ಲಿಮಾ, ಪೆರು: ಪೆರುವಿನ ಅತ್ಯಂತ ಪ್ರಸಿದ್ಧ ಮಮ್ಮಿಯ ಸಂಭವನೀಯ ಜೀವಂತ ಮುಖವನ್ನು ಪುನರ್ ರಚನೆ ಮಾಡಲಾಗಿದೆ. ಆಂಡಿಸ್ನ ಹಿಮ ಪರ್ವತದಲ್ಲಿ 500 ವರ್ಷಗಳ ಹಿಂದೆ ಹೂತು ಹೋಗಿದ್ದ ಇಂಕಾ ಎಂಬ ಹುಡುಗಿ ಮುಖವನ್ನ ಈಗ ಪುನರ್ ರಚಿಸಲಾಗಿದೆ. ಮಂಗಳವಾರ ಈ ಪುನರ್ ರಚಿತ ಮಮ್ಮಿಯನ್ನು ಅನಾವರಣಗೊಳಿಸಲಾಗಿದೆ.
-
⭕500 years old alive, Mummy⭕
— Science Updates (@Sciencewebsites) October 22, 2023 " class="align-text-top noRightClick twitterSection" data="
This 15-year-old girl lived in the Inca Empire and was sacrificed 500 years ago as an offering to the gods.
She is preserved this well because she was frozen during sleep and kept in a dry cold condition at more than 6000 meters above sea level . pic.twitter.com/QLz9oke2kn
">⭕500 years old alive, Mummy⭕
— Science Updates (@Sciencewebsites) October 22, 2023
This 15-year-old girl lived in the Inca Empire and was sacrificed 500 years ago as an offering to the gods.
She is preserved this well because she was frozen during sleep and kept in a dry cold condition at more than 6000 meters above sea level . pic.twitter.com/QLz9oke2kn⭕500 years old alive, Mummy⭕
— Science Updates (@Sciencewebsites) October 22, 2023
This 15-year-old girl lived in the Inca Empire and was sacrificed 500 years ago as an offering to the gods.
She is preserved this well because she was frozen during sleep and kept in a dry cold condition at more than 6000 meters above sea level . pic.twitter.com/QLz9oke2kn
ಸಿಲಿಕೋನ್ -ನಿರ್ಮಿತ ಕೆನ್ನೆಯ ಮೂಳೆಗಳು, ಕಪ್ಪು ಕಣ್ಣುಗಳು ಮತ್ತು ಕಂದುಬಣ್ಣದ ಚರ್ಮವನ್ನು ಹೊಂದಿರುವ ಯುವತಿಯನ್ನು ಪುನರ್ ಸ್ಥಾಪಿಸಲಾಗಿದೆ. ಮುಖದ ಪುನರ್ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಸ್ವೀಡಿಷ್ ಶಿಲ್ಪಿಯೊಂದಿಗೆ ಕೆಲಸ ಮಾಡಿದ ಪೋಲಿಷ್ ಮತ್ತು ಪೆರುವಿಯನ್ ವಿಜ್ಞಾನಿಗಳ ತಂಡದಿಂದ ಈ ಮಮ್ಮಿಯ ನಿಜ ರೂಪ ತಯಾರಿಸಲ್ಪಟ್ಟಿದೆ. ಇದನ್ನು ಅರೆಕ್ವಿಪಾದಲ್ಲಿರುವ ಸಾಂಟಾ ಮಾರಿಯಾದ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಆಂಡಿಯನ್ ವಸ್ತುಸಂಗ್ರಹಾಲಯದಲ್ಲಿ ನಡೆದ ಸಮಾರಂಭದಲ್ಲಿ ಪ್ರಸ್ತುತಪಡಿಸಲಾಗಿದೆ.
"ಜುವಾನಿಟಾ" ಮತ್ತು "ಇಂಕಾ ಐಸ್ ಮೇಡನ್" ಎಂದು ಕರೆಯಲ್ಪಡುವ ಮಮ್ಮಿಯನ್ನು ಕಂಡುಹಿಡಿದ ಅಮೆರಿಕದ ಮಾನವಶಾಸ್ತ್ರಜ್ಞ ಜೋಹಾನ್ ರೆನ್ಹಾರ್ಡ್ ಮಾತನಾಡಿ, "ಅವಳು ಜೀವಂತವಾಗಿದ್ದಾಗ ಅವಳ ಮುಖ ಹೇಗಿತ್ತು ಎಂದು ನನಗೆ ತಿಳಿದಿಲ್ಲ. ಆದರೆ, ಹೀಗಿರಬಹುದು ಎಂದು ಪುನರ್ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದ್ದಾರೆ. ರೀನ್‌ಹಾರ್ಡ್ 1995 ರಲ್ಲಿ ಹಿಮದಿಂದ ಆವೃತವಾದ ಅಂಪಾಟೊ ಹಿಮ ಜ್ವಾಲಾಮುಖಿ ಪರ್ವತದ ಸುಮಾರು 6,000 ಮೀಟರ್ (19,685 ಅಡಿ) ಎತ್ತರದಲ್ಲಿ ಈ ಮಮ್ಮಿಯನ್ನು ಪತ್ತೆ ಹಚ್ಚಲಾಗಿತ್ತು.
"ಈಗ 28 ವರ್ಷಗಳ ನಂತರ, ಆಸ್ಕರ್ ನಿಲ್ಸನ್ ಅವರು ಈ ಮಮ್ಮಿಯನ್ನು ಪುನರ್ನಿರ್ಮಾಣ ಮಾಡಿರುವುದಕ್ಕೆ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ. ಪ್ರಾಚೀನ ಮಾನವರ 3D ಮುಖದ ಪುನರ್ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಸ್ವೀಡಿಷ್ ಪುರಾತತ್ವಶಾಸ್ತ್ರಜ್ಞ ಮತ್ತು ಶಿಲ್ಪಿ ನಿಲ್ಸನ್, ಈ ಹುಡುಗಿಯ ಮುಖವನ್ನು ರೂಪಿಸಲು ಸುಮಾರು 400ಕ್ಕೂ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್‌ಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ವಾರ್ಸಾ ವಿಶ್ವವಿದ್ಯಾಲಯದ ಆಂಡಿಯನ್ ಅಧ್ಯಯನ ಕೇಂದ್ರದ ಪೋಲಿಷ್ ಜೈವಿಕ ಪುರಾತತ್ವಶಾಸ್ತ್ರಜ್ಞ ಡಾಗ್ಮಾರಾ ಸೋಚಾ ಸಮಾರಂಭದಲ್ಲಿ ಮಾತನಾಡಿ, ಜುವಾನಿಟಾ ಅವರ ಮುಖವನ್ನು ಪುನರ್ ರಚಿಸಲು ಮೊದಲ ಹೆಜ್ಜೆ ಎಂದರೆ ತಲೆಬುರುಡೆಯ ಪ್ರತಿಕೃತಿಯನ್ನು ಪಡೆಯುವುದಾಗಿದೆ ಎಂದು ಹೇಳಿದ್ದಾರೆ. ನಂತರ "ದೇಹದ ಮೂಳೆಗಳು, ಡಿಎನ್‌ಎ ಅಧ್ಯಯನಗಳು, ಜನಾಂಗೀಯ ಗುಣಲಕ್ಷಣಗಳು, ವಯಸ್ಸು, ಮೈಬಣ್ಣದ ಅಧ್ಯಯನ ನಡೆಸಿ, ಬಳಿಕ ಮುಖದ ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಾಯಿತು ಎಂದಿದ್ದಾರೆ.
ಮಾನವಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ಜುವಾನಿಟಾ 13 ಮತ್ತು 15 ವರ್ಷ ವಯಸ್ಸಿನವರಾಗಿದ್ದಾಗ ಅಂದರೆ ಸುಮಾರು ಕ್ರಿ ಶ 1440 ಮತ್ತು 1450 ರ ನಡುವೆ ಅವರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಜುವಾನಿಟಾ 1.40 ಮೀಟರ್ (55 ಇಂಚು) ಎತ್ತರ, 35 ಕಿಲೋ (77 ಪೌಂಡ್) ತೂಕ ಹೊಂದಿದ್ದಳು. ಉತ್ತಮ ಹಾಗೂ ಆಕರ್ಷಕ ಮೈಕಟ್ಟು ಹೊಂದಿದ್ದಳು ಎಂದು ಕಂಡುಕೊಳ್ಳಲಾಗಿದೆ. CT ಸ್ಕ್ಯಾನ್ ನಡೆಸಿದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಅವರ ಬಲ ಆಕ್ಸಿಪಿಟಲ್ ಲೋಬ್ಗೆ ತೀವ್ರವಾದ ಹೊಡೆತ ಬಿದ್ದಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಗೊತ್ತಾಗಿದೆ.
ಸಂಶೋಧನೆಗಳಿಂದ ಆಕೆಯ ಜೀವನ ಮತ್ತು ಇಂಕಾ ಸಂಸ್ಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿದೆ ಎಂದು ರೆನ್ಹಾರ್ಡ್ ಹೇಳಿದ್ದಾರೆ. ನಾವು ಈಗ ಪುನರ್ ನಿರ್ಮಾಣ ಮಾಡಿರುವ ಮಮ್ಮಿ ಮೂಲಕ ಅವಳು ನಿಜವಾಗಿಯೂ ಹೇಗಿದ್ದಾಳೆಂದು ನೋಡಬಹುದಾಗಿದೆ, ಈ ಪುನರ್ ನಿರ್ಮಾಣ ಅವಳನ್ನು ಇನ್ನಷ್ಟು ಜೀವಂತಗೊಳಿಸಿದೆ ಎಂದೂ ರೆನ್ಹಾರ್ಡ್ ತಿಳಿಸಿದ್ದಾರೆ.
ಇದನ್ನು ಓದಿ: ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಜೆಲ್ ಆವಿಷ್ಕಾರ