ETV Bharat / science-and-technology

ಕೆಲ ಕೆನಡಿಯನ್ನರಿಗೆ ಸುದ್ದಿಗಳನ್ನು ನಿರ್ಬಂಧಿಸಲು ಮುಂದಾದ ಗೂಗಲ್​ - ಕೆನಡಾದ ಬಳಕೆದಾರರನ್ನು ಗೂಗಲ್​ ನಿರ್ಬಂಧಿಸುತ್ತಿದೆ

ಕೆನಡಾದ ಬಳಕೆದಾರರಲ್ಲಿ ಶೇಕಡಾ 4 ಕ್ಕಿಂತ ಕಡಿಮೆ ಜನರಿಗೆ ಸುದ್ದಿಗಳ ವೀಕ್ಷಣೆಗೆ ತಾತ್ಕಾಲಿಕವಾಗಿ ಸೀಮಿತಗೊಳಿಸುತ್ತಿದೆ ಎಂದು ಕಂಪನಿ ತಿಳಿಸಿದೆ

ಕೆಲವು ಕೆನಡಿಯನ್ನರಿಗೆ ಸುದ್ದಿಗಳನ್ನು ನಿರ್ಬಂಧಿಸಲು ಪರೀಕ್ಷೆಗೆ ಮುಂದಾದ ಗೂಗಲ್​
Google is testing to block news for some Canadians
author img

By

Published : Feb 23, 2023, 12:21 PM IST

ಒಟ್ಟೊವಾ: ಕೆನಡಾದ ಸರ್ಕಾರದ ಆನ್‌ಲೈನ್ ಬಿಲ್​ಗಳ ಸಾಮರ್ಥ್ಯ ಪರೀಕ್ಷೆ ಹಿನ್ನೆಲೆ ಕೆಲವು ಸುದ್ದಿಗಳನ್ನು ವೀಕ್ಷಿಸಲು ಕೆನಡಾದ ಬಳಕೆದಾರರನ್ನು ಗೂಗಲ್​ ನಿರ್ಬಂಧಿಸುತ್ತಿದೆ. ಬಿಲ್ ಸಿ-18, ಆನ್‌ಲೈನ್ ನ್ಯೂಸ್ ಆ್ಯಕ್ಟ್, ಗೂಗಲ್ ಮತ್ತು ಮೆಟಾದಂತಹ ಡಿಜಿಟಲ್ ದೈತ್ಯರು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಿಷಯವನ್ನು ಮರುಪ್ರಕಟಿಸಲು ಕೆನಡಾದ ಮಾಧ್ಯಮ ಕಂಪನಿಗಳಿಗೆ ಪರಿಹಾರವನ್ನು ನೀಡುವ ಸಂಬಂಧ ಮಾತುಕತೆ ಮಾಡಬೇಕಾಗುತ್ತದೆ.

ಬಿಲ್‌ಗೆ ಪ್ರತಿಕ್ರಿಯೆಗಳನ್ನು ನಿರ್ಣಯಿಸುವುದರಿಂದ ಅದರ ಕೆನಡಾದ ಬಳಕೆದಾರರಲ್ಲಿ ಶೇಕಡಾ 4 ಕ್ಕಿಂತ ಕಡಿಮೆ ಜನರಿಗೆ ಸುದ್ದಿಗಳ ವೀಕ್ಷಣೆಗೆ ತಾತ್ಕಾಲಿಕವಾಗಿ ಸೀಮಿತಗೊಳಿಸುತ್ತಿದೆ ಎಂದು ಕಂಪನಿ ತಿಳಿಸಿದೆ. ಈ ಬದಲಾವಣೆಯು ಅದರ ಸರ್ವತ್ರ ಸರ್ಚ್ ಇಂಜಿನ್ ಮತ್ತು ಆ್ಯಂಡ್ರೊಯ್ಡ್​​ ಸಾಧನಗಳಲ್ಲಿನ ಡಿಸ್ಕವರ್ ವೈಶಿಷ್ಟ್ಯಕ್ಕೆ ಅನ್ವಯಿಸುತ್ತದೆ.

ಈ ಪರೀಕ್ಷೆಯಿಂದ ಎಲ್ಲಾ ರೀತಿಯ ಸುದ್ದಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಐದು ವಾರಗಳ ಕಾಲ ಇದು ಮುಂದುವರೆಯಲಿದೆ ಎಂದು ಕಂಪನಿ ತಿಳಿಸಿದೆ. ಕೆನಡಿಯನ್​ ಬ್ರಾಡ್​ಕಾಸ್ಟರ್​ ಮತ್ತು ನ್ಯೂಸ್​ಪೇಪರ್​ ಸೃಷ್ಟಿಸಿದ ವಿಷಯಗಳನ್ನು ಕೂಡ ಇದು ಹೊಂದಿರಲಿದೆ. ಬಿಲ್​ ಸಿ-18ಗೆ ಸಂಬಂಧಿಸಿದಂತೆ ನಾವು ಅದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಾಗುತ್ತಿದೆ. ಇದು ಕಡಿಮೆ ಪ್ರಮಾಣದ ಕೆನಡಿಯನ್​ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಗೂಗಲ್​ ವಕ್ತಾರ ಶೇಪೌರ್ಡಿ ತಿಳಿಸಿದ್ದಾರೆ.

ತನ್ನ ಸರ್ಚ್​ ಇಂಜಿನ್​ ಸಾಮರ್ಥ್ಯದ ಬಳಕೆಗಾಗಿ ಸಂಸ್ಥೆ ಪ್ರತಿ ವರ್ಷ ಸಾವಿರಾರು ಪರೀಕ್ಷೆಗಳನ್ನು ನಡೆಸುತ್ತದೆ. ಸಿ18 ತುಂಬಾ ವಿಶಾಲವಾಗಿದೆ. ಬದಲಾಗದೆ ಇದ್ದಲ್ಲಿ, ಕೆನಡಿಯನ್ನರು ಬಳಸುವ ಮತ್ತು ಪ್ರತಿದಿನ ಅವಲಂಬಿಸುವ ಉತ್ಪನ್ನಗಳ ಮೇಲೆ ಪರಿಣಾಮ ಬೀರಬಹುದು ಎಂಬ ನಮ್ಮ ಕಾಳಜಿಯ ಬಗ್ಗೆ ನಾವು ಸಂಪೂರ್ಣವಾಗಿ ಪಾರದರ್ಶಕವಾಗಿದ್ದೇವೆ ಎಂದು ಪೌರ್ಡಿ ತಿಳಿಸಿದ್ದಾರೆ.

ಕೆನಡಿಯನ್ನರು ಹೆದರುವುದಿಲ್ಲ. ಗೂಗಲ್​ ಮೆಟಾದ ಪ್ಲೇಬುಕ್‌ನಿಂದ ಎರವಲು ಪಡೆಯುತ್ತಿರುವುದು ನಿರಾಶದಾಯಕ ಎಂದು ಕರೆಯುತ್ತಾರೆ. ಕಳೆದ ವರ್ಷ, ಆ ಕಂಪನಿಯು ಬಿಲ್‌ಗೆ ಪ್ರತಿಕ್ರಿಯೆಯಾಗಿ ತನ್ನ ಸೈಟ್‌ನಿಂದ ಸುದ್ದಿಗಳನ್ನು ನಿರ್ಬಂಧಿಸುವುದಾಗಿ ಬೆದರಿಕೆ ಹಾಕಿತು. ಇದು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಲಿಲ್ಲ ಮತ್ತು ಕೆನಡಿಯನ್ನರು ಭಯಪಡದ ಕಾರಣ ಇಲ್ಲಿ ಕೆಲಸ ಮಾಡುವುದಿಲ್ಲ. ಕೆನಡಿಯನ್ನರು ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ, ಸತ್ಯ ಆಧಾರಿತ ಸುದ್ದಿಗಳಿಗೆ ಪ್ರವೇಶವನ್ನು ಹೊಂದಿರಬೇಕು. ಅದಕ್ಕಾಗಿಯೇ ನಾವು ಆನ್‌ಲೈನ್ ಸುದ್ದಿ ಕಾಯ್ದೆಯನ್ನು ಪರಿಚಯಿಸಿದ್ದೇವೆ. ಟೆಕ್ ದೈತ್ಯರು ಕೆನಡಿಯನ್ನರಿಗೆ ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರರಾಗಿರಬೇಕು ಎಂದು ರೊಡ್ರಿಗೌಸ್​ ತಿಳಿಸಿದ್ದಾರೆ.

2021ರಲ್ಲಿ ಆಸ್ಟ್ರೇಲಿಯಾದಲ್ಲಿ ಪಾಸಾದ ಕಾನೂನಿನ ರೀತಿಯಲ್ಲಿಯೇ ಇದು ಇದೆ. ಡಿಜಿಟಲ್ ಸುದ್ದಿ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತತೆಯನ್ನು ಹೆಚ್ಚಿಸುತ್ತದೆ ಎಂದು ರೊಡ್ರಿಗೌಸ್​ ತಿಳಿಸಿದ್ದಾರೆ.

ಇದನ್ನೂ ಓದಿ: ಓಪನ್ ಸೋರ್ಸ್ ಆಗಲಿದೆ ಟ್ವಿಟರ್ ಅಲ್ಗಾರಿದಂ: ಮಸ್ಕ್ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.