ETV Bharat / science-and-technology

ನೋಕಿಯಾದಿಂದ 2 ಹೊಸ ಸ್ಮಾರ್ಟ್‌ಫೋನ್​ಗಳು, ಇಯರ್​ಬಡ್​ ಬಿಡುಗಡೆ - ನೋಕಿಯಾ 5.4 ಮತ್ತು ನೋಕಿಯಾ 3.4

ನೋಕಿಯಾ 5.4 ಸ್ಮಾರ್ಟ್‌ಫೋನ್ ಫೆಬ್ರವರಿ 17 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ನೋಕಿಯಾ 3.4 ಫೆಬ್ರವರಿ 20 ರಿಂದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್​ನಲ್ಲಿ ಲಭ್ಯವಿರುತ್ತದೆ. ನೋಕಿಯಾ ಪವರ್ ಇಯರ್‌ಬಡ್ ಲೈಟ್ ಪ್ರಿಮಿಯಮ್ ನರ‍್ಯಾಡಿಕ್ ವಿನ್ಯಾಸವನ್ನು ಹೊಂದಿದೆ.

ನೋಕಿಯಾ 5.4 ಮತ್ತು ನೋಕಿಯಾ 3.4
ನೋಕಿಯಾ 5.4 ಮತ್ತು ನೋಕಿಯಾ 3.4
author img

By

Published : Feb 11, 2021, 5:35 PM IST

Updated : Feb 16, 2021, 7:53 PM IST

ನವದೆಹಲಿ: ಎಚ್‌ಎಂಡಿ ಗ್ಲೋಬಲ್‌ ಹ್ಯಾಂಡ್‌ಸೆಟ್ ತಯಾರಕ ನೋಕಿಯಾ ಎರಡು ಹೊಸ ಸ್ಮಾರ್ಟ್‌ಫೋನ್‌ಗಳಾದ ನೋಕಿಯಾ 5.4 ಮತ್ತು ನೋಕಿಯಾ 3.4ನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ನೋಕಿಯಾ 5.4 ಸ್ಮಾರ್ಟ್‌ಫೋನ್ ಫೆಬ್ರವರಿ 17 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರ 4 ಜಿಬಿ + 64 ಜಿಬಿ ರೂಪಾಂತರಕ್ಕೆ 13,999 ರೂ. ಮತ್ತು 6 ಜಿಬಿ + 64 ಜಿಬಿ ರೂಪಾಂತರಕ್ಕೆ 15,499 ರೂ. ದರ ನಿಗದಿ ಪಡಿಸಿ ಕಂಪನಿಯು ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ನೋಕಿಯಾ 3.4 ಫೆಬ್ರವರಿ 20 ರಿಂದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್​ನಲ್ಲಿ ಲಭ್ಯವಿರುತ್ತದೆ. ಇದು 4 ಜಿಬಿ + 64 ಜಿಬಿ ಎಂಬ ಒಂದು ರೂಪಾಂತರದಲ್ಲಿ ಮಾತ್ರ ಬರುತ್ತದೆ. ಇದರ ಬೆಲೆ 11,999 ರೂ. ನೋಕಿಯಾ ಕೂಡ ಟ್ವಿಟರ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ನೋಕಿಯಾ 5.4 ಕ್ವಾಡ್ ಕ್ಯಾಮೆರಾ ಸೆಟಪ್ನೊಂದಿಗೆ 6.39 ಇಂಚಿನ ಎಚ್ಡಿ ಪ್ಲಸ್ ಪಂಚ್ - ಹೋಲ್ ಡಿಸ್ಪ್ಲೇ ಹೊಂದಿದೆ. ಇದು 48 ಎಂಪಿ ಮುಖ್ಯ ಕ್ಯಾಮೆರಾ ಮತ್ತು 16 ಎಂಪಿ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್ ಹೊಂದಿದೆ.

ಓದಿ: 'ಕೂ' ಮೂಲಕ ಟ್ವಿಟರ್​ಗೆ ಸೆಡ್ಡು ಹೊಡೆದ ಕೇಂದ್ರ ಸರ್ಕಾರ

ನೋಕಿಯಾ 3.4 ಫೋನ್‌ನಲ್ಲಿ ಹೊಚ್ಚಹೊಸ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 460 ಪ್ರೊಸೆಸರ್‌, 6.39 ಇಂಚುಗಳ ಎಚ್‌ಡಿ+ಪಂಚ್‌ಹೋಲ್‌ ಡಿಸ್‌ಪ್ಲೇ ನೀಡಲಾಗಿದೆ. 64ಜಿಬಿ ಸಂಗ್ರಹ ಸಾಮರ್ಥ್ಯ, 4ಜಿಬಿ ರ್‍ಯಾಮ್‌ ಅಳವಡಿಸಲಾಗಿದ್ದು,13ಎಂಪಿ ಕ್ಯಾಮೆರಾ (13ಎಂಪಿ+2ಎಂಪಿ+5ಎಂಪಿ) ಮತ್ತು ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಇದೆ. ಗೂಗಲ್ ಪಾಡ್‌ಕಾಸ್ಟ್ ಸಮನ್ವಿತವಾಗಿರುವ ನೋಕಿಯಾ 3.4 ಮೂಲಕ ನೀವು ಯಾವುದೇ ವೇಳೆಯಲ್ಲಿ, ಎಲ್ಲಿ ಬೇಕಾದರೂ ಆಲಿಸಲು ಅವಕಾಶ ಮಾಡಿಕೊಡುತ್ತದೆ.

ನೋಕಿಯಾ ಪವರ್ ಇಯರ್‌ಬಡ್ ಲೈಟ್ ಪ್ರಿಮಿಯಮ್ ನರ‍್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು. ಜೇಬಿನಲ್ಲಿ ಇಡಬಹುದಾದಷ್ಟು ಗಾತ್ರದ ಚಾರ್ಜಿಂಗ್ ಕೇಸ್‌ಗಳನ್ನು ಹೊಂದಿರುತ್ತದೆ. ಇದು ಸಾರ್ವತ್ರಿಕ ಬ್ಲೂಟೂತ್ ಹೊಂದಾಣಿಕೆಗೆ ಅವಕಾಶ ಮಾಡಿಕೊಡುತ್ತದೆ. 35 ಗಂಟೆಗಳ ನಿರಂತರ ಪ್ಲೇಟೈಮ್ ಹೊಂದಿದ್ದು, ಚಿಂತೆ ಇಲ್ಲದೇ ಒಳಾಂಗಣ ಅಥವಾ ಹೊರಾಂಗಣದಲ್ಲೂ, ಮಳೆಯಲ್ಲಿಯೂ ಸಂಗೀತವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಲಿದೆ.

ನೋಕಿಯಾ ಪವರ್ ಇಯರ್‌ಬಡ್ಸ್ ಲೈಟ್ ಫೆಬ್ರವರಿ 17 ರಿಂದ ಅಮೆಜಾನ್‌ನಲ್ಲಿ ಲಭ್ಯವಿರುತ್ತದೆ. ಇದರ ಬೆಲೆ 3,599 ರೂ. ಆಗಿರುತ್ತದೆ.

Last Updated : Feb 16, 2021, 7:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.