ETV Bharat / science-and-technology

ಮಡಚಬಹುದಾದ ಹಿಗ್ಗಿಬಹುದಾದ OLED ಡಿಸ್​ಪ್ಲೇ ಆವಿಷ್ಕಾರ - OLED ಯ ಎಲೆಕ್ಟ್ರೋಲ್ಯುಮಿನೆಸೆನ್ಸ್

ಮಡಚಬಹುದಾದ ಹಾಗೂ ಬೇಕಾದಂತೆ ಹಿಗ್ಗಿಸಬಹುದಾದ ಎಲ್​ಇಡಿ ಡಿಸ್​ಪ್ಲೇಯನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಪ್ರಮುಖವಾಗಿ ಧರಿಸಬಹುದಾದ ಸಾಧನಗಳಲ್ಲಿ ಬಳಸಬಹುದಾಗಿದೆ.

Engineers develop stretchable, bendable OLED display for wearable tech

author img

By

Published : Apr 16, 2023, 7:46 PM IST

ನ್ಯೂಯಾರ್ಕ್ : ಅಮೆರಿಕದ ಇಂಜಿನಿಯರ್‌ಗಳ ತಂಡವೊಂದು ಹಿಗ್ಗಿಸಬಹುದಾದ OLED ಡಿಸ್​ಪ್ಲೇಯನ್ನು ತಯಾರಿಸಿದೆ. ಫ್ಲೋರೊಸೆಂಟ್​ ಬೆಳಕನ್ನು ಪ್ರತಿಫಲಿಸುತ್ತಿರುವಾಗಲೇ ಇದನ್ನು ಅರ್ಧಬಾಗದಲ್ಲಿ ಮಡಚಬಹುದು ಹಾಗೂ ಅದರ ಮೂಲ ಉದ್ದಕ್ಕಿಂತ ಎರಡು ಪಟ್ಟು ಹೆಚ್ಚು ಎಳೆಯಬಹುದು. ನೇಚರ್ ಮಟೀರಿಯಲ್ಸ್​ ಹೆಸರಿನ ಜರ್ನಲ್​ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಈ ಹೊಸ ಹಿಗ್ಗಿಸಬಹುದಾದ OLED ಡಿಸ್​ಪ್ಲೇಯನ್ನು ಧರಿಸಬಹುದಾದ ಎಲೆಕ್ಟ್ರಾನಿಕ್ ಸಾಧನಗಳಲ್ಲಿ (wearable electronics), ವೈದ್ಯಕೀಯ ಸೆನ್ಸರ್​ಗಳಲ್ಲಿ ಹಾಗೂ ಫೋಲ್ಡಬಲ್ ಕಂಪ್ಯೂಟರ್ ಸ್ಕ್ರೀನ್​ಗಳನ್ನು ತಯಾರಿಸಲು ಬಳಸಬಹುದಾಗಿದೆ.

ಇತ್ತೀಚಿನ ಬಹುತೇಕ ಎಲ್ಲ ಹೈ -ಎಂಡ್​ ಸ್ಮಾರ್ಟ್​ಫೋನ್​ಗಳು ಮತ್ತು ಅತ್ಯಾಧುನಿಕ ಟೆಲಿವಿಜನ್​ಗಳಲ್ಲಿ OLED ತಂತ್ರಜ್ಞಾನವನ್ನೇ ಬಳಸಲಾಗುತ್ತಿದೆ. OLED ಎಂದರೆ ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್​ ಎಂದರ್ಥ. ಇವುಗಳಲ್ಲಿ ಸಣ್ಣ ಗಾತ್ರದ ಆರ್ಗಾನಿಕ್ ಮಾಲಿಕ್ಯೂಲ್​ಗಳನ್ನು ಕಂಡಕ್ಟರ್​ಗಳ ಮಧ್ಯೆ ಹುದುಗಿಸಲಾಗಿರುತ್ತದೆ. ಇದರ ಮೂಲಕ ವಿದ್ಯುತ್ ಪ್ರವಾಹವನ್ನು ಹರಿಸಿದಾಗ ಸಣ್ಣ ಮಾಲಿಕ್ಯೂಲ್​ಗಳು ಪ್ರಕಾಶಮಾನವಾದ ಬೆಳಕನ್ನು ಹೊರಸೂಸುತ್ತವೆ.

ಈ ತಂತ್ರಜ್ಞಾನವು ಹಳೆಯ ಎಲ್ಇಡಿ ಮತ್ತು ಎಲ್​ಸಿಡಿ ಡಿಸ್​ಪ್ಲೇಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಸಮರ್ಥವಾಗಿದೆ. ಇದು ತನ್ನ ಸುಸ್ಪಷ್ಟವಾದ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಹೆಸರಾಗಿದೆ. ಆದಾಗ್ಯೂ, OLED ಗಳ ಆಣ್ವಿಕ ಬಿಲ್ಡಿಂಗ್ ಬ್ಲಾಕ್‌ಗಳು ಬಿಗಿಯಾದ ರಾಸಾಯನಿಕ ಬಂಧಗಳು ಮತ್ತು ಗಟ್ಟಿಯಾದ ರಚನೆಗಳನ್ನು ಹೊಂದಿವೆ. ತಂತ್ರಜ್ಞಾನದ ಬಗ್ಗೆ ಮಾತನಾಡಿದ ಚಿಕಾಗೋ ವಿಶ್ವವಿದ್ಯಾಲಯದ ಪ್ರಿಟ್ಜ್ಕರ್ ಸ್ಕೂಲ್ ಆಫ್ ಮಾಲಿಕ್ಯುಲರ್ ಎಂಜಿನಿಯರಿಂಗ್ (PME) ನಲ್ಲಿ ಆಣ್ವಿಕ ಎಂಜಿನಿಯರಿಂಗ್‌ನ ಸಹಾಯಕ ಪ್ರಾಧ್ಯಾಪಕರಾಗಿರುವ ಸಿಹಾಂಗ್ ವಾಂಗ್, ನಮ್ಮ ಗುರಿಯು OLED ಯ ಎಲೆಕ್ಟ್ರೋಲ್ಯುಮಿನೆಸೆನ್ಸ್ ಅನ್ನು ನಿರ್ವಹಿಸುವ ಆದರೆ ವಿಸ್ತರಿಸಬಹುದಾದ ಪಾಲಿಮರ್‌ಗಳೊಂದಿಗೆ ಏನನ್ನಾದರೂ ರಚಿಸುವುದು ಎಂದರು.

ಇದು ನಿಜವಾಗಿಯೂ ಹೊಂದಿಕೊಳ್ಳುವ ಪರದೆಗಳನ್ನು ಅಭಿವೃದ್ಧಿಪಡಿಸಲು (flexible screens) ಅಗತ್ಯವಿರುವ ಅತ್ಯಂತ ಸೂಕ್ತ ವಸ್ತುವಾಗಿದೆ ಜುವಾನ್ ಡಿ ಪ್ಯಾಬ್ಲೋ ಹೇಳಿದರು. ಇವರು ಮಾಲಿಕ್ಯುಲರ್ ಎಂಜಿನಿಯರಿಂಗ್‌ನ ಪ್ರಾಧ್ಯಾಪಕರಾಗಿದ್ದಾರೆ. ಹೊಸ ಹೊಂದಿಕೊಳ್ಳುವ ಎಲೆಕ್ಟ್ರೋಲುಮಿನೆಸೆಂಟ್ ಪಾಲಿಮರ್‌ಗಳಿಗೆ ಕಂಪ್ಯೂಟೇಶನಲ್ ಮುನ್ನೋಟಗಳೊಂದಿಗೆ ತಯಾರಿಸಿದ್ದ ಅವರು ಹಲವಾರು ಪ್ರೊಟೊಟೈಪ್​ಗಳನ್ನು ನಿರ್ಮಿಸಿದ್ದರು. ಪ್ರೊಟೊಟೈಪ್ ಅವರು ಊಹಿಸಿದಂತೆ ಈ ವಸ್ತುಗಳು ಹೊಂದಿಕೊಳ್ಳುವ, ವಿಸ್ತರಿಸಬಹುದಾದ, ಪ್ರಕಾಶಮಾನವಾದ, ಬಾಳಿಕೆ ಬರುವ ಮತ್ತು ಶಕ್ತಿಯ ದಕ್ಷತೆಯನ್ನು ಹೊಂದಿದ್ದವು.

ಥರ್ಮಲಿ ಆ್ಯಕ್ಟಿವೇಟೆಡ್ ಡಿಲೇಯ್ಡ್​ ಫ್ಲೋರೊಸೆನ್ಸ್​ ತಂತ್ರಜ್ಞಾನವನ್ನು ಅವರು ತಮ್ಮ ಪ್ರೊಟೊಟೈಪ್​ನಲ್ಲಿ ಬಳಸಿರುವುದು ಗಮನಾರ್ಹ ಸಂಗತಿಯಾಗಿದೆ. ಈ ತಂತ್ರಜ್ಞಾನವು ವಿದ್ಯುಚ್ಛಕ್ತಿಯನ್ನು ಬೆಳಕಿನ ಶಕ್ತಿಯಾಗಿ ಮಾರ್ಪಡಿಸುತ್ತದೆ. ಸಾವಯವ ಬೆಳಕಿನ ಹೊರಸೂಸುವ ಡಯೋಡ್‌ಗಳು (ಸಾಧನಗಳು) ಅಥವಾ OLED ಗಳು ಏಕಶಿಲೆಯ, ಘನ-ಸ್ಥಿತಿಯ ಸಾಧನಗಳಾಗಿವೆ. ಅವು ಎರಡು ತೆಳುವಾದ ಫಿಲ್ಮ್ ವಾಹಕ ವಿದ್ಯುದ್ವಾರಗಳ ನಡುವೆ ಸ್ಯಾಂಡ್ವಿಚ್ ಮಾಡಲಾದ ಸಾವಯವ ತೆಳುವಾದ ಫಿಲ್ಮ್​ಗಳ ಸರಣಿಯನ್ನು ಒಳಗೊಂಡಿರುತ್ತವೆ.

ಎಲ್ಇಡಿ ಡಿಸ್​ಪ್ಲೇಗೆ ಹೋಲಿಸಿದರೆ OLED ಡಿಸ್​ಪ್ಲೇ ಗಮನಾರ್ಹವಾಗಿ ಹೆಚ್ಚಿನ ಕಾಂಟ್ರಾಸ್ಟ್ ಮಟ್ಟವನ್ನು ನೀಡುತ್ತದೆ. OLED ಟಿವಿಯಲ್ಲಿ ಕಾಣಿಸುವ ಚಿತ್ರಗಳು ಇತರ ಯಾವುದೇ ಟಿವಿಗಿಂತ ಭಿನ್ನವಾಗಿ ಆಕರ್ಷಕ ರೋಮಾಂಚಕ ಬಣ್ಣಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ : ಮ್ಯಾನ್ಮಾರ್​ನಿಂದ ಸ್ಮಗ್ಲಿಂಗ್: 100 ದಿನಗಳಲ್ಲಿ ₹31 ಕೋಟಿ ಮೌಲ್ಯದ ಅಡಕೆ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.