ETV Bharat / science-and-technology

ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಡಿಸೆಂಬರ್​ನಲ್ಲಿ ಅಸಾಧ್ಯ : ಇಸ್ರೋ - ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾಹಿತಿ

ಮಾನವರಹಿತ ಮಿಷನ್ ಗಗನ್ ಯಾನ್ ಅನ್ನು ಡಿಸೆಂಬರ್ 2021ಕ್ಕೆ ಯೋಜಿಸಲಾಗಿದೆ. ಎರಡನೇ ಮಾನವರಹಿತ ಬಾಹ್ಯಾಕಾಶ ಯೋಜನೆ 2022-23ಕ್ಕೆ ಚಾಲನೆ ಪಡೆದುಕೊಳ್ಳಲಿದೆ ಎಂದು ಬಾಹ್ಯಾಕಾಶ ರಾಜ್ಯ ಖಾತೆ ಕೇಂದ್ರ ಸಚಿವ (ಸ್ವತಂತ್ರ ನಿರ್ವಹಣೆ) ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ಮಾಹಿತಿ ನೀಡಿದ್ದರು..

ISRO
ISRO
author img

By

Published : Jul 26, 2021, 2:52 PM IST

ಬೆಂಗಳೂರು : ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆ ಮಾನವ ರಹಿತ ಮಿಷನ್ ಗಗನ್ ಯಾನ್ ಡಿಸೆಂಬರ್​ನಲ್ಲಿ ಈಡೇರುವುದು ಅಸಾಧ್ಯ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಡಿಸೆಂಬರ್​ನಲ್ಲಿ ಮಾನವ ರಹಿತ ಮಿಷನ್ ಗಗನ್ ಯಾನ್ ಯೋಜನೆ ಖಂಡಿತವಾಗಿಯೂ ಸಾಧ್ಯವಿಲ್ಲ. ಇದು ಇನ್ನೂ ವಿಳಂಬವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಮಾಹಿತಿ ನೀಡಿದ್ದಾರೆ.

ಈ ಯೋಜನೆ ಮುಂದಿನ ವರ್ಷಕ್ಕೆ ಮುಂದೂಡಲ್ಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಹಾರ್ಡ್‌ವೇರ್ ಉದ್ಯಮದ ಮೇಲೆ ಲಾಕ್​ಡೌನ್ ಪರಿಣಾಮ ಬೀರಿದ್ದು, ಇಸ್ರೋ ಸಂಸ್ಥೆಗೆ ಅಗತ್ಯವಿದ್ದ ಉಪಕರಣಗಳ ಪೂರೈಕೆ ವಿಳಂಬವಾಗಿರುವುದು ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ.

ವಿನ್ಯಾಸ, ವಿಶ್ಲೇಷಣೆ ಹಾಗೂ ಡಾಕ್ಯುಮೆಂಟೇಷನ್ ಕಾರ್ಯವನ್ನು ಇಸ್ರೋ ಮಾಡುತ್ತಿದೆ. ಆದರೆ, ಹಾರ್ಡ್​ವೇರನ್ನು ದೇಶಾದ್ಯಂತ ಇರುವ ಕೈಗಾರಿಕೆಗಳು ಪೂರೈಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಮಾನವರಹಿತ ಮಿಷನ್ ಗಗನ್ ಯಾನ್ ಅನ್ನು ಡಿಸೆಂಬರ್ 2021ಕ್ಕೆ ಯೋಜಿಸಲಾಗಿದೆ. ಎರಡನೇ ಮಾನವರಹಿತ ಬಾಹ್ಯಾಕಾಶ ಯೋಜನೆ 2022-23ಕ್ಕೆ ಚಾಲನೆ ಪಡೆದುಕೊಳ್ಳಲಿದೆ ಎಂದು ಬಾಹ್ಯಾಕಾಶ ರಾಜ್ಯ ಖಾತೆ ಕೇಂದ್ರ ಸಚಿವ (ಸ್ವತಂತ್ರ ನಿರ್ವಹಣೆ) ಜಿತೇಂದ್ರ ಸಿಂಗ್ ಫೆಬ್ರವರಿಯಲ್ಲಿ ಮಾಹಿತಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.