ನವದೆಹಲಿ: ಹೌದು, ನಿಮ್ಮ ಬಳಿ ಹಳೆ ಆಪಲ್ ಐಫೋನ್, ಐಪ್ಯಾಡ್ ಮತ್ತು ವಾಚ್ ಗ್ಯಾಜೆಟ್ಗಳನ್ನ ಬಳುಸುತ್ತಿದಲ್ಲಿ, ನಿಮಗೆ ಕಂಪನಿಯು ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ದೇಶದಲ್ಲಿ ಹಳೆಯ ಆಪಲ್ ಪೋನ್ ಗಳ ಬಳಕೆ ಹೆಚ್ಚಿದ್ದು, ಹಳೆಯ ಐಫೋನ್ ಗಳು ಬೇಡಿಕೆಯಲ್ಲಿವೆ.
ಕಡಿಮೆ ದರದಲ್ಲಿ ಹಳೆಯ ಆಪಲ್ ಪೋನ್ ಗಳು ದೊರೆಯುತ್ತದೆ ಎಂದು ನೀವು ಐಫೋನ್ ಗ್ಯಾಜೆಟ್ಗಳನ್ನ ಖರೀದಿಸಿದಲ್ಲಿ, ಮುಂದೆ ಆ ಪೋನ್ ಗಳ ಆಪರೇಟಿಂಗ್ ಸಿಸ್ಟಮ್ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಷ್ಟೇ ಏಕೆ, ಇತ್ತೀಚೆಗೆ ಕಂಪನಿ ಪರಿಚಯಿಸಿರುವ ಮೊಬೈಲ್ನಲ್ಲಿ ಹೊಸ ಹೊಸ ಪ್ಯೂಚರ್ಗಳನ್ನ ಅಳವಡಿಕೆ ಮಾಡಲಾಗಿದೆ. ಇನ್ನು ಹೊಸದಾಗಿ ಐಪೋನ್ ಗಾಗಿ ಐಒಎಸ್ 13 ಮತ್ತು ಐಪ್ಯಾಡ್ಒಎಸ್ ಎಂಬ ಹೊಸ ಆಪರೇಟಿಂಗ್ ಸಿಸ್ಟಮ್ ನನ್ನು ಐಪ್ಯಾಡ್ ಗಾಗಿ ಪರಿಚಯಿಸಿದೆ.
ಐಫೋನ್ ಗಳು ಮತ್ತು ಐಪ್ಯಾಡ್ ಗಳ ಹೊಸ ಆಪರೇಟಿಂಗ್ ಸಿಸ್ಟಮ್ ನೂತನ ವೈಶಿಷ್ಟ್ಯಗಳನ್ನು ಹೊಂದಿದೆ. ಹಳೆಯ ಮಾಡೆಲ್ನ ಐಫೋನ್ಸ್ ಅಥವಾ ಐಪ್ಯಾಡ್ ಗಳು ಹೊಸ ಐಒಎಸ್ 13 ಅಪ್ಡೇಟ್ಗಳನ್ನ ಪಡೆಯುವುದಿಲ್ಲ. ಮತ್ತು ಹಳೆಯ ಫೋನ್ಗಳಿಗೆ ಕಂಪನಿ ಸೇವೆಯನ್ನೂ ನೀಡುವುದಿಲ್ಲ. ಇದರಿಂದಾಗಿ ಅಗ್ಗದ ಬೆಲೆಗೆ ಹಳೆಯ ಐಫೋನ್ ಸಿಗುತ್ತದೆ ಎಂದು ಖರೀದಿ ಮಾಡಿದರೆ ಲಾಸ್ ಆಗುವುದು ಗ್ಯಾರಂಟಿ.
ಸದ್ಯ ಆಪಲ್ ಸಂಸ್ಥೆ ಹೇಳಿರುವ ಪ್ರಕಾರ, ಹೊಸ ಆಪರೇಟಿಂಗ್ ಸಿಸ್ಟಮ್ ಐಒಎಸ್ 13, ಐಫೋನ್ 6s ನಲ್ಲಿ ಲಭ್ಯ ಇರುತ್ತದೆ. ನಂತರ ‘ಐಪ್ಯಾಡ್ ಏರ್’ ಗಾಗಿ, ಐಪ್ಯಾಡ್ ಒಎಸ್ ನನ್ನು ಬಿಡುಗಡೆಗೊಳಿಸಲಾಗುವುದು. ಆ ಬಳಿಕವೇ ಎಲ್ಲ ಐಪ್ಯಾಡ್ ಪ್ರೊ ಮಾದರಿಗಳು, ಐಪ್ಯಾಡ್ 5 ನೇ ಪೀಳಿಗೆಯ ಮತ್ತು ನಂತರದ ಐಪ್ಯಾಡ್ ಮಿನಿ 4 ಬಿಡುಗಡೆಯಾಗಲಿದೆ ಎಂದು ಆಪಲ್ ಪ್ರಕಟಿಸಿದೆ. ವಾಚ್ ಒಎಸ್ 6 ಅಪ್ಡೇಟ್ ಗೆ ಸಂಬಂಧಿಸಿದಂತೆ, ಸದ್ಯ ಆಪಲ್ ವಾಚ್ ಸಿರೀಸ್ 1 ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.