ETV Bharat / science-and-technology

ಕಂಟೆಂಟ್​ ಕ್ರಿಯೇಟರ್ಸ್​ಗಾಗಿ ತಯಾರಾದ HP Envy x360 15 ಲ್ಯಾಪ್​ಟಾಪ್ ಬಿಡುಗಡೆ.. ಏನಿದರ ವಿಶೇಷತೆ? - ಹೊಸ ಶ್ರೇಣಿಯ Envy x360 15 ಲ್ಯಾಪ್‌ಟಾಪ್‌

HP ತನ್ನ ಹೊಸ ಶ್ರೇಣಿಯ Envy x360 ಲ್ಯಾಪ್‌ಟಾಪ್‌ಗಳನ್ನು 12 ನೇ ಜನ್ ಇಂಟೆಲ್ ಕೋರ್ EVO i7 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಇದನ್ನು ಭಾರತದಲ್ಲಿನ ಕಂಟೆಂಟ್​ ಕ್ರಿಯೇಟರ್​ಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ತಯಾರಿಸಲಾಗಿದೆ.

hp-launches-new-envy-x360-15-laptops-for-content-creators-in-india

author img

By

Published : Jan 23, 2023, 4:07 PM IST

ನವದೆಹಲಿ: ಪಿಸಿ ಮತ್ತು ಪ್ರಿಂಟರ್​ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿ HP Inc ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿರುವ ಹೊಸ ಶ್ರೇಣಿಯ Envy x360 15 ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು 15.6-ಇಂಚಿನ OLED ಟಚ್ ಡಿಸ್​ಪ್ಲೇ ಮತ್ತು ಬಾಳಿಕೆ ಬರುವ 360 ಡಿಗ್ರಿ ಹಿಂಜ್ ಅನ್ನು ಹೊಂದಿವೆ. ಇವುಗಳ ಆರಂಭಿಕ ಬೆಲೆ 82,999 ರೂಪಾಯಿಗಳಾಗಿದೆ.

ಎಚ್​ಪಿ ಯ ಹೊಸ Envy x360 15 ಶ್ರೇಣಿಯ ಲ್ಯಾಪ್​ಟಾಪ್​ಗಳು ಕಂಟೆಂಟ್ ರಚನೆಕಾರರಿಗೆ ಉತ್ತಮ ದರ್ಜೆಯ ಡಿಸ್​ಪ್ಲೇ ಮತ್ತು ಸ್ಮಾರ್ಟ್, ಉನ್ನತ ಕಾರ್ಯಕ್ಷಮತೆಯ ಉತ್ಪಾದಕತೆಯ ವೈಶಿಷ್ಟ್ಯಗಳ ಮೂಲಕ ತಮ್ಮ ಸೃಜನಶೀಲತೆ ಮತ್ತು ಅಭಿವ್ಯಕ್ತಿಗೆ ಅನುವು ಮಾಡಿಕೊಡುತ್ತದೆ ಎಂದು ಎಚ್​ಪಿ ಇಂಡಿಯಾದ ಪರ್ಸನಲ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಹೇಳಿದ್ದಾರೆ.

ಈ ಲ್ಯಾಪ್​ಟಾಪ್​​ನಲ್ಲಿ ಏನೇನೆಲ್ಲ ವಿಶೇಷತೆಗಳಿವೆ?: ಉತ್ತಮ ಡಿಸ್​ಪ್ಲೇ ಮತ್ತು ಶಕ್ತಿಯುತ ಕಾರ್ಯಕ್ಷಮತೆಗಾಗಿ ಹೊಸ HP Envy x360 15 ಪೋರ್ಟ್‌ಫೋಲಿಯೊ ಇಂಟೆಲ್ ಐರಿಸ್ Xe ಗ್ರಾಫಿಕ್ಸ್‌ನೊಂದಿಗೆ ಸಂಯೋಜಿಸಲ್ಪಟ್ಟ 12 ನೇ Gen ಇಂಟೆಲ್ ಕೋರ್ EVO i7 ಪ್ರೊಸೆಸರ್‌ ಅನ್ನು ಹೊಂದಿದೆ. ಕಂಪನಿಯ ಪ್ರಕಾರ ಈ ಲ್ಯಾಪ್​ಟಾಪ್​ನ ಫ್ಲಿಕ್ಕರ್-ಫ್ರೀ ಮತ್ತು ಆ್ಯಂಟಿ ರಿಫ್ಲೆಕ್ಷನ್ ಸ್ಕ್ರೀನ್ ದೀರ್ಘಾವಧಿ ಬಾಳಿಕೆ ಬರುತ್ತದೆ ಮತ್ತು ಅತ್ಯುತ್ತಮ ಬಣ್ಣಗಳ ಸಂಯೋಜನೆಯನ್ನು ನೀಡುತ್ತದೆ.

ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಐಸೇಫ್ ಡಿಸ್​ಪ್ಲೇ ಇದರಲ್ಲಿದೆ. ವೇಗವಾದ ಸಂವಹನಕ್ಕಾಗಿ ಎಮೋಜಿ ಕೀಬೋರ್ಡ್ ಇದ್ದು, 5MP IR ಕ್ಯಾಮೆರಾವನ್ನು ಆಟೋ ಫ್ರೇಮ್ ತಂತ್ರಜ್ಞಾನ ಮತ್ತು ವರ್ಧಿತ ಗೌಪ್ಯತೆಗಾಗಿ AI Noise reduction ನಂಥ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ Envy x360 15 ಶ್ರೇಣಿಯು ಲ್ಯಾಪ್​ಟಾಪ್​​ಗಳನ್ನು ಸಾಗರದಲ್ಲಿ ತೇಲುವ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮರುಬಳಕೆಯ ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದೆ. ಇದು ಹೆಚ್ಚಿನ ಸ್ಕ್ರೀನ್ ಕಾಣುವಂತೆ ಮತ್ತು ಸ್ಕ್ರೋಲಿಂಗ್ ಕಡಿಮೆ ಇರುವಂತೆ ಶೇಕಡಾ 88 ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೆಚ್ಚು ಸ್ಕ್ರೀನ್​​ನ ಪ್ರದರ್ಶನವನ್ನು ಹೊಂದಿದೆ. HP 'ಫಾಸ್ಟ್ ಚಾರ್ಜ್' ತ್ವರಿತ ಚಾರ್ಜಿಂಗ್‌ನೊಂದಿಗೆ ದೀರ್ಘ ಬ್ಯಾಟರಿ ಅವಧಿಯನ್ನು ಸಕ್ರಿಯಗೊಳಿಸುತ್ತದೆ. ಇದರ ಬ್ಯಾಟರಿ 10 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಹೊಸ ಅಪ್ಡೇಟ್​​​​​​​​ ಬಿಡುಗಡೆ ಮಾಡಿದ ವಾಟ್ಸ್​ಆ್ಯಪ್​: ಮೆಟಾ ಮಾಲೀಕತ್ವದ WhatsApp ಆಪಲ್ ಆ್ಯಪ್ ಸ್ಟೋರ್‌ನಲ್ಲಿ ಇತ್ತೀಚಿನ 23.1.75 ಅಪ್ಡೇಟ್​ ಅನ್ನು ನೀಡಿದೆ. ಮಾಧ್ಯಮ ವರದಿಯ ಪ್ರಕಾರ, ಈ ಅಪ್ಡೇಟ್ ಗ್ರೂಪ್ ಆ್ಯಡ್ಮಿನ್​ಗಳಿಗೆ ಹೊಸ ಶಾರ್ಟ್‌ಕಟ್‌ಗಳನ್ನು ನೀಡಲಿದೆ. ಈ ಶಾರ್ಟ್‌ಕಟ್‌ಗಳು ವಾಟ್ಸ್​ಆ್ಯಪ್ ಗ್ರೂಪ್‌ನಲ್ಲಿ ಗ್ರೂಪ್ ಅಡ್ಮಿನ್‌ಗಳು ನಿರ್ದಿಷ್ಟ ಕಾಂಟ್ಯಾಕ್ಟ್​ ನಂಬರ್ ಒಂದರ ಮೇಲೆ ಕ್ರಮ ಕೈಗೊಳ್ಳುವುದನ್ನು ಸುಲಭವಾಗಿಸಲಿವೆ.

ಯಾರಾದರೊಬ್ಬರು ಗ್ರೂಪ್​ಗೆ ಸೇರಿದಾಗ ಅಥವಾ ಗ್ರೂಪ್ ತೊರೆದಾಗ ಅಂಥ ಸಂದರ್ಭಗಳಲ್ಲಿ ಬಳಕೆದಾರರ ಕಾಂಟ್ಯಾಕ್ಟ್​ ನಂಬರ್ ಅನ್ನು ವಾಟ್ಸ್​ಆ್ಯಪ್ ಈಗ ಹೈಲೈಟ್ ಮಾಡುತ್ತದೆ. ಹೊಸ ಅಪ್‌ಡೇಟ್‌ನೊಂದಿಗೆ, ಗ್ರೂಪ್ ಅಡ್ಮಿನ್‌ಗಳು ವಾಟ್ಸ್​ಆ್ಯಪ್​ನಲ್ಲಿ ಕಾಂಟ್ಯಾಕ್ ನಂಬರ್​ ಅನ್ನು ಟ್ಯಾಪ್ ಆ್ಯಂಡ್ ಹೋಲ್ಡ್​ ಮಾಡುವ ಮೂಲಕ ತ್ವರಿತವಾಗಿ ಕರೆಗಳನ್ನು ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಆ್ಯಡ್ಮಿನ್​ಗಳು ಗ್ರೂಪ್​ನಲ್ಲಿ ಇರುವವರೊಂದಿಗೆ ಖಾಸಗಿಯಾಗಿ ಚಾಟ್ ಮಾಡಬಹುದು.

ಇದನ್ನೂ ಓದಿ: ರೋಲಿಂಗ್ ಡಿಸ್​ಪ್ಲೇ ಲ್ಯಾಪ್​ಟಾಪ್ ಪ್ರದರ್ಶಿಸಿದ ಲೆನೊವೊ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.