ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ನ ಎಐ ಚಾಟ್‌ಬಾಟ್ ಮತ್ತು ಚಾಟ್ಜಿಪಿಟಿ ಪ್ರತಿಸ್ಪರ್ಧಿ ಬಾರ್ಡ್ ಹೊಸ ವೈಶಿಷ್ಟ್ಯ ಹೊರ ತರಬಹುದಾಗಿದೆ. ಮೆಮೊರಿ ಎಂಬ ಈ ವೈಶಿಷ್ಟ್ಯವನ್ನು ಬಾರ್ಡ್ ಪರಿಚಯಿಸಲಿದ್ದು, ಇದರಿಂದ ಅನೇಕ ಲಾಭಗಳಿವೆ. ಈ ಮೆಮೊರಿ ವೈಶಿಷ್ಟ್ಯದಿಂದ ನಿಮ್ಮ ಮತ್ತು ನಿಮ್ಮ ಆದ್ಯತೆಗಳ ಕುರಿತು ಪ್ರಮುಖ ವಿವರಗಳನ್ನು ಸಂಗ್ರಹಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ವರದಿಗಳು ಹೇಳುತ್ತಿವೆ.
ಬಾರ್ಡ್‌ನ ಪ್ರಕಾರ, ಈ ಮೆಮೊರಿ ವೈಶಿಷ್ಟ್ಯವು ಎಐ ಚಾಟ್‌ಬಾಟ್‌ಗೆ ನೀವು ಹಂಚಿಕೊಳ್ಳುವ ನಿರ್ದಿಷ್ಟ ವಿವರಗಳ ಬಗ್ಗೆ ಟ್ರ್ಯಾಕ್ ಮಾಡಲು ಮತ್ತು ಭವಿಷ್ಯದ ಫಲಿತಾಂಶಗಳನ್ನು ಸುಧಾರಿಸಲು ಇದರ ಅನುಮತಿ ಉಪಯುಕ್ತವಾಗಿದೆ ಎಂದು ಹೇಳಿದೆ.
ಅಡುಗೆ ವಿಧಾನಗಳು ಅಥವಾ ರಜೆಯ ಸಲಹೆಗಳಿಗಾಗಿ ನೀವು ಕೇಳಿದಾಗ, ಮಾಂಸವನ್ನು ತಿನ್ನುವುದಾಗಲಿ ಅಥವಾ ನಿಮಗೆ ಇಬ್ಬರು ಮಕ್ಕಳಿದ್ದಾರೆ ಅಂತಾ ನೆನಪಿಸುವುದಾಗಲಿ ಬಾರ್ಡ್‌ಗೆ ಅಗತ್ಯವಿರುವುದಿಲ್ಲ. ಇದಲ್ಲದೆ, ಮೆಮೊರಿಯಲ್ಲಿ ಹೊಸ ಆದ್ಯತೆಗಳನ್ನು ಸಹ ಸೇರಿಸಬಹುದಾಗಿದೆ. ಅಷ್ಟೇ ಅಲ್ಲ ತಪ್ಪಾಗಿ ನಮೂದಿಸಿದಲ್ಲಿ ಅಥವಾ ಅನಪೇಕ್ಷಿತಗಳನ್ನು ತೆಗೆದುಹಾಕಲು ನಿಮಗೆ ಅನುಮತಿಸುತ್ತದೆ. ಇನ್ನು ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಬಾರ್ಡ್‌ನ ಮುಖಪುಟ ಪರದೆಯ ಎಡಭಾಗದಲ್ಲಿ ಟಾಗಲ್ ಬಾರ್ಡ್ ಮೆಮೊರಿಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ಆಫ್ ಮಾಡಲು ನಿಮಗೆ ಅವಕಾಶ ಕಲ್ಪಿಸಲಾಗಿದೆ.
ಸ್ನೇಹಿತರಿಗೆ ಬಾರ್ಡ್ ಅನ್ನು ಪ್ರದರ್ಶಿಸುವುದು ಅಥವಾ ಮುಂದಿನ ಬಾರಿ ನೆನಪಿಲ್ಲದಿರುವ ವಿಷಯಗಳ ಕುರಿತು ಚಾಟ್‌ಬಾಟ್ ಅನ್ನು ಕೇಳುವುದು ಮುಂತಾದ ನೆನಪುಗಳನ್ನು ಆಧರಿಸಿರದ ಸಂಭಾಷಣೆಗಳನ್ನು ಪ್ರಾರಂಭಿಸಲು ಇದು ಸರಳವಾಗಿಸುತ್ತದೆ ಎಂದು ವರದಿ ವಿವರಿಸಿದೆ.
ಗೂಗಲ್ ಬಾರ್ಡ್‌ನ ಹೆಚ್ಚು ಸಮರ್ಥ ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಅದು ಈಗ ಜಿಮೇಲ್, ಡಾಕ್ಸ್, ಡ್ರೈವ್, ನಕ್ಷೆಗಳು, YouTube, ಮತ್ತು Google ಫ್ಲೈಟ್‌ಗಳು ಮತ್ತು ಹೋಟೆಲ್‌ಗಳು ಸೇರಿದಂತೆ Google ಅಪ್ಲಿಕೇಶನ್‌ಗಳು ಮತ್ತು ಸೇವೆಗಳೊಂದಿಗೆ ಹೆಚ್ಚು ಸಹಾಯಕವಾದ ಪ್ರತಿಕ್ರಿಯೆಗಳಿಗಾಗಿ ಸಂಯೋಜಿಸುತ್ತದೆ. ಬಾರ್ಡ್‌ನ ಉತ್ತರಗಳನ್ನು ಎರಡು ಬಾರಿ ಪರಿಶೀಲಿಸಲು "ಗೂಗಲ್ ಇಟ್" ವೈಶಿಷ್ಟ್ಯವನ್ನು ಸುಧಾರಿಸಲಾಗಿದೆ ಮತ್ತು ಹೆಚ್ಚಿನ ಸ್ಥಳಗಳಿಗೆ ಪ್ರವೇಶವನ್ನು ವಿಸ್ತರಿಸಿದೆ ಎಂದು ಕಂಪನಿ ಹೇಳಿದೆ.
ಓದಿ: ರೋಗಪತ್ತೆ ಮಾಡಲು ವೈದ್ಯರಿಗೆ ನೆರವಾಗಬಲ್ಲದು ಚಾಟ್ ಜಿಪಿಟಿ: ವರದಿ
ಗೂಗಲ್ ಬಾರ್ಡ್: ಗೂಗಲ್ ತನ್ನ ಎಐ ಸಾಫ್ಟ್ವೇರ್ ಬಾರ್ಡ್ ಅನ್ನು ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತ್ತು. ಪ್ರಾರಂಭದ ಸಮಯದಲ್ಲಿ ಬಾರ್ಡ್ ಚಾಟ್‌ಬಾಟ್ ಅನ್ನು ಹೊಸ ಸರ್ಚ್ ಎಂಜಿನ್ ಆಗಿ ಜನ ಬಳಸಲಾರಂಭಿಸಿದ್ದರು ಮತ್ತು ಗೂಗಲ್ಗೆ ಪರ್ಯಾಯವೆಂದು ನೋಡಲಾಗಿತ್ತು. ಆದಾಗ್ಯೂ, ಬಾರ್ಡ್ ಇನ್ನೂ ಸುಧಾರಿಸುತ್ತಿರುವುದರಿಂದ ಅದು ಸರಿಯಾಗಿ ಕೆಲಸ ಮಾಡಲು ಇನ್ನೂ ಸಾಕಷ್ಟು ಸಮಯ ಬೇಕಿದೆ ಎಂದು ವರದಿಗಳು ತಿಳಿಸಿವೆ.
ಬಾರ್ಡ್ ಇನ್ನೂ ಸುಧಾರಿಸಬೇಕಿದೆ ಎಂಬುದರ ಮಧ್ಯೆ ಅದರ ಹೋಮ್ಪೇಜ್ನಲ್ಲಿ ಹಾಕಲಾಗಿರುವ ಡಿಸ್ಕ್ಲೇಮರ್ ಈಗ ಅಚ್ಚರಿಗೆ ಕಾರಣವಾಗಿದೆ. ಬಾರ್ಡ್ ಕೆಲವೊಂದು ಸಮಯದಲ್ಲಿ ತಪ್ಪು ಫಲಿತಾಂಶಗಳನ್ನು ನೀಡಬಹುದು ಎಂದು ಡಿಸ್ಕ್ಲೇಮರ್ ಹೇಳುತ್ತದೆ. ಈಗ ಗೂಗಲ್ನ ಯುಕೆ ಮುಖ್ಯಸ್ಥರು ಕೂಡ ಈ ಬಗ್ಗೆ ಮಾತನಾಡಿದ್ದು, ಗೂಗಲ್ ಬಾರ್ಡ್ ಯಾವಾಗಲೂ ಸರಿಯಾದ ಉತ್ತರ ನೀಡಲಾರದು ಮತ್ತು ಬಳಕೆದಾರರು ಬಾರ್ಡ್‌ನ ಫಲಿತಾಂಶಗಳನ್ನು ಗೂಗಲ್ ಸರ್ಚ್ ಎಂಜಿನ್ ಫಲಿತಾಂಶಗಳೊಂದಿಗೆ ಕ್ರಾಸ್ ಚೆಕ್ ಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.