ETV Bharat / science-and-technology

ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 5G ನೆಟ್​ವರ್ಕ್ ಪಡೆದ ಮೊದಲ ರಾಜ್ಯ ಗುಜರಾತ್ - 5G ನೆಟ್​ವರ್ಕ್ ಪಡೆದ ಮೊದಲ ರಾಜ್ಯ ಗುಜರಾತ್

'ಎಲ್ಲರಿಗೂ ಶಿಕ್ಷಣ' ಎಂಬ ಉಪಕ್ರಮದ ಭಾಗವಾಗಿ ರಿಲಯನ್ಸ್ ಫೌಂಡೇಶನ್ ಮತ್ತು ಜಿಯೋ ಗುಜರಾತ್‌ನಲ್ಲಿ 100 ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಿವೆ. ಟ್ರೂ 5ಜಿ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ ಶೇಕಡಾ 100 ರಷ್ಟು ಜಿಲ್ಲಾ ಕೇಂದ್ರಗಳನ್ನು ಹೊಂದಿರುವ ಮೊದಲ ರಾಜ್ಯ ಗುಜರಾತ್ ಆಗಿದೆ.

ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 5G ನೆಟ್​ವರ್ಕ್ ಪಡೆದ ಮೊದಲ ರಾಜ್ಯ ಗುಜರಾತ್
Gujarat 1st state to get Jio True 5G across all districts
author img

By

Published : Nov 25, 2022, 3:17 PM IST

ಮುಂಬೈ: ಎಲ್ಲ 33 ಜಿಲ್ಲಾ ಕೇಂದ್ರಗಳಲ್ಲಿ 'ಟ್ರೂ 5 ಜಿ' ನೆಟ್​ವರ್ಕ್ ಪಡೆದ ಮೊದಲ ರಾಜ್ಯ ಗುಜರಾತ್ ಆಗಿದೆ ಎಂದು ರಿಲಯನ್ಸ್ ಜಿಯೋ ಶುಕ್ರವಾರ ಹೇಳಿದೆ. ಇದರೊಂದಿಗೆ, ಜಿಯೋ 'True 5G' ಈಗ ಭಾರತದ 46 ನಗರಗಳು/ಪಟ್ಟಣಗಳಲ್ಲಿ ಚಾಲನೆಗೊಂಡಿದೆ. ಮಾದರಿ ರಾಜ್ಯವಾಗಿ, ಜಿಯೋ ಗುಜರಾತ್‌ನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು IoT ವಲಯಗಳಲ್ಲಿ ಟ್ರೂ 5ಜಿ ಚಾಲಿತ ಉಪಕ್ರಮಗಳ ಸರಣಿಯನ್ನು ಪ್ರಾರಂಭಿಸಲಿದೆ ಮತ್ತು ನಂತರ ಅದನ್ನು ದೇಶಾದ್ಯಂತ ವಿಸ್ತರಿಸಲಿದೆ.

ಮೊದಲಿಗೆ 'ಎಲ್ಲರಿಗೂ ಶಿಕ್ಷಣ' ಎಂಬ ಉಪಕ್ರಮದ ಭಾಗವಾಗಿ ರಿಲಯನ್ಸ್ ಫೌಂಡೇಶನ್ ಮತ್ತು ಜಿಯೋ ಗುಜರಾತ್‌ನಲ್ಲಿ 100 ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಿವೆ. ಟ್ರೂ 5ಜಿ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ ಶೇಕಡಾ 100 ರಷ್ಟು ಜಿಲ್ಲಾ ಕೇಂದ್ರಗಳನ್ನು ಹೊಂದಿರುವ ಮೊದಲ ರಾಜ್ಯ ಗುಜರಾತ್ ಆಗಿದೆ.

ನಾವು ಈ ತಂತ್ರಜ್ಞಾನದ ನೈಜ ಶಕ್ತಿಯನ್ನು ಮತ್ತು ಇದು ಒಂದು ಶತಕೋಟಿ ಜನರ ಜೀವನವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಲು ಬಯಸುತ್ತೇವೆ ಎಂದು ರಿಲಯನ್ಸ್‌ ಜಿಯೋ ಇನ್ಫೋಕಾಮ್ ಲಿಮಿಟೆಡ್ ಚೇರಮನ್ ಆಕಾಶ್ ಎಂ. ಅಂಬಾನಿ ಹೇಳಿದ್ದಾರೆ.

1Gbps ವೇಗದಲ್ಲಿ ಅನಿಯಮಿತ 5ಜಿ ಡೇಟಾ ಒದಗಿಸುವ ಟ್ರೂ 5G ಪುಣೆಯಲ್ಲಿ ಲಭ್ಯವಿರುತ್ತದೆ ಎಂದು ಜಿಯೋ ಮೊದಲೇ ಘೋಷಿಸಿತ್ತು. ನವೆಂಬರ್ 23 ರಿಂದ ಪುಣೆಯಲ್ಲಿರುವ ಜಿಯೋ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಅನಿಯಮಿತ ಡೇಟಾ ಬಳಸಬಹುದಾಗಿದೆ. ಕಳೆದ ವಾರ, ದೆಹಲಿ, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್, ಫರಿದಾಬಾದ್ ಮತ್ತು ಇತರ ಪ್ರಮುಖ ಸ್ಥಳಗಳನ್ನು ಒಳಗೊಂಡಂತೆ ಇಡೀ ದೆಹಲಿ-ಎನ್‌ಸಿಆರ್ ಪ್ರದೇಶದಾದ್ಯಂತ 'ಟ್ರೂ 5G' ಸೇವೆಗಳನ್ನು ಜಿಯೋ ಆರಂಭಿಸಿದೆ.

ಇದನ್ನೂ ಓದಿ: ರಿಲಯನ್ಸ್ ಜಿಯೋ; ದೆಹಲಿಯಲ್ಲಿ 600 Mbps ದಾಖಲಿಸಿದ 5G ವೇಗ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.