ಲಂಡನ್ (ಇಂಗ್ಲೆಂಡ್) : ಶತಮಾನಗಳಿಂದ ಬೆಳಕನ್ನೆ ಕಾಣದ ಚಂದ್ರನ ದಕ್ಷಿಣ ಧ್ರುವಕ್ಕೆ ಚಂದ್ರಯಾನ-3 ನೌಕೆಯ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದ ಭಾರತವನ್ನೀಗ ವಿಶ್ವವೇ ಹಾಡಿ ಹೊಗಳುತ್ತಿದೆ. ಬಾಹ್ಯಾಕಾಶ ಯಾನದಲ್ಲಿ ಸಾಧಿಸಿದ ವಿಕ್ರಮವನ್ನು ಅಮೆರಿಕದ ನಾಸಾ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳು ಮೆಚ್ಚಿಕೊಂಡು 'ಭಲೇ ಭಾರತ' ಎಂದಿವೆ.
-
#WATCH | London: Member of British Parliament Virendra Sharma congratulates the Indian scientists on the success of #Chandrayaan3
— ANI (@ANI) August 23, 2023 " class="align-text-top noRightClick twitterSection" data="
"The whole world is happy. Indians all over the world are happy, "he says pic.twitter.com/SBsipK6auu
">#WATCH | London: Member of British Parliament Virendra Sharma congratulates the Indian scientists on the success of #Chandrayaan3
— ANI (@ANI) August 23, 2023
"The whole world is happy. Indians all over the world are happy, "he says pic.twitter.com/SBsipK6auu#WATCH | London: Member of British Parliament Virendra Sharma congratulates the Indian scientists on the success of #Chandrayaan3
— ANI (@ANI) August 23, 2023
"The whole world is happy. Indians all over the world are happy, "he says pic.twitter.com/SBsipK6auu
ಇಂಗ್ಲೆಂಡ್ ಸಂಸತ್ ಸದಸ್ಯ ಲಾರ್ಡ್ ರಾಮಿ ರೇಂಜರ್ ಕೂಡ ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗೆ ಅಭಿನಂದಿಸಿದ್ದಾರೆ. ಚಂದ್ರನ ಮೇಲೆ ಯಾವುದೇ ದೇಶ ಮಾಡದ ಸಾಧನೆಯನ್ನು ಭಾತರ ಮಾಡಿ, ಇತಿಹಾಸ ನಿರ್ಮಿಸಿದೆ ಎಂದು ಹೊಗಳಿದ್ದಾರೆ.
ಭಾರತದ ವಿಕ್ರಮವನ್ನು ಇಡೀ ಜಗತ್ತೇ ಬೆಕ್ಕಸ ಬೆರಗಾಗಿ ನೋಡುತ್ತಿದೆ. ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರಲಿಲ್ಲ. ಅದನ್ನು ಇಸ್ರೋ ಮಾಡಿದೆ. ಇದು ಇತಿಹಾಸವೇ ಸರಿ. ನಮ್ಮೆಲ್ಲರಿಗೂ ಇದು ತುಂಬಾ ಭಾವನಾತ್ಮಕ ದಿನವಾಗಿತ್ತು. ನಾನು ಚಂದ್ರಸ್ಪರ್ಶವನ್ನು ನೋಡಿದೆ. ತುಂಬಾ ಆತಂಕದ ಮತ್ತು ಕೌತುಕದ ಕ್ಷಣವಾಗಿತ್ತು. ವರ್ಷಗಳ ಶ್ರಮ ಇದರಲ್ಲಿ ಗೋಚರವಾಗುತ್ತದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಭಾರತದ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬ್ರಿಟಿನ್ ಸಂಸದ ವೀರೇಂದ್ರ ಶರ್ಮಾ ಅವರು, ಚಂದ್ರಯಾನ-3 ರ ಯಶಸ್ಸಿಗೆ ಭಾರತೀಯ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾರತ, ಭಾರತೀಯರು ಮತ್ತು ಚಂದ್ರನ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್‌ನಲ್ಲಿ ಭಾಗಿಯಾಗಿರುವ ಎಲ್ಲರಿಗೂ ಅಭಿನಂದನೆ. ಇಡೀ ಜಗತ್ತೇ ಸಂತಸಪಟ್ಟಿದೆ. ಪ್ರಪಂಚದಾದ್ಯಂತ ಇರುವ ಭಾರತೀಯರು ಸಂತೋಷವಾಗಿದ್ದಾರೆ. ಭವಿತವ್ಯದ ಎಲ್ಲ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದಿದ್ದಾರೆ.
ರಷ್ಯಾ, ಅಮೇರಿಕಾ, ಚೀನಾದ ಬಳಿಕ ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ದೇಶ ಮತ್ತು ಕತ್ತಲೆ ಪ್ರಪಂಚವಾದ ದಕ್ಷಿಣ ಧ್ರುವದಲ್ಲಿ ಉಪಗ್ರಹವೊಂದನ್ನು ಯಶಸ್ವಿಯಾಗಿ ಲ್ಯಾಂಡ್ ಮಾಡಿದ ಮೊದಲ ರಾಷ್ಟ್ರ ಭಾರತವಾಗಿದೆ. ಇದು ಮುಂದಿನ ಬಾಹ್ಯಾಕಾಶ ಯಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಲಂಡನ್ ಭಾರತೀಯ ಹೈಕಮಿಷನ್ ಸಂಭ್ರಮ : ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಡೆದಿದ್ದಕ್ಕೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಸಂಭ್ರಮಾಚರಣೆ ಮಾಡಿದೆ. ಹೈಕಮಿಷನ್‌ನಲ್ಲಿದ್ದ ಅಧಿಕಾರಿಗಳು, ಜನರು ಭಾರತ್ ಮಾತಾ ಕೀ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗಿ ಇಸ್ರೋದ ಸಾಧನೆಯನ್ನು ಹೊಗಳಿದರು.
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಕೂಡ ಚಂದ್ರಯಾನ -3 ರ ಯಶಸ್ವಿ ಲ್ಯಾಂಡಿಂಗ್ಗಾಗಿ ಭಾರತವನ್ನು ಅಭಿನಂದಿಸಿದರು. ಜಗತ್ತು ಮತ್ತು ಭಾರತಕ್ಕೆ ದೊಡ್ಡ ಕ್ಷಣ 'ಬಧಾಯಿ ಹೋ' ಎಂದು ಹಿಂದಿಯಲ್ಲಿ ಶುಭಾಶಯ ಕೋರಿದ್ದಾರೆ.
ಕಮಲಾ ಹ್ಯಾರಿಸ್ ಅಭಿನಂದನೆ: ಭಾರತದ ಸಕ್ಸಸ್ಫುಲ್ ಚಂದ್ರಯಾನಕ್ಕೆ ಅಮೆರಿಕದ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಇಸ್ರೋ ಮತ್ತು ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ವಿಜ್ಞಾನಿಗಳು, ಎಂಜಿನಿಯರ್‌ಗಳು ನಂಬಲಾಗದ ಸಾಧನೆ ಎಂದು ಕರೆದಿದ್ದಾರೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ನಿಮ್ಮೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದು ಹ್ಯಾರಿಸ್ ಗುರುವಾರ ಟ್ವೀಟ್ ಮಾಡಿದ್ದಾರೆ.
ಬಾಹ್ಯಾಕಾಶಯಾನದ ದೊಡ್ಡ ಹೆಜ್ಜೆ: ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿನಂದಿಸಿದ್ದಾರೆ. ಭಾರತದ ಯಶಸ್ವಿ ಚಂದ್ರಯಾನದ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟಿನ್ ಸಂದೇಶ ಕಳುಹಿಸಿದ್ದು, ಚಂದ್ರಯಾನ -3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬಾಹ್ಯಾಕಾಶ ಪರಿಶೋಧನೆಯಲ್ಲಿ ದೊಡ್ಡ ಹೆಜ್ಜೆ. ಇದನ್ನು ಸಾಧಿಸಿರುವ ಇಸ್ರೋ ಸಾಮರ್ಥ್ಯವನ್ನು ಇದು ಸಾಬೀತು ಮಾಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್: ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಶನಿವಾರ ಬೆಂಗಳೂರಿಗೆ ಮೋದಿ ಆಗಮನ!