ETV Bharat / science-and-technology

ಚುನಾವಣೆಗಳ ಮೇಲೆ ಡೀಪ್‌ಫೇಕ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಬೆದರಿಕೆ: ಬ್ರಿಟನ್​ ಭದ್ರತಾ ಸಂಸ್ಥೆ ಆತಂಕ

ಡೀಪ್​ಫೇಕ್​ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿವೆ. ಚುನಾವಣೆಗಳ ಮೇಲೂ ಪರಿಣಾಮ ಬೀರುವ ಬಗ್ಗೆ ಬ್ರಿಟನ್​ನ ಭದ್ರತಾ ಸಂಸ್ಥೆಯೊಂದು ಆತಂಕ ವ್ಯಕ್ತಪಡಿಸಿದೆ.

ಕೃತಬುದ್ಧಿಮತ್ತೆ ಚುನಾವಣೆಗಳ ಮೇಲೆ ದಾಳಿ
ಕೃತಬುದ್ಧಿಮತ್ತೆ ಚುನಾವಣೆಗಳ ಮೇಲೆ ದಾಳಿ
author img

By ETV Bharat Karnataka Team

Published : Nov 14, 2023, 5:51 PM IST

ಲಂಡನ್: ಆಧುನಿಕ ತಂತ್ರಜ್ಞಾನವು ನೆರವಿಗಿಂತ ಅಪಾಯಕ್ಕೆ ಹೆಚ್ಚಿನ ದಾರಿ ಮಾಡಿಕೊಡುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್​ಫೇಕ್​ನಂತಹ ತಂತ್ರಜ್ಞಾನ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇವುಗಳ ಬಳಕೆ ಮಾಡಿಕೊಂಡು ನಡೆಯುವ ಸೈಬರ್​ ದಾಳಿಯನ್ನು ಪತ್ತೆ ಮಾಡುವುದೂ ಕಷ್ಟ ಎಂದು ಬ್ರಿಟನ್‌ನ ಸೈಬರ್ ಸೆಕ್ಯುರಿಟಿ ಏಜೆನ್ಸಿ ಮಂಗಳವಾರ ಆತಂಕದ ವಿಚಾರ ಹಂಚಿಕೊಂಡಿದೆ.

ದೇಶದ ರಾಷ್ಟ್ರೀಯ ಚುನಾವಣೆಗಳ ಮೇಲೆ ಈ ತಂತ್ರಾಂಶಗಳು ಅಪಾಯ ತರಲಿವೆ. ಇವುಗಳನ್ನು ಬಳಸಿಕೊಂಡು ನಡೆಯುವ ಸೈಬರ್ ದಾಳಿಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ. ಈ ವರ್ಷ ವಿದ್ಯುತ್, ನೀರು ಮತ್ತು ಇಂಟರ್ನೆಟ್ ನೆಟ್‌ವರ್ಕ್‌ಗಳಂತಹ ಮೂಲ ಸೌಕರ್ಯಕ್ಕೆ ಇವುಗಳು ಹೊಸ ಬೆದರಿಕೆಯಾಗಿ ಹೊರಹೊಮ್ಮಿವೆ ಎಂದು ಭದ್ರತಾ ಸಂಸ್ಥೆ ಮಂಗಳವಾರ ಹೇಳಿದೆ.

ಭದ್ರತೆಗೆ ಬೆದರಿಕೆ: ಸೈಬರ್ ಸೆಕ್ಯುರಿಟಿ ಏಜೆನ್ಸಿಯು ಬ್ರಿಟನ್‌ನ ಮುಖ್ಯ ಭದ್ರತಾ ಸಂಸ್ಥೆಯಾದ ಸೈಬರ್‌ಸ್ಪಿಯೋನೇಜ್​ನ ಭಾಗವಾಗಿದೆ. ತನ್ನ ವಿಮರ್ಶಾ ತನಿಖೆಯಲ್ಲಿ ಹೊಸ ವರ್ಗದ ಸೈಬರ್ ವಿರೋಧಿಗಳನ್ನು ಕಂಡು ಕೊಂಡಿದೆ. ಫ್ರಾಕ್ಸಿಗಳು ನಡೆಸುವ ದಾಳಿಯು ರಷ್ಯಾದ ಆಕ್ರಮಣ ಪರವಾಗಿವೆ. ಇವರು ಉಕ್ರೇನ್‌ ಮೇಲೆ ಸೈದ್ಧಾಂತಿಕ ಮತ್ತು ಆರ್ಥಿಕತೆಯ ಮೇಲೆ ದಾಳಿಗೆ ಒಲವಿದೆ ಎಂದು ಸಂಸ್ಥೆ ಹೇಳಿದೆ.

ಸೈಬರ್​ ದಾಳಿಗಳು ಬ್ರಿಟಿಷ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿವೆ. ಇಂಗ್ಲೆಂಡ್​​ನ ಹಿತಾಸಕ್ತಿಗಳ ವಿರುದ್ಧ ಹೋರಾಡಲು ರಷ್ಯಾದ ಅಪರಾಧಿಗಳ ಜೊತೆಗೆ ಚೀನೀ ಸೈಬರ್​ ವಂಚಕರು ಸೇರಿಕೊಂಡು ನಮ್ಮ ಭದ್ರತೆಗೆ ಬೆದರಿಕೆ ಹಾಕುವ ಕಾರ್ಯತಂತ್ರ ರೂಪಿಸಿದ್ದಾರೆ. ಇದು ಗಮನಾರ್ಹವಾಗಿದೆ ಎಂದು ಅದು ಹೇಳಿದೆ.

ದಾಳಿಗೆ ಪ್ರತಿದಾಳಿ ರೂಪಿಸಬೇಕು: ಬ್ರಿಟನ್‌ನ ಎಂಐ5 ಮತ್ತು ಎಂಐ6 ಗುಪ್ತಚರ ಏಜೆನ್ಸಿಗಳೂ ಈ ಬಗ್ಗೆ ಎಚ್ಚರಿಕೆಗಳನ್ನು ರವಾನಿಸಿದೆ. ಚೀನಾದ ಟೆಕ್​ ದಾಳಿಯು ಇಂಗ್ಲೆಂಡಿನ ಭದ್ರತೆಗೆ ಸವಾಲಾಗಿದೆ. ನಮ್ಮ ಸೈಬರ್​ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ನಮ್ಮ ಪ್ರಯತ್ನಗಳು ವೇಗವಾಗದಿದ್ದಲ್ಲಿ, ಚೀನಾ ಸೈಬರ್‌ ದಾಳಿಗಳನ್ನು ಎದುರಿಸಬೇಕಾದ ಅಪಾಯಕ್ಕೆ ತುತ್ತಾಗಲಿದ್ದೇವೆ ಎಂದು ಅದು ಆತಂಕ ವ್ಯಕ್ತಪಡಿಸಿದೆ.

2025 ರೊಳಗೆ ನಡೆಯಲಿರುವ ಬ್ರಿಟನ್​ನ ರಾಷ್ಟ್ರೀಯ ಚುನಾವಣೆ ಸೇರಿದಂತೆ, ಇತರ ಚುನಾವಣೆಗ ಮೇಲೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ದೊಡ್ಡ ಬೆದರಿಕೆಯಾಗಿದೆ ಎಂಬುದನ್ನು ವರದಿಯು ಗಮನಾರ್ಹವಾಗಿ ನಮೂದಿಸಿದೆ. ಹಳೆಯ ಚುನಾವಣಾ ವಿಧಾನವು ಹ್ಯಾಕರ್‌ಗಳಿಗೆ ಮತದಾನಕ್ಕೆ ಅಡ್ಡಿಪಡಿಸಲು ಕಷ್ಟ. ಹೊಸ ಪದ್ಧತಿಯಲ್ಲಿ ಡೀಪ್‌ಫೇಕ್ ವೀಡಿಯೊಗಳು ಮತ್ತು ಹೈಪರ್ ರಿಯಲಿಸ್ಟಿಕ್ ಬಾಟ್‌ಗಳು ಪ್ರಚಾರದ ಸಮಯದಲ್ಲಿ ತಪ್ಪು ಮಾಹಿತಿಯನ್ನು ಹರಡುವ ಸಾಧ್ಯತೆ ಇದೆ ಎಂದು ಏಜೆನ್ಸಿ ಹೇಳಿದೆ.

ಇದನ್ನೂ ಓದಿ: ಬ್ರಿಟಿಷ್​ ರಾಜಕೀಯದಲ್ಲಿ ಸಂಚಲನ: ರಿಷಿ ಸುನಕ್ ವಿರುದ್ಧ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.