ಹೊಸದಿಲ್ಲಿ: ಫ್ರೆಂಚ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಥಾಮ್ಸನ್ ಭಾರತದಲ್ಲಿ ಹೊಸ QLED ಟಿವಿ ಸರಣಿಯನ್ನು ಗೂಗಲ್ ಟಿವಿಯೊಂದಿಗೆ ಬಿಡುಗಡೆ ಮಾಡಿದೆ. ಹಬ್ಬದ ಋತುವಿನಲ್ಲಿ ಇವುಗಳ ಬೆಲೆ ರೂ. 33,999 ರಿಂದ ಪ್ರಾರಂಭವಾಗುತ್ತವೆ. ಥಾಮ್ಸನ್ 50-ಇಂಚಿನ QLED TVಯ ಬೆಲೆ ರೂ. 33,999 ರಿಂದ ಆರಂಭವಾಗುತ್ತವೆ. 55 ಇಂಚಿನ ಟಿವಿ ಬೆಲೆ ರೂ. 40,999 ರಿಂದ ಮತ್ತು 65 ಇಂಚಿನ ಟಿವಿ ಬೆಲೆ ರೂ 59,999 ರಿಂದ ಪ್ರಾರಂಭವಾಗುತ್ತವೆ. 4K ಬೆಲೆಯಲ್ಲಿ ಸಿಗುತ್ತಿರುವ ಅತ್ಯಾಧುನಿಕ QLED ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ವಾರ್ಷಿಕ ದಿ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ.
ಈ ಟಿವಿಗಳು ಉನ್ನತ ದರ್ಜೆಯ ವೈಶಿಷ್ಟ್ಯ ಮತ್ತು ಹಾರ್ಡ್ವೇರ್ಗಳನ್ನು ಹೊಂದಿದ್ದು, ಭಾರತೀಯ ಗ್ರಾಹಕರು ಅತ್ಯುತ್ತಮವಾದ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಪಡೆಯಲಿದ್ದಾರೆ ಎಂದು ವಿಶೇಷ ಬ್ರ್ಯಾಂಡ್ ಎಸ್‌ಪಿಪಿಎಲ್ ಸಿಇಒ ಅವ್ನೀತ್ ಸಿಂಗ್ ಮರ್ವಾಹ್ ಹೇಳಿದರು. ಎಸ್‌ಪಿಪಿಎಲ್ ಇದು ಭಾರತದಲ್ಲಿ ಥಾಮ್ಸನ್ ಬ್ರ್ಯಾಂಡ್ನ ಅಧಿಕೃತ ಲೈಸೆನ್ಸ್ ಕಂಪನಿಯಾಗಿದೆ.
ಈ QLED TV ಟಿವಿಗಳು ಎಲ್ಲ ವಯೋಮಾನದವರ ಮನರಂಜನೆಗಾಗಿ ಸೂಕ್ತವಾಗಿವೆ. ವಯಸ್ಕರು ಮತ್ತು ಮಕ್ಕಳ ಪ್ರತ್ಯೇಕ ಪ್ರೊಫೈಲ್‌ಗಳ ರಚನೆಗೆ ಬೆಂಬಲ ನೀಡುತ್ತವೆ.
ಸ್ಮಾರ್ಟ್ ಟಿವಿ ಆ್ಯಪ್ಗಳು, ಸ್ಮಾರ್ಟ್ ಹೋಮ್ ಡಿವೈಸ್ಗಳಿಗಾಗಿ ಮ್ಯಾನುವಲ್ ಮತ್ತು ವಾಯಿಸ್ ಕಂಟ್ರೋಲ್, ಪ್ರತಿಯೊಬ್ಬ ಬಳಕೆದಾರನಿಗೆ ಪರ್ಸನಲೈಸ್ಡ್ ಹೋಮ್ ಸ್ಕ್ರೀನ್, ಟಿವಿ ನಿಯಂತ್ರಿಸಲು ಗೂಗಲ್ ಟಿವಿ ಆ್ಯಪ್ ಮತ್ತು ಲೈಟ್ ಮತ್ತು ಕ್ಯಾಮೆರಾಗಳಿಗಾಗಿ ಸ್ಮಾರ್ಟ್ ಹೋಮ್ ಕಂಟ್ರೋಲ್ಗಳನ್ನು ಈ ಟಿವಿಗಳು ಒಳಗೊಂಡಿವೆ. ಇವು ಫ್ರೇಮ್ಲೆಸ್ ಆಗಿದ್ದು, ಇದರಲ್ಲಿ HDR 10+ ಡಾಲ್ಬಿ ವಿಜನ್, ಡಾಲ್ಬಿ ಅಟ್ಮಾಸ್, ಡಾಲ್ಬಿ ಡಿಜಿಟಲ್ ಪ್ಲಸ್, ಡಿಟಿಎಸ್ ಟ್ರುಸರೌಂಡ್, ಬೆಜೆಲ್ ಲೆಸ್ ಡಿಸೈನ್, 40 ವ್ಯಾಟ್ ಡಾಲ್ಬಿ ಆಡಿಯೊ ಸ್ಟೀರಿಯೊ ಬಾಕ್ಸ್ ಸ್ಪೀಕರ್, 2GB RAM, 16GB ROM, ಡ್ಯೂಯೆಲ್ ಬ್ಯಾಂಡ್ (2.4+5) ಗಿಗಾಹರ್ಟ್ಜ್ ವೈಫೈ, ಗೂಗಲ್ ಟಿವಿ ಸೇರಿದಂತೆ ಇನ್ನೂ ಹಲವಾರು ಸೌಲಭ್ಯಗಳಿವೆ.
ಈ ಟಿವಿಗಳು ಸಂಪೂರ್ಣ ಬೆಜೆಲ್ ಲೆಸ್ ಮತ್ತು ಏರ್ ಸ್ಲಿಮ್ ಡಿಸೈನ್ ಹೊಂದಿವೆ. ಗೂಗಲ್ ಟಿವಿಯೊಂದಿಗೆ ಥಾಮ್ಸನ್ QLED ಸರಣಿಯ ಟಿವಿಗಳನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಈ ಟಿವಿಗಳು ಗ್ರಾಹಕರಿಗೆ ವಿಶಿಷ್ಟವಾದ ಮನರಂಜನೆ ನೀಡಲಿವೆ ಎಂದು ಫ್ಲಿಪ್ಕಾರ್ಟ್ನ ಲಾರ್ಜ್ ಅಪ್ಲಯನ್ಸಸ್ ವಿಭಾಗದ ವೈಸ್ ಪ್ರೆಸಿಡೆಂಟ್ ಹರಿ ಜಿ. ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ:ಇನ್ಸ್ಟಾಗ್ರಾಮ್ನಲ್ಲೂ ರಿಪೋಸ್ಟ್ ಫೀಚರ್: ಆಯ್ದ ಬಳಕೆದಾರರೊಂದಿಗೆ ಪ್ರಯೋಗಕ್ಕಿಳಿದ ಮೆಟಾ