ನಮಗೆ ನಿದ್ರೆ ಏತಕ್ಕೆ ಬೇಕು? ಈ ಬಗ್ಗೆ ಸಾವಿರಾರು ವರ್ಷಗಳಿಂದ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ. ಆದಾಗ್ಯೂ ಅಮೆರಿಕದ ಕೆಲ ವಿಜ್ಞಾನಿಗಳು ನಿದ್ರೆಯ ಬಗ್ಗೆ ಕೆಲ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಮನುಷ್ಯರಲ್ಲಿ ನೆನಪುಗಳು ಹೇಗೆ ಸಂಗ್ರಹವಾಗುತ್ತವೆ? ಕಲಿಕೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಈ ಎಲ್ಲ ವಿಷಯಗಳು ನಿದ್ರೆಯ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಶೋಧನೆಗಳು ಮೆದುಳು ರೋಗದಿಂದ ಬಳಲುತ್ತಿರುವವರ ಚಿಕಿತ್ಸೆಯ ಸಾಧನಗಳನ್ನು ತಯಾರಿಸಲು ಸಹಕಾರಿಯಾಗಬಹುದು.
ತುಂಬಾ ವರ್ಷಗಳ ಹಿಂದೆ ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಮೇಲೆ ಸಂಶೋಧನೆ ನಡೆಸಿದ್ದ ವಿಜ್ಞಾನಿಗಳು, ರಾತ್ರಿ ಸಮಯದಲ್ಲಿ ಪ್ರಾಣಿಗಳಲ್ಲಿ 'replay' ಎಂಬ ಪ್ರಕ್ರಿಯೆ ನಡೆಯುವುದನ್ನು ಗುರುತಿಸಿದ್ದರು. ಹೊಸ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳಲು ಮೆದುಳು ಈ ತಂತ್ರವನ್ನು ಅಳವಡಿಸಿಕೊಳ್ಳುತ್ತದೆ ಎಂದು ತಿಳಿಯಲಾಗಿತ್ತು.
ಇಲಿಯೊಂದಕ್ಕೆ ಜಟಿಲವಾದ ಮಾರ್ಗದ ಮೂಲಕ ಸಾಗಿ, ಗುರಿಯನ್ನು ತಲುಪುವ ಬಗ್ಗೆ ತರಬೇತಿ ನೀಡಿದಾಗ, ಅದು ಸರಿಯಾದ ಮಾರ್ಗದಲ್ಲಿ ಚಲಿಸುತ್ತಿರುವಾಗ ಅದರ ಮೆದುಳಿನಲ್ಲಿ ನ್ಯೂರಾನ್ಗಳು ವ್ಯವಸ್ಥಿತವಾಗಿ ಕ್ರಿಯಾಶೀಲವಾಗುವುದು ಕಂಡು ಬಂದಿತ್ತು. ಇಲ್ಲಿ ಮಲಗಿದಾಗ ಯಾವ ರೀತಿಯಲ್ಲಿ ನ್ಯೂರಾನ್ಗಳು ಚಿಮ್ಮುತ್ತಿದ್ದವೋ ಅದೇ ಮಾದರಯಲ್ಲಿ ಈಗಲೂ ಚಿಮ್ಮುತ್ತಿದ್ದವು. ಅಂದರೆ ವಿಷಯಗಳನ್ನು ಪುನರಾವರ್ತಿಸಿ ಮೆದುಳು ಹೊಸ ವಿಷಯಗಳನ್ನು ಕಲಿಯುತ್ತದೆ. ಹೀಗೆ ಮೆದುಳು ನೆನಪನ್ನು ಭದ್ರಪಡಿಸುತ್ತದೆ.
ಪ್ರಾಣಿಗಳಲ್ಲಿ ಏನಾಗುತ್ತದೆ?: ಪ್ರಯೋಗಾಲಯದ ಪ್ರಾಣಿಗಳಲ್ಲಿ ರಿಪ್ಲೇ ವಿಧಾನವನ್ನು ಸಾಬೀತು ಪಡಿಸುವಷ್ಟು ತಿಳಿಯುವಂತಿತ್ತು. ಹಾಗಾದರೆ ಮಾನವರಲ್ಲೂ ಹೀಗೇ ಆಗುತ್ತದಾ? ಒಂದು ವೇಳೆ ಮನುಷ್ಯರಲ್ಲೂ ಹೀಗೇ ಆಗುತ್ತಿದ್ದರೆ, ಅದರಲ್ಲೂ ವಾಹನ ಚಾಲನೆ ಕೌಶಲ್ಯದ ಚಲನಾತ್ಮಕ ನೆನಪುಗಳು ಹೀಗೇ ಇದ್ದಲ್ಲಿ, ಮೆದುಳಿನ ರೋಗ ಹಾಗೂ ಗಾಯಗಳ ಉಪಚಾರಕ್ಕಾಗಿ ಹೊಸ ಚಿಕಿತ್ಸಾ ವಿಧಾನ ಮತ್ತು ಚಿಕಿತ್ಸಾ ಸಾಧನಗಳನ್ನು ಕಂಡು ಹಿಡಿಯಬಹುದು ಎನ್ನುತ್ತಾರೆ ಸಿಡ್ನಿ ಎಸ್. ಕ್ಯಾಶ್. ಇವರು ಪ್ರಮುಖ ಸಂಶೋಧನಾಕಾರರಾಗಿದ್ದಾರೆ.
ರಿಪ್ಲೇ ಕಾಣಿಸಿಕೊಳ್ಳುವುದು: ಅಂದು ರಾತ್ರಿ ಟಿ11 ಮನೆಯಲ್ಲಿ ಮಲಗಿದ ಸಮಯದಲ್ಲಿ ಆತನ ಮೆದುಳಿನ ಮೋಟರ್ ಕಾರ್ಟೆಕ್ಸ್ನಲ್ಲಿ ನ್ಯೂರಾನ್ಗಳು ಫೈರ್ ಆಗುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದರು. ಅದೇ ದಿನ ಬೆಳಗ್ಗೆ ಆತ ಆ ಗೇಮ್ ಆಡುವಾಗ ಆತನ ಮೆದುಳಿನಲ್ಲಿ ಆಗಿದ್ದ ನ್ಯೂರಾನ್ ಫೈರ್ಗಳಿಗೆ ಇದು ಸಾಮ್ಯತೆ ಹೊಂದಿತ್ತು. ಇದರಿಂದ ವಿಜ್ಞಾನಿಗಳು ಆಶ್ಚರ್ಯಚಕಿತರಾಗಿದ್ದರು. ಅಂದರೆ ಮಲಗಿದಾಗ ಮನುಷ್ಯನ ಮೆದುಳಿನಲ್ಲಿ ರಿಪ್ಲೇ ಆಗುತ್ತದೆ ಎಂಬುದು ಖಚಿತವಾಯಿತು.
- ರಿಪ್ಲೇ ಪ್ರಕ್ರಿಯೆಯು ಬಹುತೇಕ ನಿಧಾನ ಗತಿಯ ನಿದ್ರೆಯಲ್ಲಿದ್ದಾಗ ಘಟಿಸುತ್ತದೆ. ಇದು ಕನಸಿನ REM ಹಂತದ ನಿದ್ರೆಯಲ್ಲಿ ಉಂಟಾಗುವುದಿಲ್ಲ.
- ಉತ್ತಮ ಸಾಧನಗಳ ಅಭಿವೃದ್ಧಿ: ಈ ಸಂಶೋಧನೆಯಿಂದ ರಿಪ್ಲೇ ಅಧ್ಯಯನದಲ್ಲಿ ಹೊಸ ವಿಧಾನಗಳನ್ನು ಕಂಡುಹಿಡಿಯಬಹುದು ಮತ್ತು ಮನುಷ್ಯರಲ್ಲಿ ಕಲಿಕೆ ಮತ್ತು ನೆನಪಿನ ಬಗ್ಗೆ ರಿಪ್ಲೇ ಪಾತ್ರದ ಬಗ್ಗೆ ತಿಳಿಯಬಹುದು.
- ಈ ಮಾಹಿತಿಯಿಂದ ಇನ್ನೂ ಉತ್ತಮವಾದ ಮಾನವ ಮೆದುಳು ಮತ್ತು ಕಂಪ್ಯೂಟರ್ ಇಂಟರ್ಫೇಸ್ ತಯಾರಿಸಲು ಸಾಧ್ಯವಾಗಬಹುದು
- ಗಾಯವಾಗಿದ್ದ ಕಾಲು ಮತ್ತು ಕೈಗಳ ಮೇಲೆ ಬೇಗನೆ ಸ್ವಾಧಿನ ಪಡೆಯಲು ಇದರಿಂದ ಸಹಾಯವಾಗಬಹುದು
ಪ್ರಯೋಗ ನಡೆದಿದ್ದು ಹೀಗೆ: ಮಾನವನ ಮೆದುಳಿನ ಮೋಟರ್ ಕಾರ್ಟೆಕ್ಸ್ನಲ್ಲಿ (ಚಲನೆಗೆ ಸಹಾಯ ಮಾಡುವ ಮೆದುಳಿನ ಭಾಗ) ರಿಪ್ಲೇ ನಡೆಯುತ್ತದೆಯಾ ಎಂಬುದನ್ನು ತಿಳಿಯಲು ಕ್ವಾಡ್ರಿಪ್ಲೆಜಿಯಾ ಎಂಬ ರೋಗದಿಂದ ಬಳಲುತ್ತಿದ್ದ 36 ವರ್ಷದ ವ್ಯಕ್ತಿಯೊಬ್ಬನನ್ನು ಆಯ್ಕೆ ಮಾಡಿದ್ದರು. ಬೆನ್ನುಹುರಿಯ ಗಾಯದಿಂದ ಈತನಿಗೆ ಕಾಲು ಹಾಗೂ ಕೈಗಳನ್ನು ಅಲ್ಲಾಡಿಸಲು ಆಗುತ್ತಿರಲಿಲ್ಲ. ಇವನಿಗೆ ಟಿ11 ಎಂದು ಕೋಡ್ ನೇಮ್ ನೀಡಲಾಗಿತ್ತು. ಈ ಮನುಷ್ಯ ಮೆದುಳು ಹಾಗೂ ಕಂಪ್ಯೂಟರ್ ಇಂಟರ್ಫೇಸ್ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗಿದ್ದ.
ಪ್ರಯೋಗದ ಭಾಗವಾಗಿ ಸೈಮನ್ ಎಂಬ ವಿಡಿಯೋ ಗೇಮ್ ಒಂದನ್ನು ಆಡುವಂತೆ ಟಿ11 ಗೆ ಹೇಳಲಾಯಿತು. ಇದರಲ್ಲಿ ಆಟಗಾರನು ಬಣ್ಣದ ದೀಪಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ಅನುಸರಿಸುತ್ತ ಹೋಗುತ್ತಾನೆ. ನಂತರ ಇವುಗಳನ್ನು ನೆನಪಿಟ್ಟುಕೊಳ್ಳುವ ಆತ, ಅದೇ ಸರಣಿಯನ್ನು ಕಂಪ್ಯೂಟರ್ ಮೇಲೆ ಬಿಡಿಸುತ್ತಾನೆ.
ಮೊದಲಿಗೆ ಟಿ11 ತನ್ನ ಕೈಯನ್ನು ಚಲಿಸುವ ಬಗ್ಗೆ ವಿಚಾರ ಮಾಡಿದ. ಅದಕ್ಕೆ ತಕ್ಕಂತೆ ಆತನ ಮೆದುಳಿನ ಮೋಟರ್ ಕಾರ್ಟೆಕ್ಸ್ ನ್ಯೂರಾನ್ಗಳು ಸ್ಪಂದಿಸಿದವು. ಮೆದುಳಿನಲ್ಲಿ ಸೆನ್ಸರ್ಗಳನ್ನು ಅಳವಡಿಸಿ ಅದರ ಮಾಹಿತಿಯು ವೈರ್ಲೆಸ್ ಆಗಿ ಕಂಪ್ಯೂಟರ್ಗೆ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು.
ಈ ರೀತಿಯಲ್ಲಿ ವಿಚಾರ ಶಕ್ತಿಯಿಂದ ಆತ ಕಂಪ್ಯೂಟರ ಮೇಲೆ ಕರ್ಸರ್ ಚಲಾಯಿಸಿದ ಹಾಗೂ ತನಗೆ ಬೇಕಾದ ಸ್ಥಳಗಳಲ್ಲಿ ಕ್ಲಿಕ್ ಮಾಡಿದ.
ಎಲ್ಲಾ ಘಟಕಗಳ ಮೇಲೆ ಪರಿಣಾಮ: ನಿದ್ರೆ ಬಹಳ ಸಂಕೀರ್ಣ ಪ್ರಕ್ರಿಯೆ. ಇದು ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯಕ್ಕೂ ಸಂಬಂಧಿಸಿದೆ. ಸ್ಲೀಪ್-ವೇಕ್ ಹೋಮಿಯೋಸ್ಟಾಸಿಸ್ ಅಂದರೆ ದೇಹವು ಸಿರ್ಕಾಡಿಯನ್ ವ್ಯವಸ್ಥೆಯ ಮೂಲಕ ನಿದ್ರೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ.
ನೀವು ಕಣ್ಣು ಮಿಟುಕಿಸಿದಾಗ ಏನಾಗುತ್ತದೆ?: ನಿದ್ರಿಸಿದ ಒಂದು ನಿಮಿಷದಲ್ಲಿ ಮೆದುಳು ಮತ್ತು ದೇಹದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತವೆ. ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಮೆದುಳಿನ ಚಟುವಟಿಕೆ, ಹೃದಯ ಬಡಿತ ಮತ್ತು ಉಸಿರಾಟ ನಿಧಾನವಾಗುತ್ತದೆ. ದೇಹದಲ್ಲಿ ಶಕ್ತಿಯ ಬಳಕೆ ಕಡಿಮೆಯಾಗುತ್ತದೆ.
ನಿದ್ರೆಯ ಹಂತಗಳು ಯಾವುವು?: ನಿದ್ರೆಯ ನಾಲ್ಕು ಹಂತಗಳಿವೆ. ಮೊದಲ ಮೂರು ಹಂತಗಳು NREM (ನಾನ್ ರ್ಯಾಪಿಡ್ ಐ ಮೂವ್ಮೆಂಟ್) ಅಡಿಯಲ್ಲಿ ಬರುತ್ತವೆ. ನಾಲ್ಕನೇ ಹಂತವನ್ನು REM (ಕ್ಷಿಪ್ರ ಕಣ್ಣಿನ ಚಲನೆ) ಎಂದು ಕರೆಯಲಾಗುತ್ತದೆ. ಮೊದಲ ಎರಡು ಹಂತಗಳಲ್ಲಿ, ಎಚ್ಚರಗೊಳ್ಳುವುದು ಸುಲಭ. ಮೂರನೇ ಹಂತವನ್ನು 'ಸ್ಲೋ-ವೇವ್ ಸ್ಲೀಪ್' ಎಂದೂ ಕರೆಯುತ್ತಾರೆ. ಈ ಹಂತದಲ್ಲಿ, ನಾವು ಆಳವಾದ ನಿದ್ರೆಯ ಮಟ್ಟಕ್ಕೆ ತಲುಪುತ್ತೇವೆ
REM ಹಂತದಲ್ಲಿ, ಮೆದುಳಿನ ಚಟುವಟಿಕೆಯು ವೇಗಗೊಳ್ಳುತ್ತದೆ. ಕಣ್ಣುರೆಪ್ಪೆಗಳನ್ನು ಮುಚ್ಚಿದಾಗಲೂ ಕಣ್ಣಿನ ಚಲನೆಗಳು ವೇಗವಾಗಿರುತ್ತವೆ. ಪರಿಣಾಮವಾಗಿ, ಉಸಿರಾಟದ ಸ್ನಾಯುಗಳನ್ನು ಹೊರತುಪಡಿಸಿ ಇಡೀ ದೇಹವು ತಾತ್ಕಾಲಿಕವಾಗಿ ಪ್ರಜ್ಞಾಹೀನವಾಗುತ್ತದೆ. ಈ ಹಂತದಲ್ಲಿ ಕನಸುಗಳು ಹೆಚ್ಚಾಗಿ ಬರುತ್ತವೆ
ನಿದ್ರೆಯ ಮೂರು ಮತ್ತು ನಾಲ್ಕನೇ ಹಂತಗಳಲ್ಲಿ, ನಮ್ಮ ದೇಹದಲ್ಲಿರುವ ಜೀವಕೋಶಗಳು ದುರಸ್ತಿ ಮತ್ತು ಪುನರ್ ನಿರ್ಮಾಣವನ್ನು ಮಾಡುತ್ತವೆ. ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುವ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಈ ಹಂತಗಳು ದೇಹದ ಪುನರ್ಯೌವನಗೊಳಿಸುವಿಕೆ, ಪರಿಣಾಮಕಾರಿ ಚಿಂತನೆ ಮತ್ತು ಸ್ಮರಣೆಗೆ ದಾರಿ ಮಾಡಿಕೊಡುತ್ತವೆ. ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ
ಇರುವೆಗಳಿಗೆ ಹೆಚ್ಚು ನಿದ್ರೆ ಬೇಕಾಗಿಲ್ಲ. ಅವು ದಿನಕ್ಕೆ ಸುಮಾರು 250 ಬಾರಿ ಗೊರಕೆ ಹೊಡೆಯುತ್ತವೆ. ಅವುಗಳ ಪ್ರತಿ ಚಿಕ್ಕನಿದ್ರೆಯು ಒಂದು ನಿಮಿಷಕ್ಕಿಂತ ಕಡಿಮೆಯಿರುತ್ತದೆ. ಇರುವೆಯ ಬಿಲ 2.5 ಲಕ್ಷ ಜೀವಕೋಶಗಳನ್ನು ಹೊಂದಿರುತ್ತದೆ. ಇವು ಮೆದುಳು ನಿರಂತರವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತವೆ.