ತಮ್ಮ ಬಳಕೆದಾರರಿಗೆ ಉತ್ತಮ ಸೇವೆಗಳನ್ನು ನೀಡುವ ಉದ್ದೇಶದಿಂದಾಗಿ ವಾಟ್ಸ್ ಆ್ಯಪ್ ಅನೇಕ ಹೊಸ ಫೀಚರ್ಗಳನ್ನು ಪರಿಚಯಿಸುತ್ತಿದೆ. ಜಗತ್ತಿನಾದ್ಯಂತ ಅತಿಹೆಚ್ಚು ಜನರು ಈ ಆ್ಯಪ್ಗಳನ್ನು ಬಳಕೆ ಮಾಡಿದರೂ ಈ ಅನೇಕ ಹೊಸ ಫೀಚರ್ಗಳಿಗೆ ಬಹುತೇಕ ಬಳಕೆದಾರರಿಗೆ ಅರಿವೇ ಇರುವುದಿಲ್ಲ. ಅಂತಹ ಸೇವೆಗಳು ಯಾವುದು ಎಂಬುದರ ಮಾಹಿತಿ ಇಲ್ಲಿದೆ
ಪ್ರತಿಯೊಂದು ಸ್ಮಾರ್ಟ್ ಫೋನ್ಗಳಲ್ಲಿ ಮೇಸೆಂಜಿಂಗ್ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ಇದ್ದೇ ಇರುತ್ತದೆ. ಸಂದೇಶ, ಚಾಟ್ ಅಥವಾ ಮೀಡಿಯಾ ಫೈಲ್ಗಳನ್ನು ತಕ್ಷಣಕ್ಕೆ ಕಳುಹಿಸಲು ಬಳಕೆದಾರರು ಕೂಡ ವಾಟ್ಸ್ಆ್ಯಪ್ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೇ ಗ್ರೂಪ್ ಚಾಟ್ಗಳಂತ ಫನ್ ಚಾಟ್ಗಳಿಗೆ ಇದು ಪ್ರಧಾನ ಆದ್ಯತೆಯಾಗಿದೆ. ಇನ್ನು ವಾಟ್ಸ್ಆ್ಯಪ್ ನಂಬರ್ 65536ರ ವಿಶೇಷತೆ ಎನು ಎಂಬುದು ನಿಮಗೆ ತಿಳಿದಿದೆಯಾ. ತನ್ನ ಯೂಸರ್ ಫ್ರೆಂಡ್ಲಿ ಫೀಚರ್ನಿಂದಲೇ ಜಗತ್ತಿನಾದ್ಯಂತ ಯಾವ ಕಾರಣಕ್ಕೆ ಪ್ರಖ್ಯಾತವಾಗಿದೆ ಎಂಬುದು ಗೊತ್ತಾ?
65,536ರ ಗುಟ್ಟು: ವಾಟ್ಸ್ಆ್ಯಪ್ನಲ್ಲಿ ಯಾವುದೇ ಮೀಡಿಯಾ ಫೈಲ್ಗಳನ್ನು ಕಳುಹಿಸಲು ಒಂದು ಮಿತಿ ಇದೆ. ಅದರೂ ಟೆಕ್ಸ್ಟ್ ಆಗಿರಲಿ ಅಥವಾ ಫೋಟೋ, ವಿಡಿಯೋ, ಆಡಿಯೋ ಅಥವಾ ಇತರ ದಾಖಲೆ ಆಗಿರಲಿ. ಈ ಮಿತಿ ಹೊರತಾಗಿ ನೀವು ಯಾವುದನ್ನು ವಾಟ್ಸ್ಆ್ಯಪ್ ಮೂಲಕ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ವಾಟ್ಸ್ಆ್ಯಪ್ನಲ್ಲಿ 65,536 ಕ್ಯಾರಕ್ಟರ್ಗಿಂತ ಹೆಚ್ಚಿನದನ್ನು ಕಳುಹಿಸಲು ಸಾಧ್ಯವಿಲ್ಲ. 65,536ಕ್ಕಿಂತ ಹೆಚ್ಚಿನ ಕ್ಯಾರೆಕ್ಟರ್ಗಳನ್ನು ಟೈಪ್ ಮಾಡಿ ಕಳುಹಿಸಿದರೆ, ಅದು ಕಳುಹಿಸುವುದು ಕೇವಲ 65,536 ಕ್ಯಾರೆಕ್ಟರ್ ಉಳಿದವು ಅಲ್ಲಿಯೇ ನಿಂತು ಹೋಗುತ್ತದೆ.
ಆ್ಯಪ್ನಲ್ಲಿ ಮೀಡಿಯಾ ಕಳುಹಿಸಲು ಇರುವ ನಿಯಮಗಳು ಹೀಗಿದೆ: ವಾಟ್ಸ್ಆ್ಯಪ್ನಲ್ಲಿ ಏಕಕಾಲದಲ್ಲಿ 30 ಫೋಟೋಗಳನ್ನು ಕಳುಹಿಸಬಹುದು. ಇದಾದ ಬಳಿಕ ನೀವು ಮತ್ತೆ ಫೋಟೋ ಕಳುಹಿಸಲು ಮುಂದಾದರೆ, ಅದು ಸಾಧ್ಯವಾಗುವುದಿಲ್ಲ. ಅದೇ ರೀತಿ ವಿಡಿಯೋದಲ್ಲೂ ಕೂಡ. ವಿಡಿಯೋಗಳನ್ನು ಕೂಡ ಏಕಕಾಲಕ್ಕೆ 30ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಪ್ರತಿಯೊಂದು ವಿಡಿಯೋ ಕೂಡ 16 ಎಂಬಿಗಿಂತ ಹೆಚ್ಚಿನ ಸೈಜ್ ಇರಬಾರದು. ಕ್ಯಾಮೆರಾದ ವಿಡಿಯೋಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸುವುದಾದರೆ ಅದರ ಮಿತಿ 16 ಎಂಬಿಗಿಂತ ಹೆಚ್ಚಿರಬಾರದು.
ಡಾಕ್ಯುಮೆಂಟ್ ವಿಚಾರದಲ್ಲಿ ಈ ಹಿಂದೆ ಕೇವಲ 100 ಎಂಬಿಗಳನ್ನು ಕಳುಹಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಸದ್ಯ ಇದರ ಮಿತಿಯನ್ನು ವಾಟ್ಸ್ಆ್ಯಪ್ ಹೆಚ್ಚಿಸಲಾಗಿದೆ. ಈಗ ವಾಟ್ಸ್ಆ್ಯಪ್ ಮೂಲಕ 2 ಜಿಬಿಗಿಂತ ಹೆಚ್ಚಿನ ಡಾಕ್ಯುಮೆಂಟ್ ಅನ್ನು ಕಳುಹಿಸುವ ಅವಕಾಶ ನೀಡಲಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕತೆ ಬಳಿಕ ಜನರು ಮನೆಯಲ್ಲಿ ಹೆಚ್ಚಾಗಿರುವ ಸಂದರ್ಭ ಉಂಟಾಯಿತು. ಈ ವೇಳೆ ವಾಟ್ಸ್ಆ್ಯಪ್ ವಿಡಿಯೋಗಳನ್ನು ಸಂಪರ್ಕಕ್ಕೆ ಬಳಸಲಾಯಿತು. ಜಗತ್ತಿನಾದ್ಯಂತ ವಾಟ್ಸ್ಆ್ಯಪ್ ಮೂಲಕ ವಾಯ್ಸ್ ಮತ್ತು ವಿಡಿಯೋ ಕಾಲ್ಗಳನ್ನು ಮಾಡುವವರಿಗೆ ಅನುಕೂಲವಾಗಲು ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಹಿಂದೆ ಇದರ ವಿಡಿಯೋ ಕಾಲ್ನಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಭಾಗಿಯಾಗಬಹುದಾಗಿದ್ದು. ಇದೀಗ ಇದರ ಸಂಖ್ಯೆಯನ್ನು ಎಂಟಕ್ಕೆ ಏರಿಸಲಾಗಿದೆ. ಸಾಂಕ್ರಾಮಿಕತೆ ಹಿನ್ನೆಲೆ ಜನರು ದೂರದಿಂದಲೇ ಸಂಪರ್ಕದಿಂದ ಇರಲು ಉತ್ತಮ ಅನುಭವ ಪಡೆಯಲು ಇದರ ಮಟ್ಟವನ್ನು ಹೆಚ್ಚಿಸಲಾಗಿದೆ. ಇದು ಎಲ್ಲ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಈ ಫೀಚರ್ ಸೌಲಭ್ಯವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: ಗೂಗಲ್ ಮೀಟ್ ಹೊಸ ಅಪ್ಡೇಟ್: ಸ್ಪೀಕರ್ ನೋಟ್ಸ್ ಕಾಣಿಸುವ ಫೀಚರ್ ಅಳವಡಿಕೆ