ತನ್ನ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ಉದ್ದೇಶದಿಂದ, ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸುತ್ತಿದೆ. ಬಳಕೆದಾರರಿಗೆ ಬೇಕಾದ ಹತ್ತಾರು ಹೊಸ ಹೊಸ ಫೀಚರ್ ಹಾಗೂ ಆಯ್ಕೆಗಳು ವಾಟ್ಸ್ಆ್ಯಪ್ ನಲ್ಲಿ ಈಗಾಗಲೇ ಇವೆ. ಅದರೊಂದಿಗೆ ಇದೀಗ ಅಭಿವೃದ್ಧಿಪಡಿಸಲಾಗುತ್ತಿರುವ ಈ ಹೊಸ ವೈಶಿಷ್ಟ್ಯ ಕೂಡ ಸೇರ್ಪಡೆಯಾಗಲಿದೆ. ಹಾಗಾದರೆ ಈ ಹೊಸ ವೈಶಿಷ್ಟ್ಯದಲ್ಲಿ ಏನೆಲ್ಲಾ ಇದೆ? ಇದರ ಉಪಯೋಗವೇನು? ಇದರಿಂದಾಗುವ ಲಾಭ ಹಾಗೂ ಮಹತ್ವಗಳೇನು? ಎಲ್ಲ ಅಪ್ಡೇಟ್ಗಳ ಮಾಹಿತಿ ಇಲ್ಲಿದೆ.
ವಾಟ್ಸ್ಆ್ಯಪ್ ವೆಬ್ ನ್ಯೂ ಸ್ಕ್ರೀನ್ ಲಾಕ್ (Can We Lock Whatsapp Web) ಎಂಬ ಹೊಸ ಫೀಚರ್ ಬಿಡುಗಡೆ ಮಾಡಲಾಗುತ್ತಿದ್ದು, ಇದು ಬಳಕೆದಾರರ ಗೌಪ್ಯತೆಯನ್ನು ಮತ್ತಷ್ಟು ಸುರಕ್ಷಿತವಾಗಿಡಬಲ್ಲದು ಎಂದು ವಾಟ್ಸ್ಆ್ಯಪ್ ಸಮೂಹ ಸಂಸ್ಥೆ ಹೇಳಿದೆ. ಈ ಹೊಸ ವೈಶಿಷ್ಟ್ಯವು ವಿಶೇಷವಾಗಿ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಬಳಸುವ ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಸಹ ಅದು ವಿವರಿಸಿದೆ. ಆದರೆ, ಈ ಫೀಚರ್ ಅಭಿವೃದ್ಧಿ ಹಂತದಲ್ಲಿರುವುದರಿಂದ ಸದ್ಯಕ್ಕೆ ಲಭ್ಯವಿಲ್ಲ.
ಸ್ಕ್ರೀನ್ ಲಾಕ್ ವೈಶಿಷ್ಟ್ಯ: ವಾಟ್ಸ್ಆ್ಯಪ್ ಬಳಕೆದಾರರು (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ತಮ್ಮ ಆಪ್ತರೊಂದಿಗೆ ಚಾಟಿಂಗ್ ಹಾಗೂ ಮಾಹಿತಿ ಹಂಚಿಕೊಂಡಿದ್ದರೆ ಸಂಪೂರ್ಣ ಲಾಗ್ ಔಟ್ ಆಗದೇ ಇನ್ನು ಮುಂದೆ ನ್ಯೂ ಸ್ಕ್ರೀನ್ ಲಾಕ್ ಮಾಡಬಹುದು. ಇದರಿಂದ ಇತರರು ಈ ಮಾಹಿತಿಯನ್ನು ನೋಡುವುದಾಗಲಿ, ಓದುವುದಾಗಲಿ, ಕದಿಯುವುದಾಗಲಿ ಸಾಧ್ಯವಿಲ್ಲ.
ಬಳಿಕ ಪಾಸ್ವರ್ಡ್ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕಂಪ್ಯೂಟರ್ ಬ್ರೌಸರ್‌ನಿಂದ ತಮ್ಮ ಚಾಟಿಂಗ್ಗೆ ಪುನಃ ಪ್ರವೇಶ ಮಾಡಬಹುದು. ಸ್ಕ್ರೀನ್ ಲಾಕ್ ಎಂದು ಕರೆಯಲ್ಪಡುವ ಈ ವೈಶಿಷ್ಟ್ಯವು ಪ್ರಸ್ತುತ ವಾಟ್ಸ್ಆ್ಯಪ್ ವೆಬ್ ಬೀಟಾ ಪ್ರೋಗ್ರಾಂನಲ್ಲಿ ದಾಖಲಾದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಅಭಿವೃದ್ಧಿ ಹಂತದಲ್ಲಿರುವುದರಿಂದ ಸದ್ಯಕ್ಕೆ ಲಭ್ಯವಿಲ್ಲ. ವಾಟ್ಸ್ಆ್ಯಪ್ ಬಳಕೆದಾರರೆಲ್ಲರಿಗೂ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಮಾತೃ ಸಂಸ್ಥೆ ಬೀಟಾ ತಿಳಿಸಿದೆ. ಸ್ಕ್ರೀನ್ ಲಾಕ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದಲ್ಲಿ, ಬಳಕೆದಾರರು ತಮ್ಮ ಬ್ರೌಸರ್‌ನಲ್ಲಿ ವಾಟ್ಸ್ಆ್ಯಪ್ ವೆಬ್ ಅನ್ನು ತೆರೆದಾಗಲೆಲ್ಲಾ ತಮ್ಮ ಪಾಸ್‌ವರ್ಡ್‌ನೊಂದಿಗೆ ತಮ್ಮನ್ನು ತಾವು ದೃಢೀಕರಿಸಬೇಕಾಗುತ್ತದೆ. ಇದು ಗಮನಿಸಬಹುದಾದ ಪ್ರಮುಖ ಅಂಶ.
ಕಾರ್ಯನಿರ್ವಹಣೆ ಹೇಗೆ: ಸ್ರ್ಕೀನ್ ಲಾಕ್ ವೈಶಿಷ್ಟ್ಯವು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನು ಇಲ್ಲಿ ಗಮನಿಸಬಹುದು. ಮೊದಲು ಈ ಹೊಸ ವೈಶಿಷ್ಟ್ಯವು ನಿಮ್ಮ ವಾಟ್ಸ್ಆ್ಯಪ್ನಲ್ಲಿ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಬಳಿಕ ಈ ಕೆಳಗಿನ ಹಂತಗಳನ್ನು ಪರಿಶೀಲಿಸಬಹುದು. ಬಳಕೆದಾರರು ಮೊದಲು ವೆಬ್ ಅಥವಾ ಲ್ಯಾಪ್ಟಾಪ್ನಲ್ಲಿ ವಾಟ್ಸ್ಆ್ಯಪ್ ಆನ್ ಮಾಡಿದ ತಕ್ಷಣ ಸೆಟ್ಟಿಂಗ್‌ಗೆ ತೆರಳಬೇಕು. ಬಳಿಕ ಅಲ್ಲಿ ಗೌಪ್ಯತೆ (Privacy)ಗೆ ತೆರಳಬೇಕು. ಅಲ್ಲಿ ಬಳಕೆದಾರರ ವಾಟ್ಸ್ಆ್ಯಪ್ ಖಾತೆಯಲ್ಲಿ ಈ ಹೊಸ ವೈಶಿಷ್ಟ್ಯ ಸಕ್ರಿಯಗೊಳಿಸಿದ್ದರೆ, 'ಸ್ಕ್ರೀನ್ ಲಾಕ್' ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅನಿವಾರ್ಯ ಅನ್ನಿಸಿದರೆ 'ಸ್ಕ್ರೀನ್ ಲಾಕ್' ಮಾಡಿ ಬಳಕೆದಾರು ಮತ್ತೊಂದು ಕೆಲಸ ಕಾರ್ಯ ಮಾಡಬಹುದು. ಇದು ಭದ್ರತೆ ದೃಷ್ಟಿಯಿಂದ ಒಳ್ಳೆಯದು. ನಂತರ ಬಳಕೆದಾರರು ವಾಟ್ಸ್ಆ್ಯಪ್ ವೆಬ್ ಅನ್ನು ತೆರೆಯಲು ಪಾಸ್ವರ್ಡ್ ಅನ್ನು ನಮೂದಿಸಬೇಕು. ಆಗ ಮಾತ್ರ ನೀವು ಚಾಟ್ ಪಟ್ಟಿಯನ್ನು ಪ್ರವೇಶಿಸಬಹುದು. ಒಂದು ವೇಳೆ ಪಾಸ್‌ವರ್ಡ್ ಮರೆತಿದ್ದರೆ QR ಕೋಡ್ ಸ್ಕ್ಯಾನ್ ಸಹಾಯದಿಂದ ಮತ್ತೆ ಲಾಗಿನ್ ಮಾಡಬಹುದು.
Whatsapp Video Call Latest Updat: ವಾಟ್ಸ್ಆ್ಯಪ್ ಇತ್ತೀಚೆಗಷ್ಟೇ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್ ಅನ್ನು ಹಂಚಿಕೊಳ್ಳಬಹುದಾದ ನೂತನ ಫೀಚರ್ ಅನ್ನು ಶೀಘ್ರವೇ ಬಿಡುಗಡೆ ಮಾಡಿತ್ತು. ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ವಾಟ್ಸ್ಆ್ಯಪ್ನ ಈ ಹೊಸ ಫೀಚರ್ ಬಗ್ಗೆ ಫೇಸ್‌ಬುಕ್‌ನಲ್ಲಿ ಘೋಷಿಸಿದ್ದರು. ನೀವು ವಿಡಿಯೋ ಕರೆಯಲ್ಲಿರುವಾಗ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಯಾವುದೇ ಡಾಕ್ಯುಮೆಂಟ್‌ಗಳು, ಫೋಟೋಗಳು ಇತ್ಯಾದಿಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು ಎಂದು ಅವರು ಈ ಕುರಿತು ಮಾಹಿತಿ ನೀಡಿದ್ದರು. ಇದೀಗ ಮತ್ತೊಂದು ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸುತ್ತಿದೆ.
ಇದನ್ನೂ ಓದಿ: Xನಲ್ಲಿ ಶೀಘ್ರದಲ್ಲೇ ಬರಲಿದೆ ವಿಡಿಯೋ ಕಾಲ್; ಸಿಇಒ ಯಕೊರಿನೊ ಸುಳಿವು