ETV Bharat / science-and-technology

Elon Musk: ಸಂತಾನಾಭಿವೃದ್ಧಿ ಸಂಶೋಧನೆಗೆ $10 ಮಿಲಿಯನ್ ನೀಡಿದ 10 ಮಕ್ಕಳ ತಂದೆ ಮಸ್ಕ್! - ಐವಿಎಫ್ ಮೂಲಕ ಮಸ್ಕ್​ ಮತ್ತು ವಿಲ್ಸನ್ ದಂಪತಿಗೆ

Fertility Research: 10 ಮಕ್ಕಳ ತಂದೆಯಾಗಿರುವ ಎಲೋನ್ ಮಸ್ಕ್ ಸಂತಾನ ಫಲವತ್ತತೆ ಮತ್ತು ಜನಸಂಖ್ಯಾ ಸಂಶೋಧನಾ ಯೋಜನೆಗೆ 10 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.

Musk, father of 10 kids, donates $10 mn
Musk, father of 10 kids, donates $10 mn
author img

By

Published : Aug 17, 2023, 5:06 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅಮೆರಿಕದ ಟೆಕ್ಸಾಸ್​​ನಲ್ಲಿರುವ ಸಂತಾನ ಫಲವತ್ತತೆ ಮತ್ತು ಜನಸಂಖ್ಯಾ ಸಂಶೋಧನಾ ಯೋಜನೆಗೆ 10 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ. ಪಾಪ್ ತಾರೆ ಗ್ರಿಮ್ಸ್ ಮತ್ತು ತಮ್ಮದೇ ಬ್ರೈನ್ ಇಂಪ್ಲಾಂಟ್ ಸಂಸ್ಥೆ ನ್ಯೂರಾಲಿಂಕ್​ನ ಉನ್ನತ ಕಾರ್ಯನಿರ್ವಾಹಕಿ ಸೇರಿದಂತೆ ಮೂವರು ಮಹಿಳೆಯರಿಂದ ಮಸ್ಕ್ ಕನಿಷ್ಠ 10 ಮಕ್ಕಳ ತಂದೆಯಾಗಿರುವುದು ಗಮನಾರ್ಹ.

52 ವರ್ಷದ ಟೆಕ್ ಬಿಲಿಯನೇರ್ ಈ ಹಣವನ್ನು ಆಸ್ಟಿನ್​ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿರುವ ಪಾಪ್ಯುಲೇಷನ್ ವೆಲ್​ ಬೀಯಿಂಗ್ ಇನಿಶಿಯೇಟಿವ್ (ಪಿಡಬ್ಲ್ಯೂಐ) ಗೆ ತಮ್ಮ ದತ್ತಿ ಸಂಸ್ಥೆಯಾದ ಮಸ್ಕ್ ಫೌಂಡೇಶನ್ ಮೂಲಕ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಎರಡು ದಿನಗಳ ಪಿಡಬ್ಲ್ಯೂಐ ಸಮ್ಮೇಳನಕ್ಕೆ ಕೂಡ ಮಸ್ಕ್ ಧನಸಹಾಯ ನೀಡಿದ್ದರು.

ಆಸ್ಟಿನ್‌ನ ಜನಸಂಖ್ಯಾ ಸಂಶೋಧನಾ ಕೇಂದ್ರದಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ ಮತ್ತು ಅದರ ಅರ್ಥಶಾಸ್ತ್ರ ವಿಭಾಗದ ಮಧ್ಯದ ಜಂಟಿ ಕಾರ್ಯಕ್ರಮವಾದ ಪಿಡಬ್ಲ್ಯುಐ ಇದು ಅರ್ಥಶಾಸ್ತ್ರ, ಜನಸಂಖ್ಯಾಶಾಸ್ತ್ರ ಮತ್ತು ಸಾಮಾಜಿಕ ಕಲ್ಯಾಣ ಮೌಲ್ಯಮಾಪನದಲ್ಲಿ ಕೆಲಸ ಮಾಡುವ ಸಂಶೋಧಕರ ಜಾಲವಾಗಿದೆ.

ಸಂಪತ್ತಿಗೂ ಬುದ್ಧಿಮತ್ತೆಗೂ ನೇರವಾದ ಸಂಬಂಧವಿದೆ ಎಂಬುದು ಮಸ್ಕ್​ ಅವರ ದೃಢ ನಂಬಿಕೆಯಾಗಿದೆ. ಹೀಗಾಗಿ ತಮಗೆ ತಿಳಿದಿರುವ ಎಲ್ಲಾ ಶ್ರೀಮಂತರು ಸಾಧ್ಯವಾದಷ್ಟು ಮಕ್ಕಳನ್ನು ಹೊಂದಬೇಕೆಂದು ಅವರು ಒತ್ತಾಯಿಸುತ್ತಾರೆ. "ಜನಸಂಖ್ಯೆ ಕುಸಿತದ ಬಿಕ್ಕಟ್ಟಿಗೆ ಸಹಾಯ ಮಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ" ಎಂದು ಮಸ್ಕ್ ಒಮ್ಮೆ ಟ್ವೀಟ್ ಮಾಡಿದ್ದರು. "ಕುಸಿಯುತ್ತಿರುವ ಜನನ ಪ್ರಮಾಣವು ನಾಗರಿಕತೆ ಎದುರಿಸುತ್ತಿರುವ ಅತಿದೊಡ್ಡ ಅಪಾಯವಾಗಿದೆ." ಎಂದು ಮಸ್ಕ್ ಹೇಳುತ್ತಾರೆ.

ಜನವರಿ 2000 ರಲ್ಲಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಅವರನ್ನು ಮದುವೆಯಾದ ನಂತರ ದಂಪತಿಗೆ 2002 ರಲ್ಲಿ ನೆವಾಡಾ ಅಲೆಕ್ಸಾಂಡರ್ ಮಸ್ಕ್ ಎಂಬ ಮಗ ಜನಿಸಿದ್ದ. ಆದರೆ ನೆವಾಡಾ ಕೇವಲ 10 ವಾರಗಳಲ್ಲಿ ಹಠಾತ್ ಶಿಶು ಮರಣ ಸಿಂಡ್ರೋಮ್ ಅಥವಾ ಎಸ್ಐಡಿಎಸ್​​ ನಿಂದ ನಿಧನನಾಗಿದ್ದ. ಮಸ್ಕ್ ಮತ್ತು ವಿಲ್ಸನ್ ನಂತರ ಐವಿಎಫ್ ಮೂಲಕ ಸಂತಾನ ಪಡೆದರು. ಐವಿಎಫ್ ಮೂಲಕ ಏಪ್ರಿಲ್ 2004 ರಲ್ಲಿ ಜನಿಸಿದ ಗ್ರಿಫಿನ್ ಮತ್ತು ವಿವಿಯನ್ ಎಂಬ ಅವಳಿ ಈಗ 18 ವರ್ಷ.

ಜನವರಿ 2006 ರಲ್ಲಿ ಐವಿಎಫ್ ಮೂಲಕ ಮಸ್ಕ್​ ಮತ್ತು ವಿಲ್ಸನ್ ದಂಪತಿಗೆ ತ್ರಿವಳಿ ಗಂಡು ಮಕ್ಕಳು ಜನಿಸಿದವು. ಕೈ, ಸ್ಯಾಕ್ಸನ್ ಮತ್ತು ಡಾಮಿಯನ್ ಇವರೇ ಆ ಮೂರು ಮಕ್ಕಳಾಗಿದ್ದಾರೆ. ಈ ಮೂವರಿಗೆ ಈಗ 16 ವರ್ಷ. ಆದರೆ ಮಸ್ಕ್ ಮತ್ತು ವಿಲ್ಸನ್ 2008 ರಲ್ಲಿ ವಿಚ್ಛೇದನ ಪಡೆದರು. ವೆಸ್ಟ್ ವರ್ಲ್ಡ್ ತಾರೆ ತಲುಲಾ ರಿಲೆ ಅವರೊಂದಿಗಿನ ಎರಡು ಮದುವೆಗಳು ಮತ್ತು ನಟಿ ಅಂಬರ್ ಹರ್ಡ್ ಅವರೊಂದಿಗಿನ ಸಂಕ್ಷಿಪ್ತ ಸಂಬಂಧದ ನಂತರ, ಮಸ್ಕ್ ಮೇ 2018 ರಲ್ಲಿ ಗಾಯಕಿ ಗ್ರಿಮ್ಸ್ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಗಾಯಕಿ ಗ್ರಿಮ್ಸ್ ಮೇ 2020 ರಲ್ಲಿ ಮಗ X AE A-XII ಗೆ ಜನ್ಮ ನೀಡಿದರು. X ಗೆ ಈಗ 2 ವರ್ಷ ವಯಸ್ಸು.

ಇದನ್ನೂ ಓದಿ : Libya clashes: ಲಿಬಿಯಾದಲ್ಲಿ ಸಶಸ್ತ್ರ ಗುಂಪುಗಳ ನಡುವೆ ಕಾದಾಟ; 55 ಸಾವು, 146 ಜನರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.