ETV Bharat / science-and-technology

5G ಚಿಪ್‌ಸೆಟ್‌ ಗೇಮಿಂಗ್‌ ಫ್ಯಾಂಟಮ್ ಎಕ್ಸ್ 2 ಮೊಬೈಲ್ ಮಾರುಕಟ್ಟೆಗೆ - ಕ್ಯಾಮೆರಾ ಗ್ರಾಫಿಕ್ಸ್‌ನಲ್ಲಿ ಹಲವಾರು ನೂತನ ಆವಿಷ್ಕಾರ

ಜಗತ್ತಿನ ಪ್ರಮುಖ ಮೊಬೈಲ್‌ ತಯಾರಕ ಕಂಪನಿಗಳಲ್ಲೊಂದಾದ ಟೆಕ್ನೊ ಇದೀಗ ಸುಧಾರಿತ ತಂತ್ರಜ್ಞಾನ ಹಾಗೂ ವಿಶಿಷ್ಟ ರೂಪದಲ್ಲಿ ಆಕರ್ಷಣೀಯ ಫ್ಯಾಂಟಮ್ ಎಕ್ಸ್ 2 ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ.

tecno company phantom x2 with 5g chipset
ಟೆಕ್ನೊ ಕಂಪನಿಯ 5G ಚಿಪ್‌ಸೆಟ್‌ ಸಹಿತ ಫ್ಯಾಂಟಮ್ ಎಕ್ಸ್ 2
author img

By

Published : Jan 4, 2023, 9:03 AM IST

ನವದೆಹಲಿ: ಜಗತ್ತಿನಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ TECNO ಕಂಪನಿಯು ಭಾರತದಲ್ಲಿ 4 ಎನ್‌ಎಮ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 5G ಚಿಪ್‌ಸೆಟ್‌ ಸಹಿತ ಫ್ಯಾಂಟಮ್ ಎಕ್ಸ್ 2 (Phantom X2) ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ರಿಲೀಸ್ ಮಾಡಿದೆ. 39,999 ರೂಪಾಯಿ ಬೆಲೆಯ ಸ್ಮಾರ್ಟ್‌ಫೋನ್ ಎರಡು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗಲಿದೆ. ಸ್ಟಾರ್‌ಡಸ್ಟ್ ಗ್ರೇ ಮತ್ತು ಮೂನ್‌ಲೈಟ್ ಸಿಲ್ವರ್ ಬಣ್ಣದಲ್ಲಿದ್ದು ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಟಚ್‌ಪಾಯಿಂಟ್‌ಗಳಲ್ಲಿ ಲಭ್ಯವಿರಲಿದೆ. ಫ್ರೀ ಬುಕಿಂಗ್‌ಗಳು ಜನವರಿ 2ರಿಂದ ಆರಂಭವಾಗಲಿದೆ. ಫೋನ್‌ಗಳ ಮಾರಾಟ ಜನವರಿ 9ರಿಂದ ಶುರುವಾಗಲಿದೆ.

'9000 ಫ್ಯಾಂಟಮ್ ಎಕ್ಸ್ 2 ಅತ್ಯುತ್ತಮ ಮೀಡಿಯಾ ಟೆಕ್ ಡೈಮೆನ್ಸಿಟಿ 9000 5G ಚಿಪ್‌ಸೆಟ್‌ ಹೊಂದಿದೆ. ಇದನ್ನು 4nm ಆಕಾರದಲ್ಲಿ ನಿರ್ಮಿಸಲಾಗಿದೆ. 3.05GHz ನಲ್ಲಿ ಚಲಿಸುತ್ತದೆ. '4 ಎನ್ ಎಮ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಪ್ರೊಸೆಸರ್ ಕ್ಯಾಮೆರಾ ಗ್ರಾಫಿಕ್ಸ್‌ನಲ್ಲಿ ಹಲವಾರು ನೂತನ ಆವಿಷ್ಕಾರಗಳಿವೆ. ಇದರಲ್ಲಿ ಅತ್ಯುತ್ತಮ ಹೊಸ ಮೋಜಿನ ಆಟಗಳು ಮತ್ತು ವಿವಿಧ ಕೌಶಲ ಅಳವಡಿಸಿದ್ದು ಗ್ರಾಹಕರಿಗೆ ಪ್ರಿಯವಾಗಿದೆ' ಎಂದು ಮೊಬೈಲ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಟೆಕ್ನೊ ಕಂಪನಿಯೂ ಸುಧಾರಿತ ತಂತ್ರಜ್ಞಾನ ಹಾಗೂ ವಿಶಿಷ್ಟ ರೂಪ, ಉತ್ತಮವಾಗಿ ಸಂಯೋಜಿಸಿರುವ ಫ್ಯಾಂಟಮ್ ಎಕ್ಸ್ 2 ಭಾರತದಲ್ಲೇ ಮುಂಚೂಣಿಯಲ್ಲಿದೆ. ಟೆಕ್ನೊ ಫ್ಯಾಂಟಮ್ X2 ಛಾಯಾಗ್ರಹಣಕ್ಕಾಗಿ ಪ್ರಗತಿಶೀಲ ಮತ್ತು ಉತ್ತಮ ದರ್ಜೆಯ ಡಬಲ್-ಕರ್ವ್ ಅಮೋಲ್ಡ್​ ಮತ್ತು ಸೆಗ್ಮೆಂಟ್-ಲೀಡಿಂಗ್ 64MP ಒಐಎಸ್​ ಹಿಂಬದಿಯ ಕ್ಯಾಮೆರಾ ಹೊಂದಿದೆ. ಇದಲ್ಲದೆ, ಫೋನ್ 71-ಡಿಗ್ರಿ ದಕ್ಷತೆಯ ಗೋಲ್ಡನ್ ಗ್ರಿಪ್ ಆಂಗಲ್ ವಿನ್ಯಾಸದೊಂದಿಗೆ ಯುನಿ-ಬಾಡಿ ಡಬಲ್ ಕರ್ವ್ಡ್ ವಿನ್ಯಾಸ ನೀಡುತ್ತದೆ. ಇದು ದೀರ್ಘಕಾಲ ಉತ್ತಮ ನಿರ್ವಹಣೆಯೊಂದಿಗೆ ಬರಲಿದೆ.

ಸ್ಮಾರ್ಟ್‌ಫೋನ್​ 8 ಪ್ಲಸ್​ 2 ಬಿಟ್​ ಡಿಸ್‌ಪ್ಲೇಯೊಂದಿಗೆ 6.8-ಇಂಚಿನ ಎಫ್ಎಚ್​​ಡಿ ಪ್ಲಸ್​ ಫ್ಲೆಕ್ಸಿಬಲ್ ಅಮೋಲ್ಡ್​ ಜತೆ ಸಿಗಲಿದೆ. ಇದರಲ್ಲಿ ಆಕರ್ಷಕ ಬಣ್ಣಗಳನ್ನು ಬಳಕೆ ಮಾಡಲಾಗಿದೆ. ವೀಕ್ಷಣೆ ಅನುಭವ ಹೆಚ್ಚಿಸಲಿದೆ. 5160 mAh ಬ್ಯಾಟರಿ ಅಳವಡಿಸಿದ್ದು, 25 ದಿನಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 23 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಸಮಯ, ಉತ್ತಮ ಪವರ್ ಬ್ಯಾಕಪ್ ಒದಗಿಸುತ್ತದೆ. 45 ವ್ಯಾಟ್​ ಚಾರ್ಜರ್‌ನೊಂದಿಗೆ ಫೋನ್ 20 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. 120Hz ರಿಫ್ರೆಶ್ ದರ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ದರವನ್ನೂ ಸಹ ನೀಡುತ್ತದೆ ಎಂದು ಮೊಬೈಲ್ ಇಂಡಿಯಾ ಹೇಳಿದೆ.

ಇದನ್ನೂಓದಿ: ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ 200 ಕೋಟಿ ಲೂಟಿ...ಹೇಳಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.