ಮುಂಬೈ: 5ಜಿ ಯುಗದಲ್ಲಿ ಹೊಸ ಜಾಗತಿಕ ಪಾವತಿ ಭದ್ರತಾ ಮಾನದಂಡಗಳನ್ನು ಜಾರಿಗೆ ತರಲು ಭಾರತೀಯ ಸಂಸ್ಥೆಗಳು ಸಿದ್ಧವಾಗುತ್ತಿವೆ. ಆದರೆ ಈ ಮಧ್ಯೆ ಆರ್ಥಿಕ ವಲಯವು ಪ್ರೇರಿತ ಸಂಘಟಿತ ಅಪರಾಧಗಳಿಂದ ಬಲಿಪಶುವಾಗುತ್ತಿದೆ ಎಂದು ವೆರಿಝೋನ್ ವರದಿಯು ಶುಕ್ರವಾರ ಹೇಳಿದೆ. ಇಂಥ ಶೇ 90 ರಷ್ಟು ಆರ್ಥಿಕ ಉಲ್ಲಂಘನೆಗಳಲ್ಲಿ ಸರ್ವರ್ಗಳು ಭಾಗಿಯಾಗಿವೆ.
ಪೇಮೆಂಟ್ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯುರಿಟಿ ಸ್ಟ್ಯಾಂಡರ್ಡ್ (Payment Card Industry Data Security Standard -PCI DSS) ನಿಯಮಾವಳಿಗಳು 2020ರಲ್ಲಿ ಗಮನಾರ್ಹವಾಗಿ ಬಿಗಿಯಾಗಿದ್ದರೂ, ಸಂಸ್ಥೆಗಳು ಎದುರಿಸುತ್ತಿರುವ ಸೈಬರ್ ಸುರಕ್ಷತೆ ಬೆದರಿಕೆಗಳು ಎರಡು ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚು ಕುತಂತ್ರದಿಂದ ಕೂಡಿದ್ದು, ಪತ್ತೆ ಹಚ್ಚಲು ಸಾಧ್ಯವಾಗದಿರುಂಥವಾಗಿವೆ ಎಂದು 2022ರ ವೆರಿಜಾನ್ ಪೇಮೆಂಟ್ ಸೆಕ್ಯುರಿಟಿ ರಿಪೋರ್ಟ್ (2022 ಪಿಎಸ್ಆರ್) ಹೇಳಿದೆ. PCI SSC, ಜಾಗತಿಕ ಪಾವತಿ ಭದ್ರತಾ ವೇದಿಕೆ ಪಾವತಿ ಭದ್ರತಾ ಮಾನದಂಡದ ಆವೃತ್ತಿ 4.0 ಅನ್ನು ಪ್ರಕಟಿಸಿದೆ.
ಆವೃತ್ತಿ 4.0 ನಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿರುವ ಯಾವುದೇ ನವೀಕರಣಗಳನ್ನು ಕಾರ್ಯಗತಗೊಳಿಸಲು ಸಂಸ್ಥೆಗಳಿಗೆ ಸಮಯವನ್ನು ಒದಗಿಸಲು, PCI DSS ನ ಪ್ರಸ್ತುತ ಆವೃತ್ತಿ, v3.2.1, ಮಾರ್ಚ್ 31, 2024 ರಂದು ಕೊನೆಯಾಗುವವರೆಗೆ ಎರಡು ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ.
ಒಟ್ಟಾರೆಯಾಗಿ, 2020 ರಲ್ಲಿ PCI DSS ಅನುಸರಣೆ ಗಮನಾರ್ಹವಾಗಿ ಸುಧಾರಿಸಿದೆ ಎಂದು ವರದಿ ಹೇಳಿದೆ. 2019 ರಲ್ಲಿ ಶೇಕಡಾ 27.9 ಕ್ಕೆ ಹೋಲಿಸಿದರೆ ಈಗ ಶೇ 43.4 ರಷ್ಟು ಸಂಸ್ಥೆಗಳು ಸಂಪೂರ್ಣ ಅನುಸರಣೆಯನ್ನು ನಿರ್ವಹಿಸುತ್ತಿವೆ.
ಹೆಚ್ಚುವರಿಯಾಗಿ, ಅರ್ಧದಷ್ಟು (56.7 ಪ್ರತಿಶತ) ಸಂಸ್ಥೆಗಳು ಒಂದು ಅಥವಾ ಹೆಚ್ಚಿನ ಭದ್ರತಾ ನಿಯಂತ್ರಣಗಳ ಲೋಪಗಳಿಂದಾಗಿ ತಮ್ಮ ಮಧ್ಯಂತರ ಮೌಲ್ಯಾಂಕನ ಮೌಲ್ಯಮಾಪನದಲ್ಲಿ ವಿಫಲವಾಗಿವೆ. ಆದಾಗ್ಯೂ ಭದ್ರತಾ ನಿಯಂತ್ರಣ ಅಂತರವು ಗಣನೀಯವಾಗಿ ಅಂದರೆ 2019 ರಲ್ಲಿ ಹೆಚ್ಚಿನ ಶೇಕಡಾ 7.7 ರಿಂದ 2020 ರಲ್ಲಿ ಕಡಿಮೆ ಶೇಕಡಾ 4.0 ಕ್ಕೆ ಸುಧಾರಿಸಿದೆ.