ETV Bharat / science-and-technology

ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ? - ಹೈಡ್ರೋಪೋನಿಕ್ಸ್ ಏಕೆ ಬೇಕು

ಹೈಡ್ರೋಪೋನಿಕ್ ಕೃಷಿ ಸರಿಯಾದ ರೀತಿಯಲ್ಲಿ ಮಾಡಿದರೆ ಶೇಕಡಾ 90ರಷ್ಟು ನೀರು ಉಳಿಸಬಹುದು. ಸಾಂಪ್ರದಾಯಿಕ ಬೇಸಾಯಕ್ಕೆ ಹೋಲಿಸಿದರೆ ಈ ಪದ್ಧತಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬಹುದು. ಪೋಷಕಾಂಶಗಳು ಕೂಡಾ ವ್ಯರ್ಥವಾಗುವುದಿಲ್ಲ. ಒಂದು ಗಿಡ ಫಸಲು ನೀಡಿದ ನಂತರ ಅದೇ ಜಾಗದಲ್ಲಿ ಮತ್ತೊಂದು ಗಿಡವನ್ನ ಬೆಳೆಸಬಹುದು.

hydroponic farming in India
ಭಾರತದಲ್ಲಿ ಹೈಡ್ರೋಪೋನಿಕ್ಸ್ ಕೃಷಿ.. ಮತ್ತೊಂದು ಹಸಿರುಕ್ರಾಂತಿಗೆ ಅಡಿಪಾಯವಾಗಲಿದೆಯಾ ಹೊಸ ತಂತ್ರಜ್ಞಾನ?
author img

By

Published : Feb 12, 2022, 9:41 AM IST

ಲೂಧಿಯಾನಾ(ಪಂಜಾಬ್): ನಿಮಗೆ ನೈಸರ್ಗಿಕ ಮತ್ತು ಸಾವಯವ ತರಕಾರಿ ಬೇಕೆ?, ನಿಮ್ಮ ಮನೆಯ ಅಂಗಳದಲ್ಲಿ ಬೆಳೆದುಕೊಳ್ಳಬಹುದು. 'ಮನೆಯ ಮುಂದೆ ಜಾಗದಲ್ಲಿ ಮಣ್ಣಿಲ್ಲ ಎಂಬುದಾದರೆ, ನೀವು ಕುಂಡಗಳಲ್ಲಿ ನಿಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಒಂದು ವೇಳೆ ಮನೆಯ ಮುಂದೆ ಕಾಂಕ್ರಿಟ್​​ನ ಆವರಣವಿದೆ.. ಆದರೆ, ಹೆಚ್ಚಿನ ನೀರು ಇಲ್ಲ ಎಂದು ಕೊಳ್ಳುವವರಿಗೆ ಈ ತಂತ್ರಜ್ಞಾನ ಉಪಯೋಗಕ್ಕೆ ಬರುತ್ತದೆ. ಅದರ ಹೆಸರೇ ಹೈಡ್ರೋಪೋನಿಕ್ಸ್ ಕೃಷಿ​.

ಲೂಧಿಯಾನ ಕೃಷಿ ವಿಶ್ವವಿದ್ಯಾನಿಲಯ ಈ ಹೈಡ್ರೋಪೋನಿಕ್ಸ್ ಕುರಿತಂತೆ ವ್ಯಾಪಕವಾದ ಸಂಶೋಧನೆಗಳನ್ನು ನಡೆಸುತ್ತಿದೆ. ಈ ಸಂಶೋಧನೆಗಳು ಸಫಲವಾದರೆ, ಬೆಳೆಗಳನ್ನು ಬೆಳೆಸಲು ಯಥೇಚ್ಛವಾಗಿ ಮಣ್ಣು ಬೇಕೆಂಬ ಅನಿವಾರ್ಯತೆಯೇ ಇರುವುದಿಲ್ಲ.

ಏನಿದು ಹೈಡ್ರೋಪೋನಿಕ್ಸ್ ಕೃಷಿ​?: ಹೈಡ್ರೋನಿಕ್ ಕೃಷಿ ಎನ್ನುವುದು ಒಂದು ತಂತ್ರಜ್ಞಾನ. ಹೈಡ್ರೋ ಎಂದರೆ ನೀರು, ಪೋನಿಕ್ಸ್ ಎಂದರೆ ಸಸಿ ಎಂದರ್ಥ. ಅಂದರೆ ಸಸ್ಯಗಳನ್ನು ನೀರು, ಪೋಷಕಾಂಶಗಳನ್ನು ಬಳಸಿ, ಮಣ್ಣಿನ ಅವಶ್ಯಕತೆ ಇಲ್ಲದೇ ಬೆಳೆಯಬಹುದಾದ ವಿಧಾನ. ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೃಷಿ ತಂತ್ರಜ್ಞಾನಗಳಲ್ಲಿ ಇದೂ ಕೂಡಾ ಒಂದು.

ಈ ತಂತ್ರಜ್ಞಾನವನ್ನು ಅಮೆರಿಕ, ಇಂಗ್ಲೆಂಡ್​ ಮತ್ತು ಸಿಂಗಾಪುರ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಬಳಸಲಾಗುತ್ತಿದೆ. ಈ ಆಧುನಿಕ ತಂತ್ರಜ್ಞಾನದ ಬೇಸಾಯದಲ್ಲಿ ಮಣ್ಣಿಲ್ಲದ ವಾತಾವರಣ ಸೃಷ್ಟಿಸಿ, ಕೃಷಿ ಮಾಡುತ್ತಾರೆ. ಹೈಡ್ರೋಪೋನಿಕ್ ಕೃಷಿಯಲ್ಲಿ, ಸಸ್ಯಗಳನ್ನು ನೀರಿನಲ್ಲಿ ಬೆಳೆಯಬಹುದಾಗಿದೆ.

ಇದಕ್ಕಾಗಿ ರಂಜಕ, ಸಾರಜನಕ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಷ್, ಸತು, ಗಂಧಕ, ಕಬ್ಬಿಣ ಇತ್ಯಾದಿ ಅನೇಕ ಪೋಷಕಾಂಶಗಳು ಮತ್ತು ಖನಿಜಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ದ್ರಾವಣ ತಯಾರಿಸಿ, ಅದನ್ನು ನೀರಿನೊಳಗೆ ಬೆರೆಸಿ, ಆ ನೀರಿನಲ್ಲಿ ಸಸಿಗಳನ್ನು ಇಡಲಾಗುತ್ತದೆ. ಅಂದರೆ ಸಸಿಗಳ ಬೇರುಗಳನ್ನು ಪೈಪ್​ನಲ್ಲಿಟ್ಟು, ಆ ಪೈಪ್​ ಅನ್ನು ನೀರಿನಲ್ಲಿ ಇಡಲಾಗುತ್ತದೆ. ನೀರಿನಲ್ಲಿ ಬೆರೆತಿರುವ ಪೋಷಕಾಂಶಗಳನ್ನು ಪಡೆದ ಸಸಿ ನೀರಿನಲ್ಲೇ ಬೆಳೆಯುತ್ತದೆ.

ಈ ತಂತ್ರಜ್ಞಾನದ ಮೂಲಕ, ತರಕಾರಿಗಳು ಮತ್ತು ಇತರ ಸಸ್ಯಗಳನ್ನು ಒಳಾಂಗಣದಲ್ಲಿ ಬೆಳೆದು, ಬಹಳಷ್ಟು ನೀರನ್ನು ಉಳಿಸಬಹುದು. ಸಾಂಪ್ರದಾಯಿಕ ವಿಧಾನಗಳಲ್ಲಿ, ಮಣ್ಣಿನಲ್ಲಿ ಸಸಿ ನೆಟ್ಟು ನೀರು ಹರಿಸುವ ಮೂಲಕ ನೀರು ವ್ಯರ್ಥವಾಗುತ್ತದೆ. ಆದ್ದರಿಂದ ಹೈಡ್ರೋಪೋನಿಕ್ಸ್ ಪರಿಸರ ಸ್ನೇಹಿಯಾಗಿದೆ. ಲುದಿಯಾನಾ ವಿಶ್ವವಿದ್ಯಾನಿಲಯದ ಕೆಲವು ವಿಜ್ಞಾನಿಗಳು ಈ ತಂತ್ರಜ್ಞಾನದ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಈ ವಿವಿಗೆ ಈಟಿವಿ ಭಾರತ ತಂಡ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.

ಈ ತಂತ್ರಜ್ಞಾನವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಪಂಜಾಬ್ ವಿವಿಯ ವಿಜ್ಞಾನಿ ಡಾ.ರಾಕೇಶ್ ಶಾರ್ದಾ ಅವರನ್ನು ಈಟಿವಿ ಭಾರತ ತಂಡ ಭೇಟಿಯಾಗಿತ್ತು. ರಾಕೇಶ್ ಶಾರ್ದಾ ಅವರು ಹೈಡ್ರೋಪೋನಿಕ್ಸ್​ನಲ್ಲಿ ಸಾಕಷ್ಟು ಸಂಶೋಧನೆಯನ್ನು ಮಾಡಿದ್ದಾರೆ. ಮಣ್ಣುರಹಿತವಾಗಿ ಟೊಮೇಟೊ, ಕ್ಯಾಪ್ಸಿಕಂ ಮತ್ತು ಇತರ ತರಕಾರಿಗಳನ್ನು ಹೈಡ್ರೋಪೋನಿಕ್ಸ್ ತಂತ್ರಜ್ಞಾನದ ಮೂಲಕ ಬೆಳೆಯಲಾಗಿದೆ. ಇದಕ್ಕೆ ಪಾಲಿ ಹೌಸ್​​​ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ರಾಕೇಶ್ ಮಾಹಿತಿ ನೀಡಿದ್ದಾರೆ.

ಹೈಡ್ರೋಪೋನಿಕ್ ಕೃಷಿಯ ಪ್ರಯೋಜನಗಳು: ಹೈಡ್ರೋಪೋನಿಕ್ ಕೃಷಿಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಶೇಕಡಾ 90ರಷ್ಟು ನೀರನ್ನು ಉಳಿಸಬಹುದು. ಸಾಂಪ್ರದಾಯಿಕ ಬೇಸಾಯಕ್ಕೆ ಹೋಲಿಸಿದರೆ ಈ ಪದ್ಧತಿಯಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಗಿಡಗಳನ್ನು ಬೆಳೆಸಬಹುದು. ಪೋಷಕಾಂಶಗಳು ಕೂಡಾ ವ್ಯರ್ಥವಾಗುವುದಿಲ್ಲ. ಒಂದು ಗಿಡ ಫಸಲು ನೀಡಿದ ನಂತರ ಅದೇ ಜಾಗದಲ್ಲಿ ಮತ್ತೊಂದು ಗಿಡ ಬೆಳೆಸಬಹುದು.

ಇದನ್ನೂ ಓದಿ: ಕಚ್ಚಾ ತೆಂಗಿನ ಎಣ್ಣೆಯ ಉಪಯೋಗಗಳು ಇಲ್ಲಿವೆ..

ಈ ತಂತ್ರಜ್ಞಾನದ ಮೂಲಕ ಸಣ್ಣ ಬೆಳೆಗಳನ್ನು ಬೆಳೆಯಬಹುದಾಗಿದೆ. ಉದಾಹರಣೆಗೆ ಕ್ಯಾರೆಟ್, ಸೌತೆಕಾಯಿ, ಮೂಲಂಗಿ, ಆಲೂಗಡ್ಡೆ, ಕ್ಯಾಪ್ಸಿಕಂ, ಬಟಾಣಿ, ಮೆಣಸು, ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ, ಕಲ್ಲಂಗಡಿ, ಅನಾನಸ್, ಪಾಲಕ್​​, ಕೊತ್ತಂಬರಿ, ಪುದೀನ, ಟೊಮೇಟೊ ತರಕಾರಿಗಳನ್ನು ಬೆಳೆಯಬಹುದಾಗಿದೆ.

ಹೈಡ್ರೋಪೋನಿಕ್ಸ್​ ಅಳವಡಿಕೆಗೆ ಎಷ್ಟು ವೆಚ್ಚವಾಗುತ್ತದೆ?: ಡಾ.ರಾಕೇಶ್ ಶಾರ್ದಾ ಅವರು ಹೇಳುವಂತೆ ಹೈಡ್ರೋಪೋನಿಕ್ಸ್​ ತಂತ್ರಜ್ಞಾನದ ಸಂಪೂರ್ಣ ಅಳವಡಿಕೆಗೆ ಸುಮಾರು 40 ಸಾವಿರ ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ಕೋಕೋ ಪೀಟ್ ಬ್ಯಾಗ್, ಟ್ಯಾಂಕ್ ಮತ್ತು ಕೆಲವು ಮಷಿನ್​ಗಳು ಇರುತ್ತವೆ. ಈ ಮಷಿನ್​ಗಳು ತರಕಾರಿಗಳಿಗೆ ಅಗತ್ಯವಾಗಿರುವ ನೀರನ್ನು ಸ್ವಯಂಚಾಲಿತವಾಗಿ ಪೂರೈಸುತ್ತವೆ. ಮನೆಯಲ್ಲಿ ನಾಲ್ಕು ಮಂದಿ ಇದ್ದರೆ, ಅವರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗುತ್ತದೆ. ಕಳೆದ 1 ವರ್ಷದಲ್ಲಿ 20 ರಿಂದ 25 ಜಾಗದಲ್ಲಿ ಹೈಡ್ರೋಪೋನಿಕ್ಸ್ ತಂತ್ರಜ್ಞಾನ ಅಳವಡಿಸಲಾಗಿದೆ.

ಹೈಡ್ರೋಪೋನಿಕ್ಸ್ ಏಕೆ ಬೇಕು?: ನೀರಿನ ಬಳಕೆ ಇಲ್ಲಿ ಅತ್ಯಂತ ಮಿತವಾಗಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ದೇಶದ ಹಲವೆಡೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ದೇಶದ ವಾಯವ್ಯ ಭಾಗದಲ್ಲಿ ಅಂತರ್ಜಲ ಮಟ್ಟ ಒಂದು ಮೀಟರ್ ಕುಸಿದಿದೆ. 10 ವರ್ಷಗಳ ಹಿಂದೆ 30 ಮೀಟರ್ ಆಳದಲ್ಲಿ ಸಿಗುತ್ತಿದ್ದ ಅಂತರ್ಜಲ ಈಗ ಸಾವಿರ ಅಡಿಗಳಷ್ಟು ಆಳಕ್ಕೆ ತೆರಳಿದರೂ ಸಿಗುವುದಿಲ್ಲ. ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ಈ ಸಮಸ್ಯೆ ತೀರಾ ಸಾಮಾನ್ಯವಾಗಿದೆ.

ಅಂತರ್ಜಲ ಸಮಸ್ಯೆ ಒಂದೆಡೆಯಾದರೆ, ನೀರಿನಲ್ಲಿ ಫ್ಲೋರೈಡ್​ ಇರುವುದು ಕೂಡಾ ಮತ್ತೊಂದು ಸಮಸ್ಯೆಯಾಗಿದೆ. ಕೆಲವೊಂದು ಬಾರಿ ಫ್ಲೋರೈಡ್​ ಇರುವ ನೀರಿನಲ್ಲಿ ಯಾವುದನ್ನೂ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ನೀರನ್ನು ದಿನಬಳಕೆಗೂ ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೈಡ್ರೋಪೋನಿಕ್ಸ್​ ಕೃಷಿ ಫ್ಲೋರೈಡ್ ನೀರು ಸಿಗುವ ಪ್ರದೇಶಗಳಲ್ಲೂ ಬಳಸಬಹುದಾಗಿದೆ.

ಈ ತಂತ್ರಜ್ಞಾನದಲ್ಲಿ ಹೆಚ್ಚಿನ ಸುಧಾರಣೆಯನ್ನು ತರಲು ಪ್ರಯತ್ನ ಪಡಲಾಗುತ್ತಿದೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈಗಾಗಲೇ ಕೆಲವು ರೈತರಿಗೆ ತರಬೇತಿ ನೀಡಿದ್ದಾರೆ. ಪುಷ್ಪೋದ್ಯಮದಲ್ಲಿಯೂ ರೈತರಿಗೆ ಈ ತಂತ್ರಜ್ಞಾನವನ್ನು ಅಳವಡಿಸಲು ಶಿಫಾರಸು ಮಾಡಲಾಗಿದೆ. ರೈತರಿಗೆ ಈ ಬಗ್ಗೆ ತಿಳಿಸಲು ದೇಶಾದ್ಯಂತ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ವಿಶ್ವವಿದ್ಯಾನಿಲಯದ ಒಳಗೆ ಕಾರ್ಯಕ್ರಮಗಳನ್ನು ನಡೆಸಿ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ತಂತ್ರಜ್ಞಾನ ಮತ್ತಷ್ಟು ಸುಧಾರಣೆಗೊಂಡು, ಜನರಿಗೆ ಕೈಗೆಟಕುವಂತಾದರೆ ಮತ್ತೊಂದು ಹಸಿರು ಕ್ರಾಂತಿ ಸಾಧ್ಯವಾಗಬಲ್ಲದು ಎಂಬುದು ತಜ್ಞರ ಅಭಿಪ್ರಾಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.