ETV Bharat / science-and-technology

ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ: ಕೃಷಿ ವಿವಿಯ ಹೊಸ ಸಂಶೋಧನೆ - ಈಟಿವಿ ಭಾರತ್​ ಕನ್ನಡ

ಲೂಧಿಯಾನದ ಪಂಜಾಬ್​ ಕೃಷಿ ವಿಶ್ವವಿದ್ಯಾಲಯ ತರಕಾರಿಗಳ ಕೃಷಿ ನಡೆಸುವ ಪ್ಲಾಟ್​ ಫ್ಯಾಕ್ಟರಿ ನಿರ್ಮಾಣ ಮಾಡಿದೆ. ಕೃತಕ ಬೆಳಕಿನ ಸಹಾಯದಿಂದ ಕೃಷಿ ಮಾಡುವ ಈ ಸಂಶೋಧನೆ ಗಮನ ಸೆಳೆದಿದೆ.

ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ; ಲೂಧಿಯಾನದ ಪಂಜಾಬ್​ ಕೃಷಿ ವಿಶ್ವವಿದ್ಯಾಲಯದ ಹೊಸ ಸಂಶೋಧನೆ
indoor-cultivation-under-artificial-light-new-research-from-punjab-agricultural-university-ludhiana
author img

By

Published : Dec 19, 2022, 10:43 AM IST

ಲೂಧಿಯಾನ: ಲೂಧಿಯಾನದ ಪಂಜಾಬ್​ ಕೃಷಿ ವಿಶ್ವವಿದ್ಯಾಲಯ ಸದಾ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹೆಸರಾಗಿದೆ. ಇದೀಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿರುವ ವಿವಿ, ತರಕಾರಿ ಕೃಷಿ ನಡೆಸುವ ಕುರಿತು ಹೊಸ ಸಂಶೋಧನೆ ನಡೆಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಹೌದು, ಅದೇನೆಂದ್ರೆ ನಿಮ್ಮ ಮನೆಯ ಸಣ್ಣ ರೂಮ್​ನಲ್ಲಿ ಕೃತಕ ಬೆಳಕಿನ ಸಹಾಯದಿಂದ ತರಕಾರಿ ಕೃಷಿ ಮಾಡಬಹುದಾಗಿದೆ. ವಿವಿಯ ಇಂಜಿನಿಯರಿಂಗ್​ ವಿಭಾಗ ಸಂಶೋಧನೆ ನಡೆಸಿ, ಇದಕ್ಕೆ ಪ್ಲಾಂಟ್​ ಫ್ಯಾಕ್ಟರಿ ಎಂದು ಹೆಸರಿಟ್ಟಿದೆ.

ಏನಿದು ತಂತ್ರಜ್ಞಾನ: ಮುಚ್ಚಿದ ಕೋಣೆಯಲ್ಲಿ ಗಿಡಕ್ಕೆ ಬೆಳಕು ಮತ್ತು ನಿಯಂತ್ರಿತ ಕಾರ್ಬೊನ್​ ಡೈಆಕ್ಸೈಡ್​ ನೀಡುತ್ತೇವೆ. ಹೊರಗಿನ ವಾತಾವರಣದಲ್ಲಿ ಮೋಡ ಅಥವಾ ಮಂಜಿರಲಿ, ರೂಮಿನಲ್ಲಿನ ಸಸ್ಯಗಳಿಗೆ ಒಂದೇ ರೀತಿಯ ಬೆಳಕು ಸಿಗಲಿದೆ. ಜೊತೆಗೆ ಏಕರೂಪವಾಗಿ ಇನ್ನಿತರ ಮೂಲಭೂತ ಅಂಶಗಳನ್ನು ಸಸ್ಯಗಳಿಗೆ ನೀಡಲಾಗುವುದು. ಇದರಿಂದ ಕಡಿಮೆ ಅವಧಿಯಲ್ಲಿ ಅಂದರೆ 60ರಿಂದ 70 ದಿನಗಳಲ್ಲಿ ನಾವು ಸಸಿಗಳನ್ನು ಬೆಳೆಸಬಹುದಾಗಿದೆ ಎನ್ನುತ್ತಾರೆ ಪಂಜಾಬ್​ ಕೃಷಿ ವಿವಿ ಪ್ರಧಾನ ವಿಜ್ಞಾನಿಯಾಗಿರುವ ರಾಕೇಶ್​.

ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ
ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ

ಆಫ್​ ಸೀಸನ್​ ತರಕಾರಿ ಕೃಷಿ: ಈ ತಂತ್ರಜ್ಞಾನದ ಸಹಾಯದಿಂದ ಆಫ್​ಸೀಸನ್​ ತರಕಾರಿಗಳನ್ನು ಬೆಳೆಯಬಹುದು. ಎಲೆ ತರಕಾರಿಗಳನ್ನು ಕೂಡ ಸುಲಭವಾಗಿ ಈ ತಂತ್ರಜ್ಞಾನ ಬಳಸಿ ಬೆಳೆಯಬಹುದಾಗಿದೆ. ಕೊತ್ತಂಬರಿ, ಮೆಂತೆ, ಪಾಲಕ್​, ಸ್ಟ್ರಾಬೆರಿ, ಟೊಮೆಟೋ, ಸೌತೆಕಾಯಿ ಮತ್ತಿತ್ತರ ಎಲೆ ತರಕಾರಿಗಳನ್ನು ಸುಲಭವಾಗಿ ಬೆಳೆಸಬಹುದಾಗಿದೆ. ಬೇಸಿಗೆಯಲ್ಲೂ ಹಸಿರು ತರಾಕಾರಿಗಳನ್ನು ಈ ತಂತ್ರಜ್ಞಾನದ ಮೂಲಕ ಬೆಳೆಸಬಹುದಾಗಿದೆ. ಈ ತರಕಾರಿಗಳನ್ನು ಹೊರಗಿನ ಋತುಮಾನದಲ್ಲಿ ವರ್ಷದ ಎಲ್ಲಾ ಕಾಲ ಬೆಳೆಯಲು ಸಾಧ್ಯವಾಗಲ್ಲ. ಆದರೆ, ಎಲ್ಲಾ ಋತುಮಾನದಲ್ಲಿ ಈ ತಂತ್ರಜ್ಞಾನ ಬೆಳೆಸಿ ಬೆಳೆಯಬಹುದಾಗಿದೆ ಎನ್ನುತ್ತಾರೆ ಡಾ. ಶಾರದಾ

ಕಡಿಮೆ ನೀರಿನ ಬಳಕೆ: ಈ ತಂತ್ರಜ್ಞಾನದಲ್ಲಿ ಕಡಿಮೆ ನೀರನ್ನು ಬಳಕೆ ಮಾಡಬಹುದಾಗಿದೆ. ಕೇವಲ 5ರಿಂದ 10ರಷ್ಟು ನೀರನ್ನು ಮಾತ್ರ ಬಳಕೆ ಮಾಡಬಹುದಾಗಿದೆ. ನಾವು ನೀಡುವ ನೀರು ಕೇವಲ ನ್ಯೂಟ್ರಿಷಿಯನ್​ ಆಗಿ ಬಳಕೆಯಾಗಲಿದೆ, ಇದನ್ನು ಸ್ವಯಂಚಾಲಿತ ನೀರಾವರಿ ವ್ಯವಸ್ಥೆ ಅಳವಡಿಸಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ನೀರಿನ ಬಳಕೆ ಬಹಳಷ್ಟು ಕಡಿಮೆ ಪ್ರಮಾಣವಾಗಿದೆ ಎಂದು ಕೂಡ ತಿಳಿಸಿದ್ದಾರೆ.

ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ
ಕೊಠಡಿಯಲ್ಲಿಯೇ ಕೃತಕ ಬೆಳಕಿನಲ್ಲಿ ಕೃಷಿ

ಎಷ್ಟಾಗಲಿದೆ ಈ ತಂತ್ರಜ್ಞಾನ: ಈ ಪ್ಲಾಟ್​ ಫ್ಯಾಕ್ಟರಿ ಲ್ಯಾಬ್​ ಅನ್ನು 5 ತಿಂಗಳಲ್ಲಿ ನಿರ್ಮಾಣ ಮಾಡಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಈ ಲ್ಯಾಬ್​ ಪ್ರಾಮುಖ್ಯತೆಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಮಾಡಬಹುದಾಗಿದೆ. ಬೆಳಕು, ತಾಪಮಾನ, ಆರ್ದ್ರತೆ, ಇಂಗಾಲದ ಡೈಆಕ್ಸೈಡ್ ಸಾಂದ್ರತೆಯನ್ನು ಬಹು ಹಂತದ ಹೈಡ್ರೋಪೋನಿಕ್ ವ್ಯವಸ್ಥೆ ಅಡಿಯಲ್ಲಿ ಕೃತಕವಾಗಿ ನಿಯಂತ್ರಿಸಲಾಗುತ್ತದೆ. ಈ ತಂತ್ರಜ್ಞಾನವು ರೈತರಿಗೆ ಹೊಸ ಕ್ರಾಂತಿಯಾಗಲಿದೆ.

ರೈತರಿಗೆ ಏನು ಲಾಭ: ಪ್ರಸ್ತುತ ಈ ತಂತ್ರಜ್ಞಾನವನ್ನು ಎರಡರಿಂದ ಮೂರು ರೈತರು ಅಳವಡಿಸಿಕೊಂಡಿದ್ದಾರೆ. ಇದಕ್ಕೆ 20 ರಿಂದ 25 ಲಕ್ಷ ವ್ಯಯವಾಗುತ್ತದೆ. ಇದು ದುಬಾರಿಯಾಗಿರುವ ಹಿನ್ನೆಲೆ ಈ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುತ್ತಿಲ್ಲ. ಆದರೆ, ಕಡಿಮೆ ಬೆಲೆಯಲ್ಲಿ ಈ ತಂತ್ರಜ್ಞಾನ ಬಳಕೆಗೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಡಾ ರಾಕೇಶ್​ ತಿಳಿಸಿದರು.

ಇದನ್ನೂ ಓದಿ: 20 ಲಕ್ಷ ವರ್ಷ ಹಳೆಯ ಡಿಎನ್​ಎ ಹಿಮಯುಗದ ಕೆಸರಿನಲ್ಲಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.