ETV Bharat / science-and-technology

ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಜೆಲ್ ಆವಿಷ್ಕಾರ - ಮೂರು ಪಟ್ಟು ವೇಗವಾಗಿ ಮಧುಮೇಹ ಗಾಯ

ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಚಿಕಿತ್ಸಾ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.

Scientists create magnetic gel that heals diabetic wounds 3x faster

author img

By ETV Bharat Karnataka Team

Published : Oct 22, 2023, 6:21 PM IST

ನವದೆಹಲಿ: ಮಧುಮೇಹಿಗಳ ಗಾಯವನ್ನು ಬೇಗನೆ ಗುಣಪಡಿಸುವ ಜೆಲ್ ಒಂದನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಈ ಜೆಲ್ ಗಾಯವನ್ನು ಬೇಗನೆ ಗುಣಪಡಿಸುವುದು ಮಾತ್ರವಲ್ಲದೆ ಗಾಯ ಮತ್ತೆ ಮರುಕಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಈ ಮೂಲಕ ಅಂಗಛೇದನಗಳ ಪ್ರಮಾಣವನ್ನು ಈ ಜೆಲ್ ಕಡಿಮೆಗೊಳಿಸುವ ಭರವಸೆ ವ್ಯಕ್ತಪಡಿಸಲಾಗಿದೆ.

ಈ ಚಿಕಿತ್ಸೆಯು ಚರ್ಮದ ಕೋಶಗಳನ್ನು ಹೊಂದಿರುವ ಹೈಡ್ರೋಜೆಲ್ ನೊಂದಿಗೆ ಮೊದಲೇ ಲೋಡ್ ಮಾಡಲಾದ ಬ್ಯಾಂಡೇಜ್ ಹಚ್ಚುವುದನ್ನು ಮತ್ತು ಇದರಲ್ಲಿ ಕಾಂತೀಯ ಕಣಗಳನ್ನು ಬಳಸುವಿಕೆಯನ್ನು ಒಳಗೊಂಡಿರುತ್ತದೆ ಎಂದು ಇದನ್ನು ತಯಾರಿಸಿದ ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ (ಎನ್ ಯುಎಸ್) ಸಂಶೋಧಕರು ಹೇಳಿದ್ದಾರೆ.

ವೈಜ್ಞಾನಿಕ ಜರ್ನಲ್ ಅಡ್ವಾನ್ಸಡ್ ಮೆಟೀರಿಯಲ್ಸ್​ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮ್ಯಾಗ್ನೆಟಿಕ್ ಪ್ರಚೋದನೆಯೊಂದಿಗೆ ಸಂಯೋಜಿಸಲಾದ ಚಿಕಿತ್ಸೆಯು ಪ್ರಸ್ತುತ ಸಾಂಪ್ರದಾಯಿಕ ವಿಧಾನಗಳಿಗಿಂತ ಮೂರು ಪಟ್ಟು ವೇಗವಾಗಿ ಮಧುಮೇಹ ಗಾಯಗಳನ್ನು ಗುಣಪಡಿಸುತ್ತದೆ ಎಂದು ಲ್ಯಾಬ್ ಪರೀಕ್ಷೆಗಳು ತೋರಿಸಿವೆ.

"ನಮ್ಮ ತಂತ್ರಜ್ಞಾನವು ಮಧುಮೇಹ ಗಾಯಗಳಿಗೆ ಸಂಬಂಧಿಸಿದ ಅನೇಕ ನಿರ್ಣಾಯಕ ಅಂಶಗಳನ್ನು ಪರಿಹರಿಸುತ್ತದೆ. ಏಕಕಾಲದಲ್ಲಿ ಗಾಯದ ಪ್ರದೇಶದಲ್ಲಿ ಹೆಚ್ಚಿದ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುತ್ತದೆ, ಗಾಯದ ಬಳಿ ಸುಪ್ತ ಚರ್ಮದ ಕೋಶಗಳನ್ನು ಸಕ್ರಿಯಗೊಳಿಸುತ್ತದೆ, ಹಾನಿಗೊಳಗಾದ ರಕ್ತನಾಳಗಳನ್ನು ಪುನಃಸ್ಥಾಪಿಸುತ್ತದೆ ಮತ್ತು ಗಾಯದೊಳಗಿನ ಅಡ್ಡಿಪಡಿಸಿದ ನಾಳೀಯ ಜಾಲವನ್ನು ಸರಿಪಡಿಸುತ್ತದೆ" ಎಂದು ತಂಡದ ನೇತೃತ್ವ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಆಂಡಿ ಟೇ ವಿವರಿಸಿದರು.

ಪ್ರಸ್ತುತ, ಜಾಗತಿಕವಾಗಿ ಅರ್ಧ ಶತಕೋಟಿಗೂ ಹೆಚ್ಚು ಜನ ಮಧುಮೇಹದಿಂದ ಬದುಕುತ್ತಿದ್ದಾರೆ ಮತ್ತು ಈ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಕಾಲು ಹುಣ್ಣುಗಳಂತಹ ದೀರ್ಘಕಾಲದ ಮಧುಮೇಹ ಗಾಯಗಳು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗಿ ಮಾರ್ಪಟ್ಟಿವೆ. ಪ್ರತಿ ವರ್ಷ, ವಿಶ್ವಾದ್ಯಂತ ಸುಮಾರು 9.1 ರಿಂದ 26.1 ಮಿಲಿಯನ್ ಮಧುಮೇಹ ಕಾಲು ಹುಣ್ಣು ಪ್ರಕರಣಗಳು ಕಂಡು ಬರುತ್ತವೆ ಮತ್ತು ಮಧುಮೇಹ ಹೊಂದಿರುವ ಸುಮಾರು 15 ರಿಂದ 25 ಪ್ರತಿಶತದಷ್ಟು ರೋಗಿಗಳು ತಮ್ಮ ಜೀವಿತಾವಧಿಯಲ್ಲಿ ಮಧುಮೇಹ ಕಾಲು ಹುಣ್ಣಿನ ಸಮಸ್ಯೆ ಎದುರಿಸುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಗಾಯ ಗುಣಪಡಿಸುವ ಜೆಲ್, ಕೆರಾಟಿನೊಸೈಟ್​ಗಳು (ಚರ್ಮದ ದುರಸ್ತಿಗೆ ಅಗತ್ಯ) ಮತ್ತು ಫೈಬ್ರೊಬ್ಲಾಸ್ಟ್ (ಸಂಪರ್ಕ ಅಂಗಾಂಶದ ರಚನೆಗೆ) ಮತ್ತು ಸಣ್ಣ ಕಾಂತೀಯ ಕಣಗಳು ಹೀಗೆ ಎರಡು ರೀತಿಯ ಎಫ್​ಡಿಎ ಅನುಮೋದಿತ ಚರ್ಮದ ಕೋಶಗಳಿಂದ ತಯಾರಿಸಲ್ಪಟ್ಟಿದೆ.

ಇದನ್ನೂ ಓದಿ : ವಿಟಮಿನ್​ ಬಿ12 ಕೊರತೆ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.