ETV Bharat / science-and-technology

ಟೆಲಿಗ್ರಾಮ್​​​ನ ಹೊಸ ಅಪ್ಡೇಟ್​ನಲ್ಲಿ ಏನೇನು ಹೊಸ ಫೀಚರ್ಸ್​​​ಗಳಿವೆ ಗೊತ್ತಾ?

author img

By

Published : Feb 8, 2023, 2:42 PM IST

ಇದೀಗ ಟೆಲಿಗ್ರಾಮ್​ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುತ್ತಿದೆ - ಬಳಕೆದಾರರಿಗೆ ಹೊಸ ಅಪ್ಡೇಟ್​​​ಗಳನ್ನು ನೀಡುತ್ತಿದೆ. ಈ ಅಪ್ಡೇಟ್​ ಮೂಲಕ ಏನೇನು ಹೊಸ ಫೀಚರ್ಸ್​ ಇವೆ ಎನ್ನುವುದನ್ನು ನೋಡುವುದಾದರೆ,

Telegram
ಟೆಲಿಗ್ರಾಮ್

ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಸಾಮಾಜಿಕ ಜಾಲತಾಣಗಳ ಜನಪ್ರಿಯತೆ ಕೂಡ ವಿಶಾಲವಾಗಿ ವ್ಯಾಪಿಸುತ್ತಾ ಸಾಗಿದೆ. ಅಂದಹಾಗೆ ಟೆಲಿಗ್ರಾಮ್ ​ಇದೀಗ ಮತ್ತಷ್ಟು ಹೊಸ ಹೊಸ ಅಪ್ಡೇಟ್​ ​ಗಳನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ತಂದಿದೆ. ಹಾಗೂ ಇದರಿಂದ ತನ್ನ ಹೊಸ ರೂಪವನ್ನು ಟೆಲಿಗ್ರಾಮ್ ಆಪ್​ ಪಡೆದುಕೊಂಡಿದೆ. ಎಮೋಜಿಗಳು, ಪ್ರೊಫೈಲ್ ಚಿತ್ರಗಳು, ಸಂದೇಶಗಳ ಅನುವಾದ ಹೀಗೆ ಒಂದಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಟೆಲಿಗ್ರಾಮ್​ ನವೀಕರಿಸಲಾಗಿದೆ.

ಪ್ರೊಫೈಲ್ ಚಿತ್ರ :ಟೆಲಿಗ್ರಾಮ್ 9.4 ಆವೃತ್ತಿಯ ನವೀಕರಣದ ಮೂಲಕ ಈ ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಬಳಕೆದಾರರಿಗೆ ಸ್ಟಿಕ್ಕರ್‌ಗಳು ಅಥವಾ ಅನಿಮೇಟೆಡ್ ಎಮೋಜಿಗಳನ್ನು ಪ್ರೊಫೈಲ್ ಚಿತ್ರಗಳಾಗಿ ಬದಲಾಯಿಸಲು ಬಳಕೆದಾರಿಗೆ ಪ್ರೊಫೈಲ್ ಫೋಟೋ ಮೇಕರ್ ಸೌಲಭ್ಯ ಕಲ್ಪಿಸಲಾಗಿದೆ. ಈ ಸೌಲಭ್ಯ ಬಳಕೆದಾರರು ತಮ್ಮ ಆಕೌಂಟ್​, ಚಾನಲ್‌ಗಳು ಮತ್ತು ಎಲ್ಲ ಗುಂಪುಗಳಲ್ಲಿ ಬಳಸಬಹುದು. ಇದು ಪ್ರೀಮಿಯಂ ಬಳಕೆದಾರರಿಗೆ ಮಾತ್ರವಲ್ಲದೇ ಎಲ್ಲ ಟೆಲಿಗ್ರಾಮ್​ ಬಳಕೆದಾರಿಗೂ ಲಭ್ಯವಿರುತ್ತದೆ.

ಸಂದೇಶ ಭಾಷಾಂತರ: ಟೆಲಿಗ್ರಾಮ್​ ಚಾಟ್‌ನಲ್ಲಿಯೇ ಬರುವ ಸಂದೇಶಗಳನ್ನು ನೇರವಾಗಿ ಭಾಷಾಂತರಿಸುವ ಸೌಲಭ್ಯವನ್ನು 9.4 ಅಪ್ಡೇಟ್​ನಲ್ಲಿ ನೀಡಲಾಗಿದೆ. ಚಾಟ್‌ನ ಮೇಲ್ಭಾಗದಲ್ಲಿ ಅನುವಾದದ ಬಾರ್ ಇರುತ್ತದೆ. ಇದರ ಮೂಲಕ ಸಂದೇಶಗಳನ್ನು ಸುಲಭವಾಗಿ ಭಾಷಾಂತರ ಮಾಡಬಹುದಾಗಿದೆ. ಆದರೆ, ಬಳಕೆದಾರರು ಪ್ರತಿ ಸಂದೇಶವನ್ನು ಆಯ್ಕೆ ಮಾಡಬೇಕು ನಂತರ ಅದನ್ನು ಅನುವಾದಿಸಬೇಕಾಗುತ್ತದೆ.

ಪಿ ಚಾರ್ಟ್‌: ನಾವು ಟೆಲಿಗ್ರಾಮ್ ಅನ್ನು ಬಳಸುತ್ತಲೇ ಎಷ್ಟು ಡೇಟಾ ಖಾಲಿಯಾಗಿದೆ ಎಂದು ಪಿ ಚಾರ್ಟ್​ ಮೂಲಕ ನೋಡಬಹುದಾಗಿದೆ. ಇದಕ್ಕಾಗಿ ನೆಟ್‌ವರ್ಕ್ ಬಳಕೆಯ ವೈಶಿಷ್ಟ್ಯವನ್ನು ಲಭ್ಯಗೊಳಿಸಲಾಗಿದೆ. ಈ ಸೌಲಭ್ಯದಿಂದ ಬಳಕೆದಾರರು ಮೊಬೈಲ್ ಡೇಟಾ ಮಾತ್ರವಲ್ಲದೇ ವೈಫೈ ಡೇಟಾ ಕೂಡ ತಿಳಿದುಕೊಳ್ಳಬಹುದು. ಜೊತೆಗೆ ಸ್ವಯಂ ಸಂದೇಶಗಳನ್ನು ಬ್ಯಾಕ್​ಅಪ್​ ಮಾಡುವ ವೈಶಿಷ್ಟ್ಯವನ್ನು ಸಹ ಹೊಸ ಆವೃತ್ತಿಯಲ್ಲಿ ಸೇರಿಸಲಾಗಿದೆ. ನಮಗೆ ಯಾವ ಸಂದರ್ಭದಲ್ಲಿ ಸಂದೇಶ ಉಳಿಸಬೇಕು ಎನಿಸಿಸುತ್ತದೆಯೋ ಅ ವೇಳೆ ಈ ಟೆಲಿಗ್ರಾಮ್​ 9.4 ವೈಶಿಷ್ಟ್ಯವನ್ನು ಆಯ್ಕೆ ಮಾಡಬಹುದಾಗಿದೆ.

ಎಮೋಜಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಣೆ : ಇನ್ನು ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ಇನ್‌ಸ್ಟಾಗ್ರಾಮ್‌ನಂತೆ ಎಮೋಜಿಗಳನ್ನು ವಿಭಜಿಸುವ ಸೌಲಭ್ಯವನ್ನು 9.4 ಟೆಲಿಗ್ರಾಮ್ ಅಪ್ಡೇಟ್​ನಲ್ಲಿ ಕಾಣಬಹುದಾಗಿದೆ.​ ಇದರೊಂದಿಗೆ ಪ್ರತಿಯೊಂದು ಎಮೋಜಿಗಳನ್ನು ಅನುಸಾರವಾಗಿ ವಿವಿಧ ವರ್ಗಗಳಾಗಿ ವಿಂಗಡಿಸಬಹುದು. ಈ ಹೊಸ ಅಪ್ದೇಟ್‌ನೊಂದಿಗೆ ಬಳಕೆದಾರರಿಗೆ ಲಕ್ಷಾಂತರ ಎಮೋಜಿಗಳು ಮತ್ತು ಸ್ಟಿಕ್ಕರ್‌ಗಳು ಸಹ ಟೆಲಿಗ್ರಾಮ್​ನಲ್ಲಿ ಲಭ್ಯವಿವೆ.

ಮೀಡಿಯಾ ಪರ್ಮಿಷನ್: ಟೆಲಿಗ್ರಾಮ್​ನಲ್ಲಿ ಗ್ರೂಪ್ ಅಡ್ಮಿನ್‌ಗಳಿಗಾಗಿ ಮೀಡಿಯಾ ಪರ್ಮಿಷನ್ ವೈಶಿಷ್ಟ್ಯವೂ ಲಭ್ಯವಿದೆ. ಜೊತೆಗೆ ಗುಂಪಿನ ಸದಸ್ಯರು ಯಾವ ರೀತಿಯ ವಿಡಿಯೋಗಳನ್ನು ಕಳುಹಿಸಬೇಕು ಎಂಬುದನ್ನು ಗ್ರೂಪ್​ ಅಡ್ಮಿನ್​ಗಳು ನಿರ್ಧರಿಸಬಹುದು. ಉದಾಹರಣೆಗೆ: ಅಡ್ಮಿನ್‌ ಈ ವೈಶಿಷ್ಟ್ಯದ ಮೂಲಕ ವೀಡಿಯೊ ಕಳುಹಿಸುವುದನ್ನು ನಿಷ್ಕ್ರಿಯಗೊಳಿಸಿದರೆ, ಆ ಗುಂಪಿನಲ್ಲಿ ಇತರ ಸದಸ್ಯರಿಗೆ ವಿಡಿಯೋಗಳನ್ನು ಕಳುಹಿಸಲು ಅಥವಾ ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ :ಹೊಸ ಬಿಂಗ್ ಸರ್ಚ್ ಇಂಜಿನ್ ಪರಿಚಯಿಸಿದ ಮೈಕ್ರೋಸಾಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.