ನವದೆಹಲಿ: ವಯಸ್ಸಿಗೆ ಅನುಗುಣವಾದ ಅನುಭವಗಳನ್ನು ಒದಗಿಸುವ ಪ್ರಯತ್ನದಲ್ಲಿ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಕಾರ್ಯ ಕೈಗೊಂಡಿದೆ. ಇತರ ವಿಧಾನಗಳೊಂದಿಗೆ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್‌ನಂತಹ ಐಡಿಯನ್ನು ಅಪ್ಲೋಡ್ ಮಾಡುವ ಮೂಲಕ ಜನರು ತಮ್ಮ ವಯಸ್ಸನ್ನು ಖಚಿತಪಡಿಸಲು ಹೊಸ ಆಯ್ಕೆಗಳನ್ನು ಪರೀಕ್ಷಿಸುತ್ತಿರುವುದಾಗಿ ಇನ್‌ಸ್ಟಾಗ್ರಾಮ್ ಗುರುವಾರ ಹೇಳಿದೆ.
ನಾವು ಹದಿಹರೆಯದವರಿಗೆ ಮತ್ತು ವಯಸ್ಕರಿಗೆ ಅವರ ವಯಸ್ಸಿಗೆ ಅನುಗುಣವಾಗುವ ಸರಿಯಾದ ಅನುಭವವನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ. ಜನರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ನಾವು ಆನ್‌ಲೈನ್ ವಯಸ್ಸಿನ ಪರಿಶೀಲನೆಯಲ್ಲಿ ಪರಿಣತಿ ಹೊಂದಿರುವ Yoti ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.
ನಿಮ್ಮ ID ಅನ್ನು ನಮ್ಮ ಸರ್ವರ್‌ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಮತ್ತು 30 ದಿನಗಳಲ್ಲಿ ಅದನ್ನು ಡಿಲೀಟ್ ಮಾಡಲಾಗುತ್ತದೆ. ಬಳಕೆದಾರರು ತಮ್ಮ ವಯಸ್ಸನ್ನು ಪರಿಶೀಲಿಸಲು ಸೆಲ್ಫಿ ವಿಡಿಯೋ ಅನ್ನು ಸಹ ಅಪ್ಲೋಡ್ ಮಾಡಲು ಆಯ್ಕೆ ಮಾಡಬಹುದಾಗಿದೆ. ನೀವು ಸೆಲ್ಫಿ ವಿಡಿಯೋ ತೆಗೆದುಕೊಂಡ ನಂತರ ಈ ವಿಡಿಯೋವನ್ನು ನಾವು Yoti ಕಂಪನಿಯೊಂದಿಗೆ ಹಂಚಿಕೊಳ್ಳುತ್ತೇವೆ. ಈ ತಂತ್ರಜ್ಞಾನವು ನಿಮ್ಮ ಗುರುತನ್ನು ಗುರುತಿಸಲು ಸಾಧ್ಯವಿಲ್ಲ. ಕೇವಲ ನಿಮ್ಮ ವಯಸ್ಸನ್ನು ಗುರುತಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಓದಿ: ಜಾಹೀರಾತುಗಳು ಬಳಕೆದಾರರನ್ನು ಹೇಗೆ ಗುರಿಪಡಿಸುತ್ತವೆ ಎಂಬುದನ್ನು ಬಹಿರಂಗಪಡಿಸಲಿವೆ Facebook, Instagram
ಇನ್‌ಸ್ಟಾಗ್ರಾಮ್‌ಗೆ ಸೈನ್ ಅಪ್ ಮಾಡಲು ಜನರು ಕನಿಷ್ಠ 13 ವರ್ಷ ವಯಸ್ಸಿನವರಾಗಿರಬೇಕು. ಕೆಲವು ದೇಶಗಳಲ್ಲಿ ನಮ್ಮ ಕನಿಷ್ಠ ವಯಸ್ಸು ಹೆಚ್ಚಾಗಿರುತ್ತದೆ. ಹದಿಹರೆಯದವರಿಗೆ (ವಯಸ್ಸು 13-17), Instagram ಖಾಸಗಿ ಖಾತೆಗಳಲ್ಲಿ ಡೀಫಾಲ್ಟ್ ಮಾಡುವುದು, ಅವರಿಗೆ ತಿಳಿಯದೇ ವಯಸ್ಕರಿಂದ ಅನಗತ್ಯ ಸಂಪರ್ಕವನ್ನು ತಡೆಯುವುದು ಮತ್ತು ಜಾಹೀರಾತುಗಳನ್ನು ಮಿತಿಗೊಳಿಸುವ ಮೂಲಕ ವಯಸ್ಸಿಗೆ ಸೂಕ್ತವಾದ ಅನುಭವಗಳನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.
ನಿಮ್ಮ ವಯಸ್ಸನ್ನು ಪರಿಶೀಲಿಸಲು ನೀವು ಸೆಲ್ಫಿ ವಿಡಿಯೋವನ್ನು ಅಪ್ಲೋಡ್ ಮಾಡಿರುತ್ತೀರಿ ಎಂದು ತಿಳಿದುಕೊಳ್ಳಿ. ನಿಮ್ಮ ವಯಸ್ಸನ್ನು ದೃಢೀಕರಿಸಿದ ನಂತರ ಮೆಟಾ ಮತ್ತು ಯೋಟಿ ಅದನ್ನು ಡಿಲೀಟ್ ಮಾಡುತ್ತದೆ. ನಿಮ್ಮ ವಯಸ್ಸನ್ನು ಪರಿಶೀಲಿಸಲು ಮಾತ್ರ ಈ ನಿಮ್ಮ ವಿಡಿಯೋವನ್ನು ಬಳಸಲಾಗುತ್ತದೆ ಹೊರತು ಬೇರೆ ಯಾವುದಕ್ಕೂ ಬಳಸಲಾಗುವುದಿಲ್ಲ. ನೀವು ಐಡಿಯನ್ನು ಅಪ್ಲೋಡ್ ಮಾಡಲು ಆಯ್ಕೆ ಮಾಡಿದಲ್ಲಿ ನೀವು ನಿಮ್ಮ IDನ ನಕಲನ್ನು ನಮಗೆ ಕಳುಹಿಸಿ. ಅದನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಮತ್ತು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಎಂದು Instagram ಹೇಳಿದೆ.