ETV Bharat / science-and-technology

ವೈರಸ್ ಹರಡುವುದನ್ನು ತಡೆಯಲು 'ಸ್ಪರ್ಶರಹಿತ ಸಂವೇದಕ' ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು

ಕೊರೊನಾ ವೈರಸ್‌ನಂತಹ ರೋಗಕಾರಕಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಪ್ರಮುಖ ವೈಜ್ಞಾನಿಕ ಪ್ರಗತಿಯಲ್ಲಿ, ಭಾರತೀಯ ವಿಜ್ಞಾನಿಗಳು ಕಡಿಮೆ ಬೆಲೆಯ 'ಟಚ್ - ಕಮ್- ಪ್ರಾಕ್ಸಿಮಿಟಿ ಸಂವೇದ'ಕವನ್ನು ಕೈಗೆಟುಕುವ ದರದಲ್ಲಿ ತಯಾರಿ ಅಭಿವೃದ್ಧಿಪಡಿಸಿದ್ದಾರೆ.

touch-free touch screen
ಸ್ಪರ್ಶರಹಿತ ಸಂವೇದಕ
author img

By

Published : Mar 15, 2022, 7:08 AM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕದಂತಹ ವೈರಸ್​​ಗಳು ಸ್ಮಾರ್ಟ್‌ಫೋನ್‌ಗಳಂತಹ ಟಚ್ ಸ್ಕ್ರೀನ್ ಸಾಧನಗಳ ಬಳಕೆಯ ಮೂಲಕ ಹರಡುವ ಸಂಭಾವ್ಯತೆ ಇರುವ ಸಮಯದಲ್ಲಿ, ಭಾರತೀಯ ವಿಜ್ಞಾನಿಗಳು ಕಡಿಮೆ ವೆಚ್ಚದ 'ಸ್ಪರ್ಶರಹಿತ ಸಂವೇದಕ'ವನ್ನು ಅಭಿವೃದ್ಧಿಪಡಿಸಿದ್ದಾರೆ. ರೋಗಕಾರಕಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವ ಪ್ರಮುಖ ವೈಜ್ಞಾನಿಕ ಪ್ರಗತಿಯಲ್ಲಿ, ಭಾರತೀಯ ವಿಜ್ಞಾನಿಗಳು ಕಡಿಮೆ ಬೆಲೆಯ ಟಚ್ - ಕಮ್ - ಪ್ರಾಕ್ಸಿಮಿಟಿ ಸಂವೇದಕ(touch cum proximity sensor)ವನ್ನು ಕೈಗೆಟುಕುವ ದರದಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಈ ಸಂವೇದಕವು ಎಷ್ಟು ದಕ್ಷವಾಗಿದೆ ಎಂದರೆ, ಅದು ಪರದೆಯಿಂದ 9 ಸೇ.ಮೀ‌ಗಳಷ್ಟು ದೂರದಿಂದ ಹೋವರ್ ಅಥವಾ ಸಾಮೀಪ್ಯ ಚಲನೆಯನ್ನು ಪತ್ತೆ ಮಾಡುತ್ತದೆ. ಸಾಮಾನ್ಯವಾಗಿ ಸ್ಪರ್ಶರಹಿತ ಸ್ಪರ್ಶ ಸಂವೇದಕ ಎಂದು ಕರೆಯಲ್ಪಡುವ ಈ ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ವಿಶಿಷ್ಟ ಮುದ್ರಣ ತಂತ್ರದ ಮೂಲಕ, ಮುದ್ರಿಸಬಹುದು ಮತ್ತು ಸಂಪರ್ಕದ ಮೂಲಕ ಹೆಚ್ಚು ಸಾಂಕ್ರಾಮಿಕ ವೈರಸ್ ಹರಡುವುದನ್ನು ತಡೆಯಬಹುದು.

ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ: ಈ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿರುವ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (ಸಿಇಎನ್‌ಎಸ್), ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಅಂಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್) ಮತ್ತು ಇತ್ತೀಚೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ಸ್ವಾಯತ್ತ ಸಂಸ್ಥೆಗಳ ಬೆಂಗಳೂರು ಮೂಲದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಅವರು ಇತ್ತೀಚೆಗೆ ಅರೆ - ಸ್ವಯಂಚಾಲಿತ ಉತ್ಪಾದನಾ ಘಟಕವನ್ನು ಪ್ರಿಂಟಿಂಗ್ ನೆರವಿನ ಮಾದರಿಯ (ಸುಮಾರು 300 Aum ರೆಸಲ್ಯೂಶನ್) ಪಾರದರ್ಶಕ ವಿದ್ಯುದ್ವಾರಗಳ ಉತ್ಪಾದನೆಗೆ ಸ್ಥಾಪಿಸಿದ್ದಾರೆ.

ಈ ವಿದ್ಯುದ್ವಾರಗಳು ಸುಧಾರಿತ ಟಚ್‌ಲೆಸ್ ಸ್ಕ್ರೀನ್ ತಂತ್ರಜ್ಞಾನಗಳಲ್ಲಿ ಬಳಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಟಚ್‌ಲೆಸ್ ಟಚ್-ಕಮ್-ಪ್ರಾಕ್ಸಿಮಿಟಿ ಸೆನ್ಸರ್‌ಗಳು ಎಂದು ಕರೆಯಲಾಗುತ್ತದೆ. ಪ್ರೊಫೆಸರ್.ಜಿ ಯು ಕುಲಕರ್ಣಿ ಮತ್ತು ಅವರ ಸಹೋದ್ಯೋಗಿಗಳ ನೇತೃತ್ವದ ವಿಜ್ಞಾನಿಗಳ ತಂಡವು ಈ ಮಹತ್ವದ ಸಂಶೋಧನೆಯನ್ನು ಮಾಡಿದೆ. ಇದು CeNS ನಲ್ಲಿ DST-ನ್ಯಾನೊಮಿಷನ್‌ನಿಂದ ಧನಸಹಾಯ ಮಾಡಲ್ಪಟ್ಟಿದೆ ಮತ್ತು ಇತ್ತೀಚೆಗೆ 'ಮೆಟೀರಿಯಲ್ಸ್ ಲೆಟರ್ಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ.

9 ಸೆಂ.ಮೀ ದೂರದಿಂದ ಕಾರ್ಯನಿರ್ವಹಣೆ: 'ನಾವು ಟಚ್ ಸೆನ್ಸಾರ್ ಅನ್ನು ತಯಾರಿಸಿದ್ದೇವೆ. ಇದು ಸಾಧನದಿಂದ 9 ಸೆಂ.ಮೀ ದೂರದಿಂದಲೂ ಪ್ರಾಕ್ಸಿಮಲ್ ಅಥವಾ ಹೋವರ್ ಸ್ಪರ್ಶ ಗ್ರಹಿಸುತ್ತದೆ' ಎಂದು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ ಅಶುತೋಷ್ ಕೆ ಸಿಂಗ್ ಹೇಳಿದ್ದಾರೆ. ಇತರ ಸ್ಮಾರ್ಟ್ ಎಲೆಕ್ಟ್ರಾನಿಕ್ ಅಪ್ಲಿಕೇಶನ್‌ಗಳಿಗೆ ತಮ್ಮ ಕಾರ್ಯಸಾಧ್ಯತೆ ಸಾಬೀತುಪಡಿಸಲು ಮಾದರಿಯ ವಿದ್ಯುದ್ವಾರಗಳನ್ನು ಬಳಸಿಕೊಂಡು ತಂಡವು ಇನ್ನೂ ಕೆಲವು ಮೂಲ ಮಾದರಿಗಳನ್ನು ತಯಾರಿಸುತ್ತಿದೆ ಎಂದು ಇನ್ನೊಬ್ಬ ಸಂಶೋಧಕ ಡಾ. ಇಂದ್ರಜಿತ್ ಮೊಂಡಲ್ ಹೇಳಿದ್ದಾರೆ.

ಕಡಿಮೆ - ವೆಚ್ಚದ ಮಾದರಿಯ ಪಾರದರ್ಶಕ ವಿದ್ಯುದ್ವಾರಗಳು ಟಚ್-ಫ್ರೀ ಪರದೆಗಳು ಮತ್ತು ಸಂವೇದಕಗಳಂತಹ ಸುಧಾರಿತ ಸ್ಮಾರ್ಟ್ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಈ ಟಚ್‌ಲೆಸ್ ಟಚ್ ಸೆನ್ಸರ್ ತಂತ್ರಜ್ಞಾನವು ಸಂಪರ್ಕದ ಮೂಲಕ ಹರಡುವ ವೈರಸ್‌ಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ಲೈವ್​ ಸ್ಟ್ರೀಮ್​ ಜೊತೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಹೊರ ತಂದ ಟೆಲಿಗ್ರಾಮ್​

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.