ ವರ್ಷದ ಸೆಪ್ಟೆಂಬರ್​ನಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

ಐಫೋನ್​ 14 ಪ್ರೊನಲ್ಲಿ ನೀಡಲಾದ ಅತ್ಯಧಿಕ ಮೆಮೊರಿಯ ಮೊದಲ ಮೊಬೈಲ್​ ಇದಾಗಿದೆ. 8 ಜಿಬಿ RAM ಹೊಂದುವ ಮೂಲಕ ಸ್ಯಾಮ್​ಸಂಗ್​ ಗ್ಯಾಲಾಕ್ಸಿ ಮೊಬೈಲ್​ಗೆ ತತ್ಸಮಾನವಾದ ಮೊಬೈಲ್​ ಇದಾಗಲಿದೆ. ಅಲ್ಲದೇ ಈ ಹಿಂದೆ ಇಷ್ಟು ಪ್ರಮಾಣದ ಇನ್​ಬಿಲ್ಟ್ ಸಾಮರ್ಥ್ಯದ ಮೊಬೈಲ್​ ಅನ್ನು ಆ್ಯಪಲ್​ ಬಿಡುಗಡೆ ಮಾಡಿಲ್ಲ ಎಂದು ಆ್ಯಪಲ್​ಇನ್​ಸೈಡರ್​ ವರದಿ ಮಾಡಿದೆ.

ಮುಂಬರುವ ಐಫೋನ್ 14 ಪ್ರೊ ಡಿಸ್​ಪ್ಲೇಯ ಮೇಲ್ಭಾಗದಲ್ಲಿ ಫೇಸ್​ ಐಡಿ, ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಐಫೋನ್​ ಪ್ರೊ ಮಾದರಿ ಮೊಬೈಲ್​ ಅತ್ಯುತ್ತಮ ಕ್ಯಾಮೆರಾ ಹೊಂದಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಪ್ರೊ ಐಫೋನ್‌ಗಳು 12MP ಕ್ಯಾಮೆರಾ ಹೊಂದಿವೆ. iPhone 14 Pro 48MP ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ. ಎರಡು ಸಿಮ್​ ಕಾಡ್​ ಸ್ಲಾಟ್​ ಇರಲಿದೆ. ಈ ವರ್ಷದ ಸೆಪ್ಟೆಂಬರ್‌ನೊಳಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುವಂತೆ ಆ್ಯಪಲ್​ ಸಂಸ್ಥೆ ಸಲಹೆ ನೀಡಿದೆ ಎಂದು ವರದಿಯಾಗಿದೆ.

  • 12MP ಕ್ಯಾಮೆರಾ ಬದಲಾಗಿ iPhone 14 Proನಲ್ಲಿ 48MP ಸಾಮರ್ಥ್ಯದ ಕ್ಯಾಮೆರಾ
  • ಡಿಸ್​ಪ್ಲೇ ಮೇಲ್ಭಾಗದಲ್ಲಿ 2 ರಂಧ್ರಗಳಿದ್ದು ಅದು ಫೇಸ್​ ಐಡಿ ಮತ್ತೊಂದು ಕ್ಯಾಮೆರಾ ಇರಲಿದೆ.
  • 8 ಜಿಬಿ ಸಾಮರ್ಥ್ಯದ ಮೊದಲ ಐಫೋನ್​ ಇದಾಗಿದೆ.

ಇದನ್ನೂ ಓದಿ: ಈ ವರ್ಷ ನಾಲ್ಕು ಹೊಸ ಮ್ಯಾಕ್‌ಗಳೊಂದಿಗೆ M2 ಚಿಪ್​​ ಪ್ರಾರಂಭಿಸಲಿರುವ ಆಪಲ್ ಕಂಪನಿ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.